ಮಡಿಕೇರಿ, ಅ. ೩೧: ರಾಜಾ ಸೀಟ್ ಆವರಣದಲ್ಲಿ ನಿರ್ಮಾಣ ಮಾಡಿಕೊಂಡಿರುವ ಗೂಡಂಗಡಿ ಗಳನ್ನು ತೆರವು ಮಾಡಲು ತೋಟಗಾರಿಕೆ ಇಲಾಖೆ ಮುಂದಾದ ಸಂದರ್ಭ ಅಧಿಕಾರಿ ಹಾಗೂ ವ್ಯಾಪಾರಿಗಳ ನಡುವೆ ವಾಗ್ವಾದ ಉಂಟಾಗಿ ಬಿಗುವಿನ ವಾತಾವರಣ ನಿರ್ಮಾಣವಾಯಿತು.
ಇಂದು ಬೆಳಿಗ್ಗೆ ೯.೩೦ರ ಸುಮಾರಿಗೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಯೋಗೇಶ್ ಹಾಗೂ ಸಿಬ್ಬಂದಿ ರಾಜಾಸೀಟ್ ಆವರಣದಲ್ಲಿರುವ ವಿವಿಧ ರೀತಿಯ ಅಂಗಡಿಗಳನ್ನು ತೆರವು ಮಾಡಲು ತೆರಳಿದ್ದರು. ಇದಕ್ಕೆ ಆಕ್ಷೇಪಿಸಿದ ವ್ಯಾಪಾರಿಗಳು ತಮಗೆ ಮಡಿಕೇರಿ ಶಾಸಕ ಡಾ. ಮಂಥರ್ ಗೌಡ ಅವರೇ ಅಂಗಡಿ ಹಾಕಿಕೊಳ್ಳಲು ಹೇಳಿದ್ದಾರೆ. ಈ ಕ್ರಮದಿಂದ ನಮಗೆ ಸಮಸ್ಯೆ ಉಂಟಾಗುತ್ತದೆ ಎಂದು ವಿರೋಧ ವ್ಯಕ್ತಪಡಿಸಿದರು.
ಕೆಲವರ ಅಂಗಡಿಯ ವಸ್ತು ಗಳನ್ನು ತೆರವು ಮಾಡುವ ಸಂದರ್ಭ ವ್ಯಾಪಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದು, ಬಳಿಕ ಸ್ಥಳಕ್ಕಾಗಮಿ ಸಿದ ಅಧಿಕಾರಿಗಳು ಅಲ್ಲಿಂದ ನಿರ್ಗಮಿಸಿದರು. ಸುಮಾರು ೧೩ ಅಂಗಡಿಗಳು ರಾಜಾಸೀಟ್ ಆವರಣ ದಲ್ಲಿದ್ದು, ಸದ್ಯಕ್ಕೆ ಅಂಗಡಿ ತೆರವು ಮಾಡುವುದಿಲ್ಲ. ಪರ್ಯಾಯ ವ್ಯವಸ್ಥೆ ಮಾಡಿದಲ್ಲಿ ತೆರಳುವುದಾಗಿ ಪಟ್ಟುಹಿ ಡಿದು ವ್ಯಾಪಾರ ಮುಂದುವರೆಸಿದ್ದಾರೆ.
ಮೊದಲಿನಿಂದ ವಿವಾದ
ಗೂಡಂಗಡಿ ವಿಚಾರವಾಗಿ ಹಲವು ವರ್ಷಗಳಿಂದ ವಿವಾದವಿದೆ. ಕಳೆದ ಕೆಲವು ತಿಂಗಳ ಹಿಂದೆ ವ್ಯಾಪಾರಿ ಗಳ ನಡುವೆ ಉಂಟಾದ ಗಲಭೆ ಯಿಂದ ಅಂದಿನ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಎಲ್ಲಾ ಅಂಗಡಿಗಳನ್ನು ತೆರವು ಮಾಡುವಂತೆ ಆದೇಶಿಸಿದ್ದರು.
ಅದರನ್ವಯ ತೋಟಗಾರಿಕೆ ಇಲಾಖೆ ಅಂಗಡಿಗಳನ್ನು ತೆರವು ಮಾಡಿ ಗೇಟ್ಗೆ ಬೀಗ ಹಾಕಿ ಪ್ರವೇಶವನ್ನು ನಿರ್ಬಂಧಿಸಿದ್ದರು. ಆನಂತರ ವ್ಯಾಪಾರಿ ಗಳು ರಾಜಾಸೀಟ್ನಿಂದ ಅಂಗಡಿ ತೆರವು ಗೊಳಿಸಿ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ದೇವಾಲಯ ಬದಿಯಲ್ಲಿ, ಆಕಾಶ ವಾಣಿ ರಸ್ತೆ, ಕೂರ್ಗ್ ವಿಲೇಜ್ ಎದುರು ಅಂಗಡಿ ಹಾಕಿ ಕೊಂಡು ವ್ಯಾಪಾರ ನಡೆಸುತ್ತಿದ್ದರು.
ಶಾಸಕರ ಮಾತಿನಂತೆ ವ್ಯಾಪಾರ
ಶಾಸಕ ಡಾ. ಮಂಥರ್ ಗೌಡ ಅವರು ವ್ಯಾಪಾರ ಮಾಡಿಕೊಳ್ಳುವಂತೆ ತಿಳಿಸಿರುವ ಹಿನ್ನೆಲೆ ನಾವುಗಳು ಕಳೆದ ೧೭ ದಿನಗಳಿಂದ ಅಂಗಡಿ ಹಾಕಿ ಕೊಂಡಿದ್ದೇವೆ ಎಂದು ವ್ಯಾಪಾರಿಗಳು ‘ಶಕ್ತಿ’ಗೆ ತಿಳಿಸಿದ್ದಾರೆ.
ಅಧಿಕಾರಿಗಳು ಆಗಮಿಸಿದ ಸಂದ ರ್ಭವೂ ಇದೇ ಮಾತನ್ನು ಹೇಳಿದ್ದು, ಶಾಸಕರು ಪರ್ಯಾಯ ವ್ಯವಸ್ಥೆ ಮಾಡಿಕೊಡುವಂತೆ ಒತ್ತಾಯಿಸಿದ್ದಾರೆ. ಘಟನೆ ಕುರಿತು ವ್ಯಾಪಾರಿಗಳು ಶಾಸಕರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿ ವಸ್ತುಸ್ಥಿತಿ ಅರಿತು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುವ ಭರವಸೆ ಯನ್ನು ಶಾಸಕರು ವ್ಯಾಪಾರಿಗಳಿಗೆ ನೀಡಿದ್ದಾರೆ.
ಗೇಟ್ ಮುಂದೆ ಮಣ್ಣು
ರಾಜಾಸೀಟ್ ಮುಖ್ಯದ್ವಾರದ ಮುಂಭಾಗದ ಈ ಹಿಂದೆ ಪುಟಾಣಿ ರೈಲು ಸಂಚರಿಸುತ್ತಿದ್ದ ಜಾಗದ ಗೇಟ್ ಮುಂಭಾಗ ಅಧಿಕಾರಿಗಳು ಮಣ್ಣು ಸುರಿದು ವ್ಯಾಪಾರ ನಿರ್ಬಂಧಕ್ಕೆ ಮುಂದಾಗಿದ್ದಾರೆ.
ಈ ಕ್ರಮವನ್ನು ವಿರೋಧಿಸಿರುವ ವ್ಯಾಪಾರಿಗಳು, ದುಡಿಯುವ ವರ್ಗವನ್ನು ಗುರಿ ಮಾಡಿ ಈ ರೀತಿ ನಡೆ ಅನುಸರಿಸುತ್ತಿದ್ದಾರೆ. ಬಲವಂತ ವಾಗಿ ನಮ್ಮನ್ನು ಸ್ಥಳಾಂತರಿಸಲಾ ಗುತ್ತಿದೆ ಎಂದು ಆರೋಪಿಸಿದ್ದಾರೆ.
ದಸರಾ ಸಂದರ್ಭ ಅವಕಾಶ - ಯೋಗೇಶ್ : ದಸರಾ ಸಂದರ್ಭ ವ್ಯಾಪಾರ ನಡೆಸಲು ಮಾತ್ರ ವ್ಯಾಪಾರಿಗಳಿಗೆ ಅವಕಾಶ ನೀಡಲಾಗಿದೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇ ಶಕ ಯೋಗೇಶ್ ‘ಶಕ್ತಿ’ಗೆ ಸ್ಪಷ್ಟಪಡಿ ಸಿದ್ದಾರೆ. ಜಿಲ್ಲಾಡಳಿತ ಸೂಚನೆ ಹಿನ್ನೆಲೆ, ಪ್ರವಾಸಿಗರಿಗೆ ಆಗುತ್ತಿರುವ ಸಮಸ್ಯೆ ಮನಗಂಡು ಕ್ರಮಕ್ಕೆ ಮುಂದಾ ಗಿದ್ದೇವೆ. ಪ್ರಸ್ತುತ ವ್ಯಾಪಾರಿಗಳು ರಸ್ತೆಯಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಇದು ನಗರಸಭೆ ಸುಪರ್ದಿಗೆ ಬರುತ್ತದೆ. ಇದರಿಂದ ಸಮಸ್ಯೆ ಉಂಟಾಗಿದೆ. ಅಂಗಡಿಗಳನ್ನು ತೆರವು ಮಾಡುವುದು ನಿಶ್ಚಿತ. ರಾಜಾಸೀಟ್ ಆವರಣದಲ್ಲಿ ವ್ಯಾಪಾರಕ್ಕೆ ಶಾಶ್ವತ ನೆಲೆ ಕಲ್ಪಿಸುವ ಸಂಬAಧ ಕಾಮಗಾರಿ ಪ್ರಸ್ತಾವನೆ ಯಲ್ಲಿದೆ. ತ್ವರಿತವಾಗಿ ಮಳಿಗೆಗಳನ್ನು ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಟಿ ಹೆಚ್.ಜೆ. ರಾಕೇಶ್