ಸೋಮವಾರಪೇಟೆ, ನ. ೧ : ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿಯವರ ೩೯ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ಇಲ್ಲಿನ ಪುಟ್ಟಪ್ಪ ವೃತ್ತದಲ್ಲಿ ಇಂದಿರಾಗಾAಧಿ ಅಭಿಮಾನಿಗಳ ಸಂಘದ ವತಿಯಿಂದ ಮಂಗಳವಾರ ನಡೆಯಿತು.

ಇಂದಿರಾ ಗಾಂಧಿಯವರ ಭಾವಚಿತ್ರಕ್ಕೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಮಾಲಾರ್ಪಣೆ ಮಾಡಿದರು. ಈ ಸಂದರ್ಭ ಇಂದಿರಾ ಗಾಂಧಿ ಅಭಿಮಾನಿಗಳ ಸಂಘದ ಅಧ್ಯಕ್ಷ ಎಚ್.ಎ. ನಾಗರಾಜು, ತಾಲೂಕು ಸೇವಾದಳದ ಅಧ್ಯಕ್ಷ ಬಿ. ಬಸವರಾಜು, ಪಟ್ಟಣ ಪಂಚಾಯಿತಿ ಸದಸ್ಯರಾದ ಬಿ.ಸಿ. ವೆಂಕಟೇಶ್, ಶೀಲಾ ಡಿಸೋಜ, ಸಂಘದ ಕಾರ್ಯದರ್ಶಿ ಎಚ್.ಬಿ. ರಾಜಪ್ಪ, ಪ್ರಮುಖರಾದ ಮಹಮ್ಮದ್ ಬೇಟು, ಸುನಿಲ್, ಎಂ.ಬಿ. ಜಮೀರ್, ಕೆ.ಪಿ. ದಿನೇಶ್, ಕೆ.ಕೆ. ಸ್ವಾಮಿ, ಸಂದ್ಯಾ ಪ್ರಕಾಶ್, ಪಳನಿ ಇದ್ದರು.