ವೀರಾಜಪೇಟೆ, ನ. ೪: ಅರಣ್ಯ ಪ್ರದೇಶದಲ್ಲಿ ಜಿಂಕೆಯನ್ನು ಬೇಟಿಯಾಡಿ ಕೊಂದು ಅದರ ಮಾಂಸ ಮಾರಾಟಕ್ಕೆ ಯತ್ನಿಸಿದ ಈರ್ವರನ್ನು ಬಂಧಿಸ ಲಾಗಿದ್ದು, ಪರಾರಿ ಯಾಗಿರುವ ಮೂವರ ಪತ್ತೆಗೆ ಅರಣ್ಯ ಇಲಾಖೆ ಬಲೆಬೀಸಿದೆ. ಬೇಟೋಳಿ ಗ್ರಾಮದ ನಿವಾಸಿ ಬೇಕರಿ ಮಾಲೀಕ ಎಂ.ಎA. ಅಜೀಜ್ (ಆಜಿ-೪೫), ವೀರಾಜಪೇಟೆ ನೆಹರು ನಗರದ ನಿವಾಸಿ ಆಟೋ ಚಾಲಕ ಹುಸೈನ್ ಸಿ.ಎ. (ಜಂಶೀರ್-೩೨) ಬಂಧಿತ ಆರೋಪಿಗಳು. ಚಾಮಿಯಾಲ ಮೈತಾಡಿ ಗ್ರಾಮದ ನಿವಾಸಿ ಅಜೀಜ್ ಅಜ್ಜು, ಗುಂಡಿಗೆರೆಯ ಅಶ್ರಫ್ ಅಚ್ಚು ಮತ್ತು ಶಿಯಾಬ್ ಪರಾರಿಯಾಗಿರುವ ಆರೋಪಿಗಳು.

ಘಟನೆಯ ಹಿನ್ನೆಲೆ : ವನ್ಯ ಮೃಗಗಳ ಬೇಟೆಯಾಡುವ ನಿಟ್ಟಿನಲ್ಲಿ ಸಂಚು ರೂಪಿಸಿ ಹೆಗ್ಗಳ ಗ್ರಾಮ ಅರಣ್ಯ ಪ್ರದೇಶಕ್ಕೆ ಐವರು ತೆರಳಿದ್ದಾರೆ. ಬೇಟೆಯ ಸಂದರ್ಭದಲ್ಲಿ ಎರಡು ಜಿಂಕೆ ಗಳನ್ನು ಗುಂಡಿಕ್ಕಿ ಕೊಂದು ಮಾಂಸ ವನ್ನಾಗಿಸಿ ಹಂಚಿಕೊAಡು ಉಳಿದ ಮಾಂಸವನ್ನು ಮಾರಾಟ ಮಾಡುವ ಪ್ರಯತ್ನಕ್ಕೆ ಕೈ ಹಾಕಿದ ಆರೋಪಿಗಳು ಮಾಂಸವನ್ನು ಇನ್ನೋವಾ ಕಾರಿನಲ್ಲಿ (ಕೆಎ-೦೨-ಎಂಎ-೭೦೧೧) ಪೆರುಂಬಾಡಿ ಗ್ರಾಮದ ಮೂಲಕ ಬಿಟ್ಟಂಗಾಲ ಮಾರ್ಗವಾಗಿ ಸಾಗಾಟ ಮಾಡುವ ಸಂದರ್ಭ ವೀರಾಜಪೇಟೆ ಅರಣ್ಯ ಸಂಚಾರಿ ದಳದ ಸಿಬ್ಬಂದಿಗಳು ಖಚಿತ ಮಾಹಿತಿ ಅನ್ವಯ ದಾಳಿಗೆ ಮುಂದಾಗಿ ಮಾರ್ಗದಲ್ಲಿ ಸಾಗುವ ಎಲ್ಲಾ ವಾಹನಗಳನ್ನು ತಪಾಸಣೆ ನಡೆಸಿದ್ದಾರೆ. ಈ ವೇಳೆ ವಾಹನದ ಹಿಂಬದಿಯಲ್ಲಿ ಚೀಲದಲ್ಲಿ ಜಿಂಕೆಯ ಎರಡು ತಲೆ ಸೇರಿದಂತೆ ಸುಮಾರು ೪೪ ಕೆ.ಜಿ ಮಾಂಸ ಪತ್ತೆಯಾಗಿದೆ.

ಬೇಟೆಯಾಡಿದ ಮಾಂಸ ದೊಂದಿಗೆ ಒಂದು ಒಂಟಿ ನಳಿಕೆಯ ಕೋವಿ, ಎರಡು ಕಬ್ಬಿಣದ ಕತ್ತಿ, ಮೂರು ಚೂರಿಗಳು ಪತ್ತೆಯಾಗಿವೆೆ. ಆರೋಪಿ ಗಳ ವಿರುದ್ಧ ವನ್ಯಜೀವಿ ತಿದ್ದುಪಡಿ ಕಾಯ್ದೆ, ಡಬ್ಲುö್ಯ. ಎಲ್.ಓ.ಆರ್ ೫/೨೦೨೩ ಮತ್ತು ಭಾರತೀಯ ಶಸ್ತಾçಸ್ತç ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸ ಲಾಗಿದೆ. ಆರೋಪಿಗಳನ್ನು ನ್ಯಾಯಾಲ ಯಕ್ಕೆ ಹಾಜರುಪಡಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.

- ಕಿಶೋರ್ ಕುಮಾರ್ ಶೆಟ್ಟಿ