ಚೆಟ್ಟಳ್ಳಿ, ನ. ೪: ಕೈಯಲ್ಲಿ ಸೌಟು ಹಿಡಿದು ಅಡುಗೆ ಮಾಡುತ್ತಿದ್ದವರು ಇಂದು ಬ್ಯಾಟ್ ಬೀಸಿ, ಬೌಲಿಂಗ್ ಮಾಡಿ ಸಂಭ್ರಮಿಸಿದರು, ಸಂಸಾರದ ಜಂಜಾಟದಲ್ಲಿರುತ್ತಿದ್ದ ನಾರಿಯರು ತಮ್ಮ ಕ್ರೀಡಾ ಪ್ರತಿಭೆ ಅನಾವರಣ ಮಾಡಿ ಸೈ ಎನಿಸಿಕೊಂಡರು. ಚೆಟ್ಟಳ್ಳಿಯ ಅವರ್ ಕ್ಲಬ್ ವತಿಯಿಂದ ೨ನೇ ವರ್ಷದ ವಿವಾಹಿತ ಮಹಿಳೆಯರ ಮುಕ್ತ ನಾಕೌಟ್ ಕ್ರಿಕೆಟ್ ಪಂದ್ಯಾಟ ಚೆಟ್ಟಳ್ಳಿ ಪ್ರೌಢಶಾಲಾ ಮೈದಾನದಲ್ಲಿ ನಡೆಯಿತು.

೬ ಓವರ್‌ಗಳ ಪಂದ್ಯಾವಳಿಯಲ್ಲಿ ೨೫ ವರ್ಷ ಮೇಲ್ಪಟ್ಟ ಒಟ್ಟು ೧೫ ವಿವಾಹಿತ ಮಹಿಳೆಯರನ್ನೊಳಗೊಂಡ ತಂಡಗಳು ಭಾಗವಹಿಸಿದ್ದವು. ಅಂತಿಮ ಸುತ್ತಿಗೆ ಪ್ರವೇಶ ಪಡೆದ ಟೀಂ ಮಾಲ್ದಾರೆ ತಂಡ ಹಾಗೂ ಟೀಂ ಮಾಸ್ಟರ್ ಬ್ಲಾಸ್ಟರ್ ತಂಡದ ರೋಚಕ ಹಣಾಹಣಿ ಕೌತುಕ ಮೂಡಿಸಿತು.

ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಮಾಸ್ಟರ್ ಬ್ಲಾಸ್ಟರ್ ತಂಡ ಬ್ಯಾಟಿಂಗ್ ಆಯ್ಕೆ ಮಾಡಿ ನಿಗದಿತ ನಾಲ್ಕು ಓವರುಗಳಿಗೆ ೨೩ರ ಗುರಿಯನ್ನು ಎದುರಾಳಿ ತಂಡಕ್ಕೆ ನೀಡಿತು. ಗುರಿಯನ್ನು ಬೆನ್ನತ್ತಿದ ಮಾಲ್ದಾರೆ ತಂಡ ೨.೩ ಎಸೆತಗಳಲ್ಲಿ ಗೆದ್ದು ಚಾಂಪಿಯನ್ ಪಟ್ಟ ಮುಡಿಗೇರಿಸಿ ಕೊಂಡಿತು. ಮೂರನೇ ಬಹುಮಾನವನ್ನು ಕೋಕೇರಿ ‘ನೀಲೀ ಆಟ್ ಟೀಂ’ ತಂಡ ಪಡೆಯಿತು.

ಮಡಿಕೇರಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಮಂಡೇಪAಡ

ಡಾ. ಪುಷ್ಟ ಕುಟ್ಟಣ್ಣ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿ ಸಮಾಜದಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತಿರುವ ಮಹಿಳೆಯರನ್ನು ಗೌರವದಿಂದ ಕಾಣಬೇಕು. ವಿಶೇಷವಾಗಿ ವಿವಾಹಿತ ಮಹಿಳೆಯರಿಗೆ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಿದ ಚೆಟ್ಟಳ್ಳಿಯ ಅವರ್ ಕ್ಲಬ್ ಕಾರ್ಯವನ್ನು ಶ್ಲಾಘಿಸಿದರು. ಕ್ಲಬ್‌ನ ಅಧ್ಯಕ್ಷೆ ಐಚೆಟ್ಟಿರ ಸುನಿತ ಮಾಚಯ್ಯ ಮಾತನಾಡಿ, ಮಹಿಳೆಯರನ್ನು ಒಟ್ಟು ಸೇರಿಸಿ ೨೦೧೦ರಲ್ಲಿ ಚೆಟ್ಟಳ್ಳಿಯಲ್ಲಿ ಅವರ್ ಕ್ಲಬ್‌ನ್ನು ರಚಿಸಲಾಯಿತು. ತಿಂಗಳಿಗೊಮ್ಮೆ ವಿವಿಧ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಕಳೆದ ಬಾರಿ ಮೊದಲ ವರ್ಷದ ಮಹಿಳಾ ಕ್ರಿಕೆಟ್ ಪಂದ್ಯಾವಳಿಯನ್ನು ನಡೆಸಲಾಗಿದ್ದು, ಉತ್ತಮ ಸ್ಪಂದನ ದೊರೆತ ಹಿನ್ನೆಲೆ ಈ ಬಾರಿ ಎರಡನೇ ವರ್ಷದ ಪಂದ್ಯಾವಳಿ ನಡೆಸಲು ಸಾಧ್ಯವಾಯಿತೆಂದರು. (ಮೊದಲ ಪುಟದಿಂದ) ಉಪಾಧ್ಯಕ್ಷೆ ಮುಳ್ಳಂಡ ಶೋಭಾ ಚಂಗಪ್ಪ, ಕಾರ್ಯದರ್ಶಿ ಮನೆಯಪಂಡ ಅಂಜಲಿ, ಖಜಾಂಜಿ ಮುಳ್ಳಂಡ ಮಾಯಮ್ಮ ತಮ್ಮಯ್ಯ, ಮಾಜಿ ಅಧ್ಯಕ್ಷೆÀ ಕೊಂಗೇಟಿರ ದೇಚು ಮುದ್ದಯ್ಯ ವೇದಿಕೆಯಲ್ಲಿದ್ದರು. ಮೂಡೆರ ಧರಣಿ ಪ್ರಾರ್ಥಿಸಿ, ಕೊಂಗAಡ ವಿಜಯ ಮುತ್ತಣ್ಣ ಅತಿಥಿಗಳನ್ನು ಪರಿಚಯಿಸಿ, ಕೊಂಗೇಟಿರ ವೀಣಾ ಅಪ್ಪಣ್ಣ ವಂದಿಸಿ, ಕೇಟೋಳಿರ ವೀಣಾ ಚಂಗಪ್ಪ ನಿರೂಪಿಸಿದರು.

ಪ್ರಥಮ ಬಹುಮಾನ ತಂಡಕ್ಕೆ ರೂ. ೨೧ಸಾವಿರ ನಗದು ಹಾಗೂ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ತಂಡ ರೂ. ೧೧ ಸಾವಿರ ನಗದು ಹಾಗೂ ಟ್ರೋಫಿ ಪಡೆದರು. ಮೂರನೇ ಬಹುಮಾನ ಪಡೆದ ತಂಡ ರೂ. ೬ ಸಾವಿರ ನಗದು ಹಾಗೂ ಟ್ರೋಫಿ ಪಡೆದುಕೊಂಡಿತು.

ಟೀಂ ಮಾಸ್ಟರ್ ಬ್ಲಾಸ್ಟರ್ ತಂಡದ ಭಾರತಿ ಉತ್ತಮ ಬೌಲರ್, ಉತ್ತಮ ಬ್ಯಾಟರ್À ಪ್ರಶಸ್ತಿಯನ್ನು ಟೀಂ ಮಾಲ್ದಾರೆ ತಂಡದ ಸುಜಿತಾ, ಟೀಂ ಸಂಭ್ರಮ ತಂಡದ ಅಂಜನಾ ಹೆಚ್ಚು ರನ್ ಗಳಿಸಿದ ಪ್ರಶಸ್ತಿ, ಅತ್ಯುತ್ತಮ ವಿಕೆಟ್ ಕೀಪರ್ ಟೀಂ ಸಂಭ್ರಮ ತಂಡದ ನಿಶಾ, ಟೀಂ ಸಂಭ್ರಮದ ಲೀಲಾವೇಣು ಹಿರಿಯ ಆಟಗಾರ್ತಿ ಬಹುಮಾನ ಪಡೆದರು.

ಪೊಮ್ಮಕ್ಕಡ ಕೂಟ ಮಡಿಕೇರಿ ಹಾಗೂ ಚೆಟ್ಟಳ್ಳಿಯ ಅವರ್ ಕ್ಲಬ್ ತಂಡಕ್ಕೆ ಉತ್ತಮ ಚಿಯರ್ ಗರ್ಲ್ಸ್ ಬಹುಮಾನ ನೀಡಲಾಯಿತು.

- ಪುತ್ತರಿರ ಕರುಣ್ ಕಾಳಯ್ಯ