ಚೆಯ್ಯಂಡಾಣೆ, ಅ. ೩೦: ಸ್ಥಳೀಯ ಚೇಲಾವರ ಪೊನ್ನೋಲ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಕೃಷಿ ಇಲಾಖೆಯ ವತಿಯಿಂದ ರೈತ ಮತ್ತು ರೈತ ಮಹಿಳೆಯರಿಗೆÀ ಜೇನು ಕೃಷಿ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿತ್ತು. ನರಿಯಂದಡ ಸಂಜೀವಿನಿ ಒಕ್ಕೂಟದ ಸದಸ್ಯರಿಗೆ ಜೇನು ಕೃಷಿ ತರಬೇತಿ ಕಾರ್ಯಾಗಾರ ನಡೆಯಿತು. ಪೊನ್ನಂಪೇಟೆ ಅರಣ್ಯ ಕಾಲೇಜಿನ ತಾಂತ್ರಿಕ ತಜ್ಞರಾದ ಡಾ. ಕೆಂಚ ರೆಡ್ಡಿ ಜೇನು ಸಾಕಾಣಿಕೆಯಿಂದಾಗುವ ಪ್ರಯೋಜನಗಳು, ಅದರಿಂದ ದೊರೆಯುವ ಉತ್ಪನ್ನಗಳು, ಉನ್ನತ ಗುಣಮಟ್ಟದ ಜೇನು ತುಪ್ಪ ಸಂಗ್ರಹಣೆ, ಜೇನು ತುಪ್ಪ ಕಲಬೆರಕೆಯ ಬಗ್ಗೆ, ವಿವಿಧ ತಳಿಯ ಜೇನು ನೊಣಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಕೂಡಿಗೆ ಕೃಷಿ ಇಲಾಖೆಯ ಸ್ವರ್ಣಶ್ರೀ, ಬೋಪಯ್ಯ, ಪ್ರಗತಿಪರ ಕೃಷಿಕ ನಂದ ಕುಮಾರ್, ಸಂಜೀವಿನಿ ಒಕ್ಕೂಟದ ಕೃಷಿ ಸಖಿ ಅಂಬಿಕಾ, ಪಶು ಸಖಿ ಮೀನಾಕ್ಷಿ, ಎಂಬಿಕೆ ವಸಂತಿ, ಎಲ್ ಸಿ ಆರ್ ಪಿ ನಳಿನಿ, ಶಾಲಾ ಶಿಕ್ಷಕಿ ಪ್ರಮೀಳಾ, ಒಕ್ಕೂಟದ ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.