ಮಡಿಕೇರಿ, ಅ. ೩೧: ಶನಿವಾರಸಂತೆ ಸಮೀಪದ ಹುಲಸೆ ಗ್ರಾಮದಲ್ಲಿ ಅಕ್ರಮ ವಾಗಿ ಜೂಜಾಡುತ್ತಿದ್ದ ೨೪ ಮಂದಿಯನ್ನು ಪೊಲೀಸರು ಬಂಧಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.

ಗುಡುಗಳಲೆ ಗ್ರಾಮದ ದಿಲೀಪ್ (೩೨), ಶನಿವಾರ ಸಂತೆಯ ದಿವಾಕರ್ (೪೮), ಶಂಕರ (೩೬), ಪರಮೇಶ್ (೪೫) ಆಲೂರಿನ ಅಣ್ಣೇಗೌಡ (೪೦), ಬಿ.ಜಿ. ಶಿವಣ್ಣ (೪೪), ಹುಲಸೆಯ ಪುಟ್ಟರಾಜು (೫೦), ಮಲ್ಲಿಪಟ್ಟಣದ ದರ್ಶನ್ (೩೧), ಎಸ್.ಆರ್. ದರ್ಶನ್ (೨೧), ಮನೋಜ್ (೨೬), ಪ್ರವೀಣ್ (೨೮), ಅರಕಲಗೋಡು ರವಿ (೩೮), ಸಕಲೇಶಪುರದ ಸುಧಾಕರ್ (೫೨), ದಯಾನಂದ (೫೪), ಬೆಸೂರಿನ ಎಂ.ಜಿ. ಶಾಂತ (೪೯), ಶಿರಂಗಾಲದ ಶಂಕರ (೩೬), ಹಂಡ್ಲಿಯ ಕಮಲೇಶ್ (೪೪), ಆನಂದ (೩೬), ಶಿವಕುಮಾರ್ (೩೮), ಕವಡಿಕಟ್ಟೆಯ ರಾಘವೇಂದ್ರ (೩೨), ಗುಡುಗಳಲೆಯ ಮಂಜುನಾಥ್ (೪೪), ದೇವರಾಜು (೪೫), ನಾಕಲಗೋಡಿನ ಬಸವರಾಜು (೪೭), ಹಾನಗಲ್ಲಿನ ಚಂಗಪ್ಪ (೬೨) ಬಂಧಿತ ಆರೋಪಿಗಳು.

ಶನಿವಾರಸಂತೆ ಠಾಣಾ ವ್ಯಾಪ್ತಿಯ ಹುಲಸೆ ಗ್ರಾಮದ ಕಲ್ಪತರು ರಿಕ್ರಿಯೇಷನ್ ಕ್ಲಬ್‌ನಲ್ಲಿ ಹಣವನ್ನು ಪಣವಾಗಿರಿಸಿ ಅಕ್ರಮವಾಗಿ ಇಸ್ಪೀಟ್ ಜೂಜಾಡುತ್ತಿದ್ದ ಕುರಿತು ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿ ಸಹಿತ ನಗದು ರೂ. ೧೬,೮೮೦ ಹಾಗೂ ೧೧ ದ್ವಿಚಕ್ರ, ೨ ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.