ಕುಶಾಲನಗರ, ನ. ೧ : ಕನ್ನಡ ನಾಡಿನಲ್ಲಿ ಕನ್ನಡ ಭಾಷೆಯ ಬಗ್ಗೆ ನಿರ್ಲಕ್ಷö್ಯ ಸಲ್ಲದು ಎಂದು ಕೊಡಗು ವಿಶ್ವವಿದ್ಯಾಲಯ ಕನ್ನಡ ಉಪನ್ಯಾಸಕ ಡಾ. ಜಮೀರ್ ಅಹಮ್ಮದ್ ಕರೆ ನೀಡಿದರು.
ಕುಶಾಲನಗರ ತಾಲೂಕು ರಾಷ್ಟಿçÃಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ೬೮ನೇ ಕನ್ನಡ ರಾಜ್ಯೋತ್ಸವ ದಿನಾಚರಣೆಯಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿ, ಕನ್ನಡ ಭಾಷೆಯ ಬಳಕೆ ಮೂಲಕ ಬೆಳೆಸಬೇಕು. ಕನ್ನಡ ಭಾಷೆ ಕೇವಲ ಪ್ರಚಾರಕ್ಕೆ ಸೀಮಿತ ಆಗಬಾರದು. ಭಾಷೆಯ ಬಗ್ಗೆ ಅಭಿಮಾನ ಮೂಡಬೇಕು. ಭಾಷೆಯನ್ನು ಸ್ವಾರ್ಥಕ್ಕೆ ಬಳಸಬಾರದು. ವಿದ್ಯಾವಂತ ಸಮುದಾಯ ಕನ್ನಡವನ್ನು ಬದಿಗೊತ್ತುವ ಮೂಲಕ ಭಾಷಾಭಿಮಾನವನ್ನು ಮರೆಯುತ್ತಿರುವುದು ಇಂದಿನ ದಿನಗಳ ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಹೇಳಿದರು.
ಧ್ವಜಾರೋಹಣ ನೆರವೇರಿಸಿ ರಾಜ್ಯೋತ್ಸವ ದಿನದ ಸಂದೇಶ ನೀಡಿದ ತಾಲೂಕು ತಹಶೀಲ್ದಾರ್ ಹಾಗೂ ಸಮಿತಿಯ ಅಧ್ಯಕ್ಷ ಕಿರಣ್ ಜಿ. ಗೌರಯ್ಯ ಮಾತನಾಡಿ, ಕನ್ನಡ ಭಾಷೆ ಸ್ವಾಭಿಮಾನ ಆತ್ಮಾಭಿಮಾನದ ಸಂಕೇತವಾಗಿದ್ದು ಅದರ ಸಮರ್ಪಕ ಬಳಕೆ ಆಗಬೇಕಾಗಿದೆ. ಕನ್ನಡ ನಾಡು ನುಡಿಗೆ ಬದ್ಧರಾಗುವಂತೆ ಕರೆ ನೀಡಿದರು.
ಸಮಾರಂಭದಲ್ಲಿ ರಾಷ್ಟçಗೀತೆ ನಾಡಗೀತೆಯೊಂದಿಗೆ ಜನಪ್ರಿಯ ಕನ್ನಡ ಗೀತೆಗಳನ್ನು ಹಾಡಲಾಯಿತು.
ಸಂಚಾರಿ ಪೊಲೀಸ್ ಠಾಣಾಧಿಕಾರಿ ಕಾಶಿನಾಥ ಬಗಲಿ ಅವರ ನೇತೃತ್ವದಲ್ಲಿ ಆಕರ್ಷಕ ಪಥಸಂಚಲನ ನಡೆಯಿತು.
ಪೊಲೀಸ್, ಎನ್ಸಿಸಿ ಸ್ಟೂಡೆಂಟ್, ಪೊಲೀಸ್ ಕೆಡೆಟ್, ಶಾಲಾ ಕಾಲೇಜು ವಿದ್ಯಾರ್ಥಿಗಳು ಪಥಸಂಚಲನದಲ್ಲಿ ಪಾಲ್ಗೊಂಡಿದ್ದರು. ತೆರೆದ ವಾಹನದಲ್ಲಿ ತಹಶೀಲ್ದಾರ್ ಹಾಗೂ ರಾಷ್ಟಿçÃಯ ಹಬ್ಬಗಳ ಆಚರಣೆಯ ಅಧ್ಯಕ್ಷ ಕಿರಣ್ ಗೌರಯ್ಯ ಗೌರವ ವಂದನೆ ಸ್ವೀಕರಿಸಿದರು.
ನಂತರ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭ ಶಿಕ್ಷಕಿ ಸುನಿತಾ, ಹಿರಿಯ ಪತ್ರಕರ್ತ ಕೆ.ಕೆ. ನಾಗರಾಜ್ ಶೆಟ್ಟಿ, ಕರ್ನಾಟಕ ಕಾವಲು ಪಡೆ ಜಿಲ್ಲಾಧ್ಯಕ್ಷ ಎಂ.ಕೃಷ್ಣ, ಕುಶಾಲನಗರ ಪುರಸಭೆ ಪೌರಕಾರ್ಮಿಕ ಮಾದ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡ ಡಾ. ಜಮೀರ್ ಅಹಮ್ಮದ್ ಅವರನ್ನು ಸಮಿತಿ ವತಿಯಿಂದ ಗೌರವಿಸಲಾಯಿತು.
ಎ.ಪಿ.ಸಿ.ಎಂ.ಎಸ್. ಅಧ್ಯಕ್ಷ ಎಂ.ಎನ್. ಕುಮಾರಪ್ಪ, ಪೊಲೀಸ್ ಉಪಾಧೀಕ್ಷಕ ಎಂ.ವಿ. ಗಂಗಾಧರಪ್ಪ, ಪುರಸಭೆ ಮುಖ್ಯಾಧಿಕಾರಿ ಕೃಷ್ಣ ಪ್ರಸಾದ್, ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಪುಷ್ಪ ಮತ್ತಿತರರು ಇದ್ದರು.