ಮಡಿಕೇರಿ, ಅ. ೩೧: ಪೊನ್ನಂಪೇಟೆ ಸಮೀಪದ ಹಳ್ಳಿಗಟ್ಟು ಕೂರ್ಗ್ ಇನ್ಸಿ÷್ಟಟ್ಯೂಟ್ ಆಫ್ ಟೆಕ್ನಾಲಜಿ (ಸಿಐಟಿ) ವತಿಯಿಂದ ತಾ. ೩, ೪ ಹಾಗೂ ೫ ರಂದು ರಾಜ್ಯ ಮಟ್ಟದ ಕೃಷಿಯಂತ್ರ ಮೇಳ ಕಾರ್ಯಕ್ರಮ ಆಯೋಜಿಸಲಾಗಿದೆ.

ತಾ. ೩ ರಂದು ಬೆಳಿಗ್ಗೆ ೧೦.೩೦ಕ್ಕೆ ಡಾ. ಎಂ.ಎ. ಚಂಗಪ್ಪ ವೇದಿಕೆಯಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು, ಪಶು ಸಂಗೋಪನೆ ಮತ್ತು ರೇಷ್ಮೆ ಕೃಷಿ ಸಚಿವ ಕೆ. ವೆಂಕಟೇಶ್ ಉದ್ಘಾಟಿಸಲಿದ್ದಾರೆ. ಕೃಷಿಯಂತ್ರ ಮೇಳದ ಮಳಿಗೆಗಳನ್ನು ವೀರಾಜಪೇಟೆ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಉದ್ಘಾಟಿಸಲಿದ್ದು, ಅತಿಥಿಗಳಾಗಿ ಮಡಿಕೇರಿ ಶಾಸಕ ಡಾ. ಮಂಥರ್ ಗೌಡ, ವಿಧಾನ ಪರಿಷತ್ತು ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ವಿಶೇಷ ಅತಿಥಿಗಳಾಗಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಪಿ ಗಣಪತಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಮುಖ್ಯಸ್ಥೆ ಲೀಲಾವತಿ, ಕೊಡವ ಎಜುಕೇಷನ್ ಸೊಸೈಟಿ ಉಪಾಧ್ಯಕ್ಷ ಕೆ.ಎ. ಚಿನ್ನಪ್ಪ, ಕೋಶಾಧಿಕಾರಿ ಕೆ.ಎನ್. ಉತ್ತಪ್ಪ ಭಾಗವಹಿಸಲಿದ್ದು, ಕೊಡವ ಎಜುಕೇಷನ್ ಸೊಸೈಟಿ ಅಧ್ಯಕ್ಷ ಡಾ. ಎಂ.ಸಿ. ಕಾರ್ಯಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ.

ಬೆಳಿಗ್ಗೆ ೧೧.೩೦ಕ್ಕೆ ನಡೆಯಲಿರುವ ಸನ್ಮಾನ ಕಾರ್ಯಕ್ರಮದಲ್ಲಿ ರೈತ ಸಂಘದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ, ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತ ವಿಜಯ್ ಅಂಗಡಿ, ಮಡಿಕೇರಿ ತಾಲೂಕಿನ ಕೃಷಿಕ ಬಾರಿಯಂಡ ಸಂಜನ್ ಪೊನ್ನಪ್ಪ, ಪೊನ್ನಂಪೇಟೆಯ ವಾಟೇರಿರ ಪೊನ್ನಪ್ಪ, ಸೋಮವಾರಪೇಟೆಯ ಕೆ.ಎಸ್. ಮಂಜುನಾಥ್, ವೀರಾಜಪೇಟೆಯ ಚೆಟ್ಟಿನೆರವನ ಚಂದ್ರಶೇಖರ್, ಕುಶಾಲನಗರದ ಬಿ.ಎಂ. ಸಾಗರ್ ಅವರುಗಳನ್ನು ಸನ್ಮಾನಿಸಲಾಗುವುದು.

ತಾ. ೫ ರಂದು ಸಂಜೆ ೫ ಗಂಟೆಗೆ ಸಮಾರೋಪ ಸಮಾರಂಭದಲ್ಲಿ ಪಾಲಿಬೆಟ್ಟ ಟಾಟಾ ಕಾಫಿ ಲಿಮಿಟೆಡ್ ಕಾರ್ಯಕಾರಿ ಉಪಾಧ್ಯಕ್ಷ ಎಂ.ಬಿ. ಗಣಪತಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಕಾಫಿ ಬೋರ್ಡ್ ಆಫ್ ಇಂಡಿಯಾದ ಮಾಜಿ ಉಪಾಧ್ಯಕ್ಷ ಎನ್. ಬೋಸ್ ಮಂದಣ್ಣ, ಕೊಡವ ಎಜುಕೇಷನ್ ಸೊಸೈಟಿ ಉಪಾಧ್ಯಕ್ಷ ಕೆ.ಎ. ಚಿನ್ನಪ್ಪ, ಕಾರ್ಯದರ್ಶಿ ರಾಕೇಶ್ ಪೂವಯ್ಯ ಉಪಸ್ಥಿತಿ ಇರಲಿದೆ. ಸಂಜೆ ೫.೪೫ ಕ್ಕೆ ಪಂಡಿತ್ ಪ್ರವೀಣ್ ಗೋಡ್ಖಿಂಡಿ ಇವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.

ವಿಶೇಷ ಉಪನ್ಯಾಸಗಳು

ತಾ. ೩ ರಂದು ಮಧ್ಯಾಹ್ನ ೧೨ ಗಂಟೆಗೆ ‘ಪರಿಸರ ಪ್ರಿಯ ಕೃಷಿ ಪದ್ಧತಿ’ ಕುರಿತು ವಿಜಯ್ ಅಂಗಡಿ ಉಪನ್ಯಾಸ ನೀಡಲಿದ್ದಾರೆ. ಮಧ್ಯಾಹ್ನ ೧೨ ಕ್ಕೆ ‘ಕೊಡಗಿನಲ್ಲಿ ಅಡಿಕೆ ಬೆಳೆ ನಿರ್ವಹಣೆ ಮತ್ತು ರೋಗಗಳ ಹತೋಟಿ’ ಕುರಿತು ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ಎಂ.ಎನ್. ತೇಜಸ್, ತಾ. ೪ ರಂದು ಬೆಳಿಗ್ಗೆ ೧೦.೩೦ಕ್ಕೆ ‘ಜೇನು ಕೃಷಿಯಲ್ಲಿ ಆವಿಷ್ಕಾರ’

(ಮೊದಲ ಪುಟದಿಂದ) ಕುರಿತು ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಸಹಪ್ರಾಧ್ಯಾಪಕ ಡಾ. ಆರ್.ಎಂ. ಕೆಂಚಾರೆಡ್ಡಿ, ಬೆ. ೧೧.೩೦ಕ್ಕೆ ‘ಭತ್ತದ ಬೇಸಾಯದಲ್ಲಿ ತಂತ್ರಜ್ಞಾನದ ಬಳಕೆ ಕುರಿತು ಅರಣ್ಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಜಡೇಗೌಡ, ಮ. ೨.೩೦ಕ್ಕೆ ‘ಕಾಫಿ ಸೇರಿದಂತೆ ಇತರ ಕೃಷಿಯಲ್ಲಿ ಡ್ರೋನ್ ತಂತ್ರಜ್ಞಾನ’ ಬಗ್ಗೆ ಗೋವಿಂದ ಬಾಲಕೃಷ್ಣ ರಾಜು, ತಾ. ೫ ರಂದು ಬೆ. ೧೧ಕ್ಕೆ ‘ವೈಜ್ಞಾನಿಕ ಕಾಂಪೋಸ್ಟ್ ತಯಾರಿಕೆ’ ಬಗ್ಗೆ ಪ್ರಗತಿಪರ ಕೃಷಿಕ ಬಿ.ಸಿ. ಅರವಿಂದ್, ಮ. ೧೨ ಕ್ಕೆ ‘ಕೃಷಿಯಲ್ಲಿ ಆಗುತ್ತಿರುವ ಸಣ್ಣ ಪುಟ್ಟ ತಪ್ಪುಗಳು ಮತ್ತು ಪರಿಹಾರಗಳು’ ವಿಷಯದಲ್ಲಿ ಕೃಷಿಕ ಪತ್ರಿಕೆ ಪ್ರಧಾನ ಸಂಪಾದಕ ದಿನೇಶ್ ದೇವವೃಂದ ಉಪನ್ಯಾಸ ನೀಡಲಿದ್ದಾರೆ.

ರಾಜ್ಯದ ವಿವಿಧೆಡೆಗಳಿಂದ ಕೃಷಿ ಪರಿಕರ, ಉತ್ಪನ್ನ ಮತ್ತು ಉಪಕರಣವನ್ನು ಪ್ರದರ್ಶಿಸಲು ಕೃಷಿ ಉತ್ಪಾದಕರು ಮೇಳಕ್ಕೆ ಆಗಮಿಸುತ್ತಿದ್ದಾರೆ. ೧೮೦ಕ್ಕೂ ಹೆಚ್ಚು ಮಳಿಗೆಗಳು ಇರಲಿದ್ದು, ಕೃಷಿಕರು ಹಾಗೂ ಸಾರ್ವಜನಿಕರು ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ ಕೃಷಿ ಪರಿಕರಗಳÀನ್ನು ಕೊಂಡುಕೊಳ್ಳಲು ಮುಕ್ತ ಅವಕಾಶ ಕಲ್ಪಿಸಲಾಗಿದೆ.

ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಅವರ ಸಹಕಾರದಿಂದ ಕೊಡಗಿನ ವಿವಿಧೆಡೆಯಿಂದ ಸರ್ಕಾರಿ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೆ ಸರ್ವರಿಗೂ ಉಚಿತ ಪ್ರವೇಶಾತಿ ನೀಡಲಾಗಿದೆ.