ಮಡಿಕೇರಿ, ಅ. ೩೧: ಕೊಯವ ಸಮಾಜದ ೧೮ನೇ ವಾರ್ಷಿಕ ಮಹಾಸಭೆ ಮತ್ತು ಕೈಲು ಮುಹೂರ್ತ ಸಂತೋಷ ಕೂಟ ಮೂರ್ನಾಡು ವಿನಲ್ಲಿ ಸಂಭ್ರಮದಿAದ ನಡೆಯಿತು.

ಪ್ರಾಥಮಿಕ ಶಾಲೆಯ ಸಭಾಂಗಣ ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೂವರು ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಗಡಿ ಭದ್ರತಾ ಪಡೆಯ ನಿವೃತ್ತ ಅಧಿಕಾರಿ ಚೀಪಂಡ ಕಾರ್ಯಪ್ಪ, ಹಿರಿಯ ಸಹಕಾರಿ ಈರಮಂಡ ಸೋಮಣ್ಣ ಹಾಗೂ ಬಿಎಸ್‌ಎನ್‌ಎಲ್ ನಿವೃತ್ತ ಅಧಿಕಾರಿ ಮುಕ್ಕಾಟಿರ ಪೂರ್ಣಿಮಾ ಪೂಣಚ್ಚ ಅವರುಗಳು ಸನ್ಮಾನ ಸ್ವೀಕರಿಸಿದರು.

ಚೀಪಂಡ ಕಾರ್ಯಪ್ಪ ಮಾತ ನಾಡಿ, ಅವಕಾಶ ನಮಗಾಗಿ ಕಾಯು ವುದಿಲ್ಲ, ಅವಕಾಶ ಸಿಕ್ಕಿದಾಗ ಅದನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳುವು ದನ್ನು ಕಲಿಯಬೇಕು ಎಂದು ಕಿವಿಮಾತು ಹೇಳಿದರು.

ಸಹಕಾರ ಕ್ಷೇತ್ರದ ಸಾಧಕ ಈರಮಂಡ ಸೋಮಣ್ಣ ಅವರು ಮಾತನಾಡಿ, ಸಹಕಾರಿ ಕ್ಷೇತ್ರ ಮತ್ತು ಸಮಾಜಕ್ಕೆ ನಿಕಟ ಸಂಪರ್ಕವಿದೆ. ಪರಸ್ಪರ ಜನರ ಪಾಲ್ಗೊಳ್ಳುವಿಕೆ, ಪ್ರೀತಿ, ವಿಶ್ವಾಸದ ವಿನಿಮಯ, ಪರಸ್ಪರ ಸಹಕಾರ ಮನೋಭಾವನೆ ಬೆಳೆಸಿ ಕೊಳ್ಳಲು ಸಹಕಾರಿಯಾಗಿದೆ. ಈಗಿನ ಯುವ ಜನಾಂಗ ಸಹಕಾರಿ ಕ್ಷೇತ್ರಗ ಳಲ್ಲಿ ತಮ್ಮನ್ನು ಹೆಚ್ಚು ಹೆಚ್ಚಾಗಿ ತೊಡಗಿ ಸಿಕೊಳ್ಳಬೇಕೆಂದು ಕರೆ ನೀಡಿದರು.

ನಮ್ಮ ಸಮಾಜದ ನಿವೇಶನದ ನೀಲಿನಕ್ಷೆ ತಯಾರು ಮಾಡಿ ಸರಕಾರ ದಿಂದ ಸಹಾಯಧನ ಪಡೆಯುವುದ ರೊಂದಿಗೆ ನೂತನ ಕಟ್ಟಡ ನಿರ್ಮಾ ಣಕ್ಕೆ ಶೀಘ್ರ ಶಂಕುಸ್ಥಾಪನೆ ನೆರವೇರಿ ಸಬೇಕೆಂದು ಮನವಿ ಮಾಡಿದರು.

ಮುಕ್ಕಾಟಿರ ಪೂರ್ಣಿಮಾ ಪೂಣಚ್ಚ ಮಾತನಾಡಿ, ಏಕಾಗ್ರತೆ ಮತ್ತು ಛಲದಿಂದ ಮಾತ್ರ ಶೈಕ್ಷಣಿಕ ಸಾಧನೆ ಮಾಡಲು ಸಾಧ್ಯ. ಪೋಷಕರು ಉನ್ನತ ಶಿಕ್ಷಣಕ್ಕೆ ಆದ್ಯತೆ ನೀಡಿ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕೆಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಮಾಜದ ಅಧ್ಯಕ್ಷ ಜಿಲ್ಲಂಡ ದಾದು ಮಾದಪ್ಪ, ಅಂಬೆಗಾ ಲಿನ ನಡಿಗೆಯಲ್ಲಿದ್ದ ಸಮಾಜವು ಕಳೆದ ೧೮ ವರ್ಷಗಳಿಂದ ಸದೃಢವಾಗಿ ಬೆಳೆದು ನಿಂತು ತನ್ನದೇ ಆದ ಅಸ್ತಿತ್ವ ವನ್ನು ಉಳಿಸಿಕೊಂಡಿದೆ ಎಂದರು.

ಸಮಾಜದ ನೂತನ ಕಟ್ಟಡ ನಿರ್ಮಾಣಕ್ಕೆ ಸಮಾಜ ಬಾಂಧವರು ಸಹಕರಿಸಬೇಕು ಎಂದು ತಿಳಿಸಿದರು.

ಸಮಾಜದ ಉಪಾಧ್ಯಕ್ಷ ಡಾ.ಮೇಚಿರ ಸುಭಾಷ್ ನಾಣಯ್ಯ ಮಾತನಾಡಿ, ಸರಕಾರದ ಸೌಲಭ್ಯಗ ಳನ್ನು ಕೊಯವ ಸಮಾಜ ಸೂಕ್ತ ರೀತಿಯಲ್ಲಿ ಸದುಪಯೋಗಪಡಿಸಿ ಕೊಳ್ಳಬೇಕೆಂದು ಸಲಹೆ ನೀಡಿದರು.

ನಿರ್ದೇಶಕರುಗಳಾದ ಈರಮಂಡ ವಿಜಯ್, ಮಲ್ಲಂಡ ಮಹೇಶ್, ಚೋಕಿರ ಡಾಲಿ, ಮೇಚಿರ ಹರೀಶ್, ಮುಕ್ಕಾಟಿರ ಹ್ಯಾರಿ ಪೂಣಚ್ಚ, ನೆಂದುಮAಡ ಗೀತಾ ನಾಣಯ್ಯ, ಈರಮಂಡ ದಮಯಂತಿ, ಚೋಕಿರ ವನಿತ ವಿಜಯ್ ಮತ್ತಿತರ ಪ್ರಮು ಖರು ಉಪಸ್ಥಿತರಿದ್ದರು.

ಗೌರವ ಕಾರ್ಯದರ್ಶಿ ತೋರೆರ ಕಾಶಿ ಕಾರ್ಯಪ್ಪ ವರದಿ ವಾಚಿಸಿ ದರು. ನಿರ್ದೇಶಕಿ ಅಚ್ಚಪಂಡ ಧರ್ಮಾ ವತಿ ಕುಶಾಲಪ್ಪ ಪ್ರಾರ್ಥಿಸಿ, ಮೇಚುರ ಮಮತ ಲೋಕೇಶ್ ನಿರೂಪಿಸಿ, ಖಜಾಂಚಿ ಕಳ್ಳಿರ ನಾಣಯ್ಯ ವಂದಿಸಿದರು.

೧೦ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮೇಚಿರ ಶಿಲ್ಪ ಭರತ್, ಚೋಕಿರ ನಂಜಪ್ಪ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಚೋಕಿರ ಶಶಾಂಕ್ ಹಾಗೂ ಪದವಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಕಳ್ಳಿರ ಯಶ್ವಿತ ಪೂಣಚ್ಚ ಮತ್ತು ಈರಮಂಡ ಹೇಮಾವತಿ ತಿಮ್ಮಯ್ಯ ಅವರಿಗೆ ಸಮಾಜದ ದತ್ತಿ ನಿಧಿಯಿಂದ ಪ್ರೋತ್ಸಾಹ ಧನ ಹಾಗೂ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು.

ಈರಮಂಡ ಕೇಸರಿ ಬೋಜಮ್ಮ ಅವರ ನೇತೃತ್ವದಲ್ಲಿ ಸಾಂಸ್ಕöÈತಿಕ ಕಾರ್ಯಕ್ರಮಗಳು ಸಂಭ್ರಮದಿAದ ನಡೆದವು. ಆಟೋಟಗಳ ಸ್ಪರ್ಧೆ ಮತ್ತು ಕೊಡವ ಹಾಡುಗಾರಿಕೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.