ಮಡಿಕೇರಿ, ನ. ೧ : ಪ್ರಖ್ಯಾತ ಕೊಳಲು ವಾದಕ ಪ್ರವೀಣ್ ಗೋಡ್‌ಕಂಡಿ ಅವರಿಂದ ತಾ. ೬ರಂದು ಮಡಿಕೇರಿಯ ಭಾರತೀಯ ವಿದ್ಯಾಭವನದ ಸಭಾಂಗಣದಲ್ಲಿ ಕೊಳಲು ವಾದನ ನಡೆಯಲಿದೆ. ಅಂದು ಸಂಜೆ ೬ ಗಂಟೆಗೆ ಕಾರ್ಯಕ್ರಮ ಪ್ರಾರಂಭವಾಗಲಿದ್ದು ತಬಲದಲ್ಲಿ ಕಿರಣ್ ಗೋಡ್‌ಕಿಂಡಿ ಅವರು ಸಾಥ್ ನೀಡಲಿದ್ದಾರೆ.