ಅನಿಲ್ ಎಚ್.ಟಿ.
ಮಡಿಕೇರಿ, ನ. ೬: ಕೊಡಗಿನ ಹಾಕಿ ಸಾಮ್ರಾಟ ಎಂದೇ ಖ್ಯಾತರಾಗಿದ್ದ ಸಿ.ವಿ.ಶಂಕರ್ ಅಥವಾ ಶಂಕರ್ ಸ್ವಾಮಿ ಅವರು ನಿಧನರಾಗಿ ೮ ವರ್ಷಗಳೇ ಕಳೆದಿವೆ.
ಶಂಕರ್ ಅವರ ಸ್ಮರಣಾರ್ಥ ಅವರ ಕುಟುಂಬ ವರ್ಗ ೧೫ ವರ್ಷಗಳ ಹಿಂದೆಯೇ ನಗರದ ಕಾವೇರಿ ಹಾಲ್ ಬಳಿಯಲ್ಲಿ ೧೯ ಸೆಂಟ್ ಜಾಗವನ್ನು ನಗರಸಭೆಗೆ ಉದಾರವಾಗಿ ನೀಡಿತ್ತು. ಈ ಜಾಗ ನೀಡಿಕೆಯಿಂದಾಗಿ ಕಾವೇರಿ ಹಾಲ್ ಬಳಿಯಿಂದ ಹಿಲ್ ರಸ್ತೆಗೆ ಸಂಪರ್ಕ ಕಲ್ಪಿಸಲು ಸುಲಭ ಸಾಧ್ಯವಾಯಿತು.
ಹೀಗಿದ್ದರೂ ಈ ರಸ್ತೆಯನ್ನು ನಗರಸಭೆ ಸರಿಯಾಗಿ ನಿರ್ವಹಿಸುತ್ತಿಲ್ಲ ಎಂಬ ಅಸಮಧಾನ ಸಾರ್ವಜನಿಕ ವಲಯದಲ್ಲಿ ಮಾತ್ರವಲ್ಲದೇ ಸಿ.ವಿ.ಶಂಕರ್ ಕುಟುಂಬಸ್ಥರಲ್ಲಿಯೂ ವ್ಯಕ್ತವಾಗಿದೆ. ಈ ಸಂಪರ್ಕ ರಸ್ತೆಯಲ್ಲಿ ಹಲವು ತಿಂಗಳಿನಿAದ ಬೃಹದಾಕಾರದ ಗುಂಡಿ ಕಂಡುಬAದಿದೆ. ಈ ಗುಂಡಿಗೆ ರಸ್ತೆಯಲ್ಲಿ ಸಾಗುವ ಅನೇಕ ವಾಹನಗಳು ಬಿದ್ದು ಹಾನಿಗೊಳಗಾಗುತ್ತಿತ್ತು. ಗುಂಡಿ ಮುಚ್ಚಿ, ರಸ್ತೆ ಸರಿಪಡಿಸಿ ಎಂದು ಸಿ.ವಿ.ಶಂಕರ್ ಅವರ ಪುತ್ರ ಸಿ.ಎಸ್. ಗುರುದತ್ ಅನೇಕ ಬಾರಿ ನಗರಸಭೆಗೆ ಮನವಿ ಮಾಡಿದ್ದರೂ ನಗರಸಭೆ ತಲೆಕೆಡಿಸಿಕೊಳ್ಳಲೇ ಇಲ್ಲ. ಇದರಿಂದ ತೀವ್ರ ಬೇಸರಗೊಂಡ ಗುರುದತ್ ಸೋಮವಾರ ಕಾರ್ಮಿಕರ ಮೂಲಕ ಸ್ವಂತ ಖರ್ಚಿನಲ್ಲಿ ಗುಂಡಿ ಮುಚ್ಚವ ಕಾರ್ಯಕ್ಕೆ ಮುಂದಾದರು.
ಕೋಟ್ಯAತರ ಮೌಲ್ಯದ ಜಾಗವನ್ನು ನಗರಸಭೆಗೆ ನೀಡಿದ್ದೇವೆ. ಹೀಗಿದ್ದರೂ ನಮ್ಮ ಯಾವುದೇ ಮನವಿಗೆ ನಗರಸಭೆ ಸ್ಪಂದಿಸುತ್ತಿಲ್ಲ. ಹೀಗಾದಲ್ಲಿ ನಗರಸಭೆಗೆ ಯಾರು ಯಾಕಾಗಿ ಭೂದಾನ ಮಾಡಬೇಕು? ಇಷ್ಟೊಂದು ಮೌಲ್ಯದ ಜಾಗವನ್ನು ದಾನವಾಗಿ ನೀಡಿದ ನಮಗೆ uಟಿಜeಜಿiಟಿeಜ ಇಂಥ ಸ್ಥಿತಿಯಾದರೆ ಬೇರೆ ದಾನಿಗಳ ಕಥೆ ಹೇಗಿರಬೇಡ ಎಂದು ಬೇಸರ ವ್ಯಕ್ತಪಡಿಸಿದರು.
ಅಂದAತೆ, ಕಾವೇರಿ ಹಾಲ್ನಿಂದ ಹಿಲ್ರೋಡ್ಗೆ ಸಾಗುವ ರಸ್ತೆಗೆ ಯಾವ ರಸ್ತೆ ಎಂದು ಕರೆಯಬೇಕೆಂದೇ ತಿಳಿಯುತ್ತಿಲ್ಲ. ಯಾಕೆಂದರೆ ಇನ್ನೂ ಈ ರಸ್ತೆಗೆ ನಾಮಕರಣ ಮಾಡಲೇ ಇಲ್ಲ.
ಭೂದಾನ ಮಾಡುವಾಗಿನ ಕರಾರು ಪ್ರಕಾರ, ಈ ರಸ್ತೆಗೆ ಸಿ.ವಿ.ಶಂಕರ್ ರಸ್ತೆ ಎಂದು ನಾಮಕರಣ ಮಾಡಬೇಕಾಗಿತ್ತು. ಆದರೆ ಆಗಿದ್ದ ಪುರಸಭೆಯ ಆಡಳಿತ ಮಂಡಳಿಯಿAದ ಮೊದಲ್ಗೊಂಡು ಅನಂತರದ ಆಡಳಿತಗಾರರು, ಈಗಿನ ನಗರಸಭೆ ಕೂಡ ಸಿ.ವಿ.ಶಂಕರ್ ಹೆಸರಿಡಲು ಮನಸ್ಸು ಮಾಡಿಲ್ಲ. ಕರಾರು ಸಂಬAಧಿತ ದಾಖಲೆ ಎಲ್ಲಿದೆ ಎಂದು ಹುಡುಕಾಡುವ ಪರಿಸ್ಥಿತಿ ತಲೆದೋರಿದೆ.
ಅಂತೆಯೇ, ಮಡಿಕೇರಿಯ ಜಿಲ್ಲಾ ಕ್ರೀಡಾಂಗಣವಾದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿನ ಗ್ಯಾಲರಿಗೂ ಸಿ.ವಿ.ಶಂಕರ್ ಹೆಸರು ನಾಮಕರಣ ಮಾಡುವ ಬಗ್ಗೆ ಬಹಳಷ್ಟು ವರ್ಷಗಳ ಹಿಂದೆಯೇ ತಿಮ್ಮಯ್ಯ ಕ್ರೀಡಾಂಗಣ ನಿರ್ವಹಣಾ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಇನ್ನೂ ಹೆಸರು ನಾಮಕರಣದ ಫಲಕ ಕಂಡುಬAದಿಲ್ಲ. ಇದು ಕೂಡ ಶಂಕರ್ ಕುಟುಂಬಸ್ಥರು ಮತ್ತು ಅಭಿಮಾನಿಗಳ ನೋವಿಗೆ ಕಾರಣವಾಗಿದೆ.
ಸಿ.ವಿ.ಶಂಕರ್ ಕೊಡಗಿನ ಹಾಕಿ ಮತ್ತು ಕ್ರಿಕೆಟ್ ಕ್ರೀಡೆಗೆ ಮಹತ್ತರ ಕೊಡುಗೆ ನೀಡಿದ್ದಾರೆ. ೧೯೫೬ ರಿಂದಲೇ ಮ್ಯಾನ್ಸ್ ಕಾಂಪೌAಡ್ ನಲ್ಲಿ ಮಕ್ಕಳಿಗೆ, ದೊಡ್ಡವರಿಗೆ ಹಾಕಿ ಕ್ರೀಡೆಯ ತರಬೇತಿ ನೀಡತೊಡಗಿದ್ದ ಶಂಕರ್ ಸ್ವಾಮಿ ತರಬೇತಿಯ ಪ್ರಯೋಜನ ಪಡೆದ ನೂರಾರು ಹಾಕಿಪಟುಗಳು ರಾಜ್ಯ, ರಾಷ್ಟಿçÃಯ ಮಟ್ಟದಲ್ಲಿಯೂ ಖ್ಯಾತಿಗೊಂಡಿದ್ದಾರೆ.
ಕೊಡಗು ವಿದ್ಯಾಲಯ ಶಾಲಾ ವಿದ್ಯಾರ್ಥಿಗಳಿಗೆ ಅನೇಕ ವರ್ಷಗಳ ಕಾಲ ಹಾಕಿ ಕ್ರೀಡಾ ತರಬೇತಿ ನೀಡುತ್ತಿದ್ದ ಶಂಕರ್ ಸ್ವಾಮಿ ಮಕ್ಕಳಿಗೆ ನೀತಿಭೋದಕ ಕಥೆಗಳನ್ನೂ ಹೇಳುತ್ತಿದ್ದರು. ಕೊಡಗಿನ ಪತ್ರಿಕೆಗಳಲ್ಲಿ ರಾಮಾಯಣ, ಮಹಾಭಾರತ ಹಾಗೂ ಕ್ರೀಡಾ ಅಂಕಣಕಾರರೂ ಆಗಿದ್ದರು. ತಲೆಗೆ ಚಂದದ ಟೋಪಿಯನ್ನು ಸದಾ ಧರಿಸುತ್ತಿದ್ದ ಶಂಕರ್ ಸ್ವಾಮಿ ಮಡಿಕೇರಿಯ ಕ್ರೀಡಾ ಪ್ರೇಮಿಗಳು ನೆನಪಿನಲ್ಲಿಟ್ಟುಕೊಳ್ಳುವ ಹಸನ್ಮುಖಿ ಕ್ರೀಡಾಗುರು ಆಗಿದ್ದರು.
ಇಂಥವರ ಹೆಸರನ್ನು ರಸ್ತೆಗೆ ನಾಮಕರಣ ಮಾಡಲು ಇಷ್ಟೂ ವರ್ಷ ಬೇಕಾಗಿರುವುದು ಜಡ್ಡುಗಟ್ಟಿದ ವ್ಯವಸ್ಥೆಗೆ ನಿದರ್ಶನವಾಗಿದೆ. ಶಂಕರ್ ಸ್ವಾಮಿ ಅವರಿಂದ ತರಬೇತಿ ಪಡೆದ ಕ್ರೀಡಾಪಟುಗಳು ಕೂಡ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.