ಕೂಡಿಗೆ, ನ. ೧: ಕೂಡಿಗೆಯ ಕೊಡವ ಕೂಟದ ಮಹಾಸಭೆ ಮತ್ತು ಕೈಲ್ ಪೊಳ್ದ್ ಹಬ್ಬದ ಸಂತೋಷ ಕೂಟವು ಕೂಟದ ಅಧ್ಯಕ್ಷ ವಾಂಚೀರ ಮನು ನಂಜುAಡ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿ ಕುಶಾಲನಗರ ಕೊಡವ ಸಮಾಜದ ಉಪಾಧ್ಯಕ್ಷ ಪುಲಿಯಂಡ ಚಂಗಪ್ಪ, ವೇದಿಕೆಯಲ್ಲಿ ಕೂಟದ ಕಾರ್ಯದರ್ಶಿ ಮುಂಡAಡ ಸತೀಶ್, ಖಜಾಂಚಿ ದೇಯಂಡ ಪೊನ್ನಪ್ಪ, ನಿರ್ದೇಶಕರುಗಳಾದ ಕೊಳುವಂಡ ಮಂದಪ್ಪ, ಪಟ್ಟಡ ಚಿಟ್ಟಿಯಪ್ಪ, ಐಮುಡಿಯಂಡ ರಮೇಶ, ನಿರ್ದೇಶಕಿಯರಾದ ಉದಿಯಂಡ ದನು ತಿಮ್ಮಯ್ಯ, ಮುಕ್ಕಾಟಿರ ದಿವ್ಯ ದಿಲೀಪ್ ಉಪಸ್ಥಿತರಿದ್ದರು.

ಅಧ್ಯಕ್ಷ ಮನು ನಂಜುAಡ ಮಾತನಾಡಿ, ನಮ್ಮ ಆಚಾರ-ವಿಚಾರಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಕರ್ತವ್ಯ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಕೆಲಸ ತಂದೆ-ತಾಯಿಯAದಿಯರ ಕರ್ತವ್ಯ. ಜನಾಂಗದವರು ಎಲ್ಲರೂ ಒಗ್ಗಟ್ಟಾಗಿ ಇರಬೇಕು ಎಂದರು. ಮುಖ್ಯ ಅತಿಥಿಗಳಾಗಿದ್ದ ಪುಲಿಯಂಡ ಚಂಗಪ್ಪ ಅವರು ಮಾತನಾಡಿ, ನಾವು ನಮ್ಮ ಹಿರಿಯರಿಗೆ ಗೌರವ ಕೊಡುವುದನ್ನು ರೂಢಿಸಿಕೊಳ್ಳಬೇಕು. ಸೇನೆಯಲ್ಲಿ ಯುವಕರು ಇತ್ತೀಚಿನ ದಿನಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಸೇರ್ಪಡೆ ಆಗುತ್ತಿದ್ದಾರೆ. ಇದು ಬಹಳ ಬೇಸರದ ವಿಷಯ. ಮುಂದಿನ ದಿನಗಳಲ್ಲಿ ಶಿಕ್ಷಣದ ಜೊತೆಗೆ ದೇಶ ಸೇವೆಯಲ್ಲಿ ಯುವಕರು ತಮ್ಮನ್ನು ತೊಡಗಿಸಿಕೊಳ್ಳುವಂತೆ ಕರೆ ನೀಡಿದರು. ದೇಯಂಡ ಸವಿ ಸ್ವಾಗತಿಸಿ, ಕೊಳುವಂಡ ಮಂದಪ್ಪ ವಂದಿಸಿದರು.