ಕೂಡಿಗೆ, ನ. ೬: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಾಳಿ ಹೆಚ್ಚಾಗಿ ಅನೇಕ ಅವಘಡಗಳು ಸಂಭವಿಸಿವೆ. ಅಲ್ಲದೆ ಸಾರ್ವಜನಿಕರು ಬೀದಿ ನಾಯಿಗಳ ಹಿಡಿಯುವಿಕೆಗೆ ಸಂಬAಧಿಸಿದAತೆ ಅನೇಕ ಬಾರಿ ಗ್ರಾಮ ಸಭೆಯಲ್ಲಿ ಚರ್ಚೆ ಆಗಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ೧೬೦ ಕ್ಕೂ ಹೆಚ್ಚು ಬೀದಿ ನಾಯಿಗಳನ್ನು ಸೆರೆ ಹಿಡಿಯಲಾಗಿದೆ.
ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಸಭೆಯಲ್ಲಿ ನಾಯಿಗಳ ಹಾವಳಿ ಬಗ್ಗೆ ಸಾರ್ವಜನಿಕರ ಅರ್ಜಿಗಳ ಬಗ್ಗೆ ಚರ್ಚೆ ನಡೆಸಿ ಸಂಬAಧಿಸಿದವರನ್ನು ಕರೆಸಿ ಹಿಡಿದು ಅರಣ್ಯಕ್ಕೆ ಬಿಡುವ ಯೋಜನೆ ಬಗ್ಗೆ ಪ್ರಸ್ತಾವನೆ ಆದ ನಂತರ ಅಭಿವೃದ್ಧಿ ಅಧಿಕಾರಿ ಕಾರ್ಯೋನ್ಮುಖರಾಗಿದ್ದಾರೆ.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡಿಗೆ ಸರ್ಕಲ್, ಮಲ್ಲೇನಹಳ್ಳಿ, ಮದಲಾಪುರ, ಸೀಗೆಹೊಸೂರು, ಬ್ಯಾಡಗೊಟ್ಟ, ಭುವನಗರಿ ಕೊಪ್ಪಲು, ಹಳೆ ಕೂಡಿಗೆ ಸೇರಿದಂತೆ ಎಲ್ಲಾ ಉಪ ಗ್ರಾಮಗಳಿಗೆ ತೆರಳಿ ನಾಯಿ ಹಿಡಿಯುವ ಮೈಸೂರಿನ ತಂಡದವರು ನಾಯಿಗಳನ್ನು ಹಿಡಿದು ಒಂದು ವಾಹನದಲ್ಲಿ ತುಂಬಿಸಿದರು. ನಂತರ ಅವುಗಳನ್ನು ತಿತಿಮತಿ ಅರಣ್ಯ ಪ್ರದೇಶದಲ್ಲಿ ಬಿಡಲಾಗಿದೆ.