ಚೆಯ್ಯಂಡಾಣೆ, ನ. ೭: ಕೊಂಡAಗೇರಿಯ ಹಯಾತುಲ್ ಇಸ್ಲಾಂ ಮದರಸ ಸಭಾಂಗಣದಲ್ಲಿ ವಾರ್ಷಿಕ ರಿಫಾಇಯ್ಯ ರಾತೀಬ್ ಕಾರ್ಯಕ್ರಮ ನಡೆಯಿತು. ರಾತೀಬ್ ಸಂಘದ ಖಲ್ಫ ಯಾಹ್ಯ ಹಾಜಿ ರಾತೀಬ್‌ಗೆ ನೇತೃತ್ವ ವಹಿಸಿದರು.

ಕೊಂಡAಗೇರಿ ಮುದರ್ರಿಸ್ ಜುನೈದ್ ಸಖಾಫಿ ಜೀರ್ಮುಕ್ಕಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಕೊಂಡAಗೇರಿ ಖತೀಬ್ ಅಬೂಬಕ್ಕರ್ ಝುಹ್ರಿ ಎಡಕ್ಕರ ಮುಖ್ಯ ಭಾಷಣ ಮಾಡಿದರು.

ನಝಿರ್ ನಿಜಾಮಿ (ರಾತೀಬ್ ಖಲ್ಫ) ಪ್ರಾಸ್ತಾವಿಕವಾಗಿ ನುಡಿಯಾಡಿದರು. ಸಯ್ಯದ್ ಅಸ್ಸಯ್ಯಿದ್ ಖಮರ್ ಅಲಿ ತಂಗಳ್ ಅಲ್ ಬುಖಾರಿ ಕಾಸರಗೋಡು ರಾತೀಬಿನ ಮಹತ್ವದ ಕುರಿತು ವಿವರಿಸಿ ಪ್ರಾರ್ಥನೆ ನೆರವೇರಿಸಿದರು.

ವೇದಿಕೆಯಲ್ಲಿ ಕೊಂಡAಗೇರಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಕೆ.ಕೆ. ಯೂಸುಫ್ ಹಾಜಿ, ತಕ್ಕ ಮುಖ್ಯಸ್ಥರಾದ ಪಿ.ಎ. ಕುಂಜಾಹ್ಮದ್ ಮುಸ್ಲಿಯಾರ್, ಎಂ.ಐ. ಇಕ್ಬಾಲ್, ಕೆ.ಎಂ. ಶಾದುಲಿ, ಮುಹ್ಯದ್ದೀನ್ ರಾತೀಬ್ ಖಲ್ಫ ಅಬ್ದುಲ್ ಲತೀಫ್ ಮುಸ್ಲಿಯಾರ್, ಹಾರಿಸ್ ಸಅದಿ, ರಿಪಾಇಯ್ಯ ರಾತೀಬ್ ಸಂಘದ ಅಧ್ಯಕ್ಷ ಪಿ.ಎ. ಆಲಿ ಮತ್ತಿತರರು ಉಪಸ್ಥಿತರಿದ್ದರು.