ಸೋಮವಾರಪೇಟೆ, ಅ. ೩೦: ಇಲ್ಲಿನ ಆಟೋ ಚಾಲಕರು ಮತ್ತು ಮಾಲೀಕರ ಸಂಘದಿAದ ನ. ೧ರಂದು ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ೧೬ನೇ ವರ್ಷದ ಅದ್ದೂರಿ ಕನ್ನಡ ರಾಜ್ಯೋತ್ಸವ ಸಮಾರಂಭ ಆಯೋಜಿ ಸಲಾಗಿದೆ ಎಂದು ಸಂಘದ ಅಧ್ಯಕ್ಷ ಹೆಚ್.ಕೆ. ಗಂಗಾಧರ್ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನ. ೧ರಂದು ಬೆಳಿಗ್ಗೆ ೭ ಗಂಟೆಗೆ ಆಟೋ ನಿಲ್ದಾಣ ದಲ್ಲಿ ಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ೮.೩೦ಕ್ಕೆ ಕಕ್ಕೆಹೊಳೆ ಜಂಕ್ಷನ್ನಿAದ ಡೊಳ್ಳು ಕುಣಿತ ದೊಂದಿಗೆ ಆಟೋಗಳ ಮೆರವಣಿಗೆ, ಎಲ್ಲಾ ಪ್ರತಿಮೆಗಳಿಗೆ ಮಾಲಾರ್ಪಣೆ ನಡೆಯಲಿದೆ. ೧೦ ಗಂಟೆಗೆ ರಾಜ್ಯೋ ತ್ಸವ ಸಮಾರಂಭದ ಉದ್ಘಾಟನೆ, ೧೧ ಗಂಟೆಯಿAದ ಶಾಲಾ ವಿದ್ಯಾರ್ಥಿಗಳಿಗೆ ಕುಣಿಯೋಣು ಬಾರಾ ನೃತ್ಯ ಸ್ಪರ್ಧೆ, ಮಧ್ಯಾಹ್ನ ಸಾರ್ವಜನಿಕರಿಗೆ ಅನ್ನದಾನ, ಸಂಜೆ ೬ ಗಂಟೆಗೆ ಸಮಾ ರೋಪ ಸಮಾರಂಭ ನಡೆಯಲಿದೆ ಎಂದು ಮಾಹಿತಿ ನೀಡಿದರು. ಅದ್ದೂರಿ ಆಚರಣೆಯ ಅಂಗವಾಗಿ ಸಂಗೀತ ನಿರ್ದೇಶಕ ಮಹೇಶ್ ಕರ್ಣ ನೇತೃತ್ವದ ತಂಡದಿAದ ಸಂಗೀತ ರಸಮಂಜರಿ, ಸರಿಗಮಪ ಸೀಸನ್ ೧೯ರ ವಿಜೇತರಾದ ಪ್ರತೀಕ್ಷ ಬಡಿಗೇರ್, ಕುಶಿಕ್, ಎದೆತುಂಬಿ ಹಾಡುವೆನು ಕಾರ್ಯಕ್ರಮ ವಿಜೇತೆ ಅಮೂಲ್ಯ, ಶಿವಶಂಕರ್ ಅವರುಗಳಿಂದ ಸಂಗೀತ ಸುಧೆ ನಡೆಯಲಿದ್ದು, ಜೂನಿಯರ್ ವಿಷ್ಣುವರ್ಧನ್, ಜೂ. ಅಂಬರೀಶ್ ಸೇರಿದಂತೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದ ನೃತ್ಯಪಟುಗಳಿಂದ ನೃತ್ಯ ಕಾರ್ಯಕ್ರಮ ನಡೆಯಲಿದೆ ಎಂದರು. ಕುಣಿಯೋಣು ಬಾರಾ ಕಾರ್ಯಕ್ರಮದ ಉದ್ಘಾಟನೆಯನ್ನು ಸಂಸದ ಪ್ರತಾಪ್ ಸಿಂಹ, ಮಾಜಿ ಸಚಿವ ಅಪ್ಪಚ್ಚುರಂಜನ್, ಬಿ.ಎ. ಜೀವಿಜಯ, ವಿಧಾನಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ಪ.ಪಂ. ಮುಖ್ಯಾಧಿಕಾರಿ ನಾಚಪ್ಪ ಸೇರಿದಂತೆ ಇತರರು ನೆರವೇರಿಸಲಿ ದ್ದಾರೆ. ಸಂಜೆ ನಡೆಯುವ ಸಮಾರೋಪ ಸಮಾರಂಭ ವನ್ನು ಶಾಸಕ ಡಾ. ಮಂಥರ್ ಗೌಡ, ಹುಣಸೂರು ಶಾಸಕ ಹರೀಶ್ ಗೌಡ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ, ಉದ್ಯಮಿ ಅವಿನಾಶ್ ಕೇಸರಿ ಸೇರಿದಂತೆ ಇತರರು ಉದ್ಘಾಟಿಸಲಿ ದ್ದಾರೆ ಎಂದು ಗಂಗಾಧರ್ ತಿಳಿಸಿದರು. ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಸಮಿತಿ ಗೌರವಾಧ್ಯಕ್ಷ ಪಾಣತ್ತಲೆ ಶಶಿಧರ್, ವಿದ್ಯಾ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ನ ವ್ಯವಸ್ಥಾಪಕ ಸುಲೈಮಾನ್, ಮಾಜೀ ಸೈನಿಕ ಬಿ.ಆರ್. ಈರಪ್ಪ, ಹಾಕಿ ಕ್ರೀಡಾಪಟು ಎಸ್.ಆರ್. ಪುಣ್ಯ ಅವರುಗಳನ್ನು ಸನ್ಮಾನಿಸಲಾಗು ವುದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜನಾರ್ಧನ್ ಮಾಹಿತಿ ನೀಡಿದರು. ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಅಬ್ದುಲ್ ಕರೀಂ, ಖಜಾಂಚಿ ಸುದೀಪ್, ಉಪ ಕಾರ್ಯದರ್ಶಿ ಪಿ.ಎನ್. ರಮೇಶ್, ಸಹ ಕಾರ್ಯದರ್ಶಿ ಕೆ.ವಿ. ಪ್ರಭಾಕರ್, ರಾಜ್ಯೋತ್ಸವ ಸಮಿತಿ ಗೌರವಾಧ್ಯಕ್ಷ ಪಾಣತ್ತಲೆ ಶಶಿಧರ್ ಅವರುಗಳು ಉಪಸ್ಥಿತರಿದ್ದರು.