ಮಡಿಕೇರಿ, ಅ. ೩೧: ಗಾಳಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾರ್ಡ್ ಸಭೆಗಳು ತಾ. ೩, ೪ ಹಾಗೂ ೫ ರಂದು ನಡೆಯಲಿದೆ.
ತಾ. ೩ ರಂದು ಹಮ್ಮಿಯಾಲ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳಿಗ್ಗೆ ೧೦.೪೫ಕ್ಕೆ ಅಪರಾಹ್ನ ೧೨.೩೦ಕ್ಕೆ ಮುಟ್ಲು ಅಂಗನವಾಡಿ ಕೇಂದ್ರದಲ್ಲಿ ಸದಸ್ಯ ಕೆ.ಟಿ. ಧರ್ಮಾವತಿ ಅಧ್ಯಕ್ಷತೆಯಲ್ಲಿ, ತಾ. ೪ ರಂದು ೨ನೇ ಮೊಣ್ಣಂಗೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳಿಗ್ಗೆ ೧೧ ಗಂಟೆಗೆ, ಸದಸ್ಯೆ ಪುಷ್ಪಾವತಿ ಅಧ್ಯಕ್ಷತೆಯಲ್ಲಿ, ಕಡಮಕಲ್ಲು ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನ ೩ ಗಂಟೆಗೆ ಸದಸ್ಯ ಪಿ.ಜೆ. ಸೋಮಯ್ಯ ಅಧ್ಯಕ್ಷತೆಯಲ್ಲಿ, ತಾ ೬ ರಂದು ಬೆಳಿಗ್ಗೆ ೧೧ ಗಂಟೆಗೆ ಕಾಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಪಾಧ್ಯಕ್ಷ ಕೆ.ಎಂ. ಪೆಮ್ಮಯ್ಯ ಅಧ್ಯಕ್ಷತೆಯಲ್ಲಿ, ಮಧ್ಯಾಹ್ನ ೨.೩೦ಕ್ಕೆ ಸದಸ್ಯ ವೈ.ಎಸ್. ರಾಜಶೇಖರ್ ಅಧ್ಯಕ್ಷತೆಯಲ್ಲಿ ಗಾಳಿಬೀಡು ಮಹಿಳಾ ಸಮಾಜದಲ್ಲಿ ವಾರ್ಡ್ಸಭೆಗಳು ನಡೆಯಲಿವೆ.
ತಾ. ೯ ರಂದು ಗಾಳಿಬೀಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾ.ಪಂ. ಅಧ್ಯಕ್ಷೆ ಬಿ.ಜೆ. ಉಷಾ ಅಧ್ಯಕ್ಷತೆಯಲ್ಲಿ ಬೆಳಿಗ್ಗೆ ೧೧ ಗಂಟೆಗೆ ಗ್ರಾಮಸಭೆ ನಡೆಯಲಿದ್ದು, ನೋಡೆಲ್ ಅಧಿಕಾರಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೇಗೌಡ ಆಗಮಿ ಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.