ಚೆಯ್ಯಂಡಾಣೆ, ನ. ೧: ವೀರಾಜಪೇಟೆ ಕ್ಷೇತ್ರದ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಭೂಮಿಪೂಜೆ ನೆರವೇರಿಸಿದರು.
ಸುಮಾರು ರೂ. ೧.೨೦ ಕೋಟಿ ವೆಚ್ಚದ ಬೊಳ್ಳುಮಾಡು, ಪಾರಾಣೆ, ನಾಪೋಕ್ಲು ಮುಖ್ಯರಸ್ತೆ ಹಾಗೂ ರೂ. ೩೫ ಲಕ್ಷ ವೆಚ್ಚದಲ್ಲಿ ನಿರ್ಮಾಣ ವಾಗಲಿರುವ ನೆಲಜಿ-ಕಕ್ಕಬ್ಬೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎ.ಎಸ್. ಪೊನ್ನಣ್ಣ ಭೂಮಿಪೂಜೆ ನೆರವೇರಿ ಸಿದರು. ಈ ಸಂದರ್ಭ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ವಲಯ್ಯಾಧ್ಯಕ್ಷ ಮಾಚೆಟ್ಟಿರ ಕುಸು ಕುಶಾಲಪ್ಪ, ಪಾರಾಣೆ-ಕೊಣಂಜಗೇರಿ ಚೆಯ್ಯಂಡಾಣೆ, ನ. ೧: ವೀರಾಜಪೇಟೆ ಕ್ಷೇತ್ರದ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಭೂಮಿಪೂಜೆ ನೆರವೇರಿಸಿದರು.
ಸುಮಾರು ರೂ. ೧.೨೦ ಕೋಟಿ ವೆಚ್ಚದ ಬೊಳ್ಳುಮಾಡು, ಪಾರಾಣೆ, ನಾಪೋಕ್ಲು ಮುಖ್ಯರಸ್ತೆ ಹಾಗೂ ರೂ. ೩೫ ಲಕ್ಷ ವೆಚ್ಚದಲ್ಲಿ ನಿರ್ಮಾಣ ವಾಗಲಿರುವ ನೆಲಜಿ-ಕಕ್ಕಬ್ಬೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎ.ಎಸ್. ಪೊನ್ನಣ್ಣ ಭೂಮಿಪೂಜೆ ನೆರವೇರಿ ಸಿದರು. ಈ ಸಂದರ್ಭ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ವಲಯ್ಯಾಧ್ಯಕ್ಷ ಮಾಚೆಟ್ಟಿರ ಕುಸು ಕುಶಾಲಪ್ಪ, ಪಾರಾಣೆ-ಕೊಣಂಜಗೇರಿ ಗ್ರಾಮಸ್ಥರಾದ ಮಣವಟ್ಟಿರ ದಯಾ ಚಿಣ್ಣಪ್ಪ, ಅಪ್ಪಚೆಟ್ಟೋಳಂಡ ಮಿಥುನ್ ಮಾಚಯ್ಯ, ಪರದಂಡ ಸುಬ್ರಮಣಿ, ಬಾಚಮಂಡ ರಾಜಾ ಪೂವಣ್ಣ, ಚಿಯಕಪೂವಂಡ ರಂಜು, ಸುನಿ, ರತ್ತು, ಶಿವಣಿ, ಮಣವಟ್ಟಿರ ಪಾಪು, ಕೋಟೆರ ಸಾಬು, ಚಿಟ್ಟಿ, ಮಂಡಿರ ಸಾಬು, ಲೋಕೋಪಯೋಗಿ ಇಲಾಖೆ ಅಭಿಯಂತರರಾದ ಸತೀಶ್ ಕುಮಾರ್, ಗಿರೀಶ್ ಮತ್ತಿತರರು ಹಾಜರಿದ್ದರು.
ಪೂಜಾ ವಿಧಿವಿಧಾನಗಳನ್ನು ಅರ್ಚಕರಾದ ಶ್ರೀನಿವಾಸ್ ಹಾಗೂ ರಮೇಶ್ ನೆರವೇರಿಸಿದರು.