ಪೊನ್ನಂಪೇಟೆ, ನ. ೬: ಡೈಮ್ಲರ್ ಇಂಡಿಯಾ ಕಮರ್ಷಿಯಲ್ ವೆಹಿಕಲ್ಸ್ ಪ್ರೆöÊವೇಟ್ ಲಿಮಿಟೆಡ್‌ನ ಲೀಗಲ್ ಮ್ಯಾನೇಜರ್ ಆಗಿರುವ ಪೊನ್ನಂಪೇಟೆ ತಾಲೂಕಿನ ನಾಲ್ಕೇರಿ ಗ್ರಾಮದ ನೆಲ್ಲಿರ ಪಿ. ಬೋಪಯ್ಯ ಅವರು ೨೦೨೩ನೇ ವರ್ಷದ “Iಟಿ-ಊouse ಐegಚಿಟ ಖಿeಚಿm oಜಿ ಣhe ಥಿeಚಿಡಿ- ಒಚಿಟಿuಜಿಚಿಛಿಣuಡಿiಟಿg ಚಿಟಿಜ ಖeಣಚಿiಟ”. ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇತ್ತೀಚೆಗೆ ಅಸೋಸಿಯೇಟೆಡ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟಿç ವತಿಯಿಂದ ಆಯೋಜಿಸಿದ್ದ ನ್ಯಾಷನಲ್ ಲೀಗಲ್ ಎಕ್ಸಲೆನ್ಸ್ ಅವಾರ್ಡ್ಸ್ - ೨೦೨೩ ಈ ಸಮಾರಂಭದಲ್ಲಿ ಕಾನೂನು ಮತ್ತು ನ್ಯಾಯ, ಸಂಸದೀಯ ವ್ಯವಹಾರಗಳು ಮತ್ತು ಸಂಸ್ಕೃತಿ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಎನ್.ಪಿ. ಬೋಪಯ್ಯ ಅವರು ಪ್ರತಿಷ್ಠಿತ ಕಾನೂನು ಸಂಸ್ಥೆಗಳು ಮತ್ತು ಕಚೇರಿಗಳಲ್ಲಿ ವಿವಿಧ ಭಾರತೀಯ ಮತ್ತು ಅಂರ‍್ರಾಷ್ಟಿçÃಯ ಕಾನೂನು ಮತ್ತು ವಾಹನ ಕ್ಷೇತ್ರದ ಕಾನೂನು ವಿಭಾಗದಲ್ಲಿಯೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ನಾಲ್ಕೇರಿ ಗ್ರಾಮದ ನಿವೃತ್ತ ಪ್ರಾಧ್ಯಾಪಕ ದಿ. ನೆಲ್ಲಿರ ಎಂ. ಪೂಣಚ್ಚ ಮತ್ತು ನೀನಾ ಪೂಣಚ್ಚ ದಂಪತಿ ಪುತ್ರ.