ಮಡಿಕೇರಿ, ಅ. ೩೧: ಸ್ವಾತಂತ್ರö್ಯ ಹೋರಾಟಗಾರ, ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರ ಹೋರಾಟ, ತ್ಯಾಗ-ಬಲಿದಾನ ಒಂದು ಇತಿಹಾಸವಾಗಿದೆ ಎಂದು ಜಿಲ್ಲೆಯ ಶಾಸಕರುಗಳಾದ ಎ.ಎಸ್.ಪೊನ್ನಣ್ಣ ಹಾಗೂ ಡಾ.ಮಂಥರ್‌ಗೌಡ ಅಭಿಮತ ವ್ಯಕ್ತಪಡಿಸಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸಹಯೋಗದೊಂದಿಗೆ ನಡೆದ ಸ್ವಾತಂತ್ರö್ಯ ಹೋರಾಟಗಾರ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯಗೌಡರ ಹುತಾತ್ಮ ದಿನಾಚರಣೆ ಅಂಗವಾಗಿ ಅಪ್ಪಯ್ಯ ಗೌಡರ ಪ್ರತಿಮೆಗೆ ಪುಷ್ಪ ನಮನದ ಮೂಲಕ ಗೌರವ ಸಲ್ಲಿಸಿದ ಬಳಿಕ ಮಾತನಾಡಿದ ವೀರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರೂ ಆಗಿರುವ ಎ.ಎಸ್. ಪೊನ್ನಣ್ಣ ಅವರು; ಅಪ್ಪಯ್ಯ ಗೌಡರ ಹೋರಾಟ ಒಂದು ಇತಿಹಾಸ ವಾಗಿದ್ದು, ಇತಿಹಾಸವನ್ನು ಎಂದಿಗೂ ನಡೆದ ಸ್ವಾತಂತ್ರö್ಯ ಹೋರಾಟಗಾರ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯಗೌಡರ ಹುತಾತ್ಮ ದಿನಾಚರಣೆ ಅಂಗವಾಗಿ ಅಪ್ಪಯ್ಯ ಗೌಡರ ಪ್ರತಿಮೆಗೆ ಪುಷ್ಪ ನಮನದ ಮೂಲಕ ಗೌರವ ಸಲ್ಲಿಸಿದ ಬಳಿಕ ಮಾತನಾಡಿದ ವೀರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರೂ ಆಗಿರುವ ಎ.ಎಸ್. ಪೊನ್ನಣ್ಣ ಅವರು; ಅಪ್ಪಯ್ಯ ಗೌಡರ ಹೋರಾಟ ಒಂದು ಇತಿಹಾಸ ವಾಗಿದ್ದು, ಇತಿಹಾಸವನ್ನು ಎಂದಿಗೂ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂಥರ್ ಗೌಡ ಮಾತನಾಡಿ; ಅಪ್ಪಯ್ಯ ಗೌಡರು ಹುತಾತ್ಮರಾದ ಈ ದಿವಸ ದೇಶದಲ್ಲಿಯೇ ಇತಿಹಾಸ ಬರೆದ ದಿನವಾಗಿದೆ. ಒಂದು ರೀತಿಯಲ್ಲಿ ದುಃಖಕರ ದಿನವಾದರೂ ಮತ್ತೊಂದು ರೀತಿಯಲ್ಲಿ ಹೆಮ್ಮೆ ಪಡುವ ದಿನವೂ ಆಗಿದೆ. ಬ್ರಿಟಿಷರ ವಿರುದ್ಧ ಹೋರಾಡಿದ ನಮ್ಮ ನಾಡಿನ ಸುಪುತ್ರರನ್ನು ನೆನೆಸಿಕೊಂಡು ಗೌರವ ಸಲ್ಲಿಸಲಾಗುತ್ತಿದೆ. ಹೋರಾಟಗಾರರ ಸೇವೆ, ತ್ಯಾಗ ಬಲಿದಾನಗಳನ್ನು ಇತಿಹಾಸದಲ್ಲಿ ಬದಲಾವಣೆ ಮಾಡ ಬಾರದು. ಈಗಿನ ಪಠ್ಯ ಪುಸ್ತಕದಲ್ಲಿ ಬದಲಾವಣೆ ಮಾಡಲಾಗಿದೆ. ಇದು ಬೇಸರದ ವಿಷಯ; ತಿದ್ದುಪಡಿ ಮಾಡುವ ಮೂಲಕ ಮತ್ತೆ ಅಳವಡಿ ಸಲಾಗುವದು ಎಂದು ಹೇಳಿದರು.

ಮಡಿಕೇರಿ ನಗರಸಭಾಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಜಿಲ್ಲಾಧಿಕಾರಿ ವೆಂಕಟ್‌ರಾಜ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವರ್ಣಿತ್ ನೇಗಿ, ಡಿವೈಎಸ್‌ಪಿ ಜಗದೀಶ್, ತಹಶೀಲ್ದಾರ್ ಪ್ರವೀಣ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ, ಕೊಡಗು ಗೌಡ ಸಮಾಜಗಳ

(ಮೊದಲ ಪುಟದಿಂದ) ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ, ಕೊಡಗು ಗೌಡ ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ, ಗೌಡ ವಿದ್ಯಾ ಸಂಘದ ಅಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ, ಕಾರ್ಯದರ್ಶಿ ಪೇರಿಯನ ಉದಯ, ಗೌಡ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಕೋರನ ವಿಶ್ವನಾಥ್, ಮಾಜಿ ಸೈನಿಕರ ಸಂಘದ ಅಧ್ಯಕ್ಷ ತುಂತಜೆ ದಯಾನಂದ, ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಅಮೆ ದಮಯಂತಿ, ಗೌಡ ಯುವ ವೇದಿಕೆ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ, ಕುಶಾಲನಗರ ಗೌಡ ಸಮಾಜದ ಅಧ್ಯಕ್ಷ ಚಿಲ್ಲನ ಗಣಿಪ್ರಸಾದ್, ಗುಡ್ಡೆಹೊಸೂರು ಗೌಡ ಸಂಘದ ಅಧ್ಯಕ್ಷ ಗುಡ್ಡೆಮನೆ ವಿಶ್ವಕುಮಾರ್, ಮಕ್ಕಂದೂರು ಗೌಡ ಸಮಾಜದ ತೂಟೇರ ವೆಂಕಟರಮಣ, ಚೇರಂಬಾಣೆ ಸಮಾಜದ ಅಧ್ಯಕ್ಷ ಕೊಡಪಾಲು ಗಣಪತಿ, ಗೌಡ ಸಂಘ ಸುಂಟಿಕೊಪ್ಪ ನಾಡು ಇದರ ಅಧ್ಯಕ್ಷ ಯಂಕನ ಉಲ್ಲಾಸ್, ಕನ್ನಡ ಸಾಹಿತ್ಯ ಪರಿಷತ್ತು ಮಡಿಕೇರಿ ತಾಲೂಕು ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್, ಸರ್ವೋದಯ ಸಮಿತಿ ಅಧ್ಯಕ್ಷ ಅಂಬೆಕಲ್ಲು ಕುಶಾಲಪ್ಪ, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷರುಗಳಾದ ಕೊಲ್ಯದ ಗಿರೀಶ್, ಲಕ್ಷಿö್ಮನಾರಾಯಣ ಕಜೆಗದ್ದೆ, ನಗರಸಭೆ ಮಾಜಿ ಅಧ್ಯಕ್ಷೆ ಕೂಡಕಂಡಿ ಕಾವೇರಮ್ಮ ಸೋಮಣ್ಣ, ಗುಡ್ಡೆಮನೆ ಹರೀಶ್, ಗುಡ್ಡೆಮನೆ ಮಣಿಕುಮಾರ್ ಸೇರಿದಂತೆ ಗೌಡ ಸಮುದಾಯ ಬಾಂಧವರು, ಅಧಿಕಾರಿಗಳು ಪುಷ್ಪ ನಮನ ಸಲ್ಲಿಸಿದರು. ಲಿಟಲ್ ಫ್ಲವರ್ ಶಾಲೆಯ ಮಕ್ಕಳು, ಸ್ಕೌಟ್ ಮತ್ತು ಗೈಡ್ಸ್ ಮಕ್ಕಳು ನಮನ ಗೀತೆ ಹಾಡಿದರೆ, ಅರೆಭಾಷೆ ಅಕಾಡೆಮಿ ಮಾಜಿ ಸದಸ್ಯೆ ಚೊಕ್ಕಾಡಿ ಪ್ರೇಮ ರಾಘವಯ್ಯ ಲಾವಣಿ ಗೀತೆ ಹಾಡಿದರು. ಮಾಜಿ ಸದಸ್ಯ ಅಗೋಳಿಕಜೆ ಧನಂಜಯ ಕಾರ್ಯಕ್ರಮ ನಿರ್ವಹಣೆ ಮಾಡಿದರು.

ಬಳಿಕ ಮೆರವಣಿಗೆಯೊಂದಿಗೆ ಅಪ್ಪಯ್ಯಗೌಡರ ಸ್ಮಾರಕವಿರುವ ಕೋಟೆ ಆವರಣದವರೆಗೆ ತೆರಳಿ ಅಲ್ಲಿಯೂ ಪುಷ್ಪ ನಮನ ಸಲ್ಲಿಸಲಾಯಿತು. ಶಾಸಕ ಮಂಥರ್ ಗೌಡ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.