ಕುಶಾಲನಗರ, ಅ. ೩೧: ಕೊಡಗು ಎಜುಕೇಶನಲ್ ಅಂಡ್ ಸೋಷಿಯಲ್ ಸರ್ವೀಸ್ ಟ್ರಸ್ಟ್ ಆಶ್ರಯದಲ್ಲಿ ರಕ್ಷಣಾ ಇಲಾಖೆಗೆ ಮತ್ತು ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ನವಂಬರ್ ೧೯ರಂದು ಕುಶಾಲನಗರದಲ್ಲಿ ಗುಡ್ಡಗಾಡು ಓಟ ಆಯೋಜಿಸಲಾಗಿದೆ.
ಯುವಕರಿಗೆ ೭ ಕಿ. ಮಿ. ಹಾಗೂ ಯುವತಿಯರಿಗೆ ೪ ಕಿ. ಮಿ ದೂರದ ಓಟವನ್ನು ಆಯೋಜಿಸಲಾಗಿದೆ ಎಂದು ಸಂಸ್ಥೆಯ ಪ್ರಮುಖರಾದ ಕ್ಯಾಪ್ಟನ್ ಪಿ.ಎಸ್ ಕಾರ್ಯಪ್ಪ ತಿಳಿಸಿದ್ದಾರೆ .
೨೦೦೩ ಜೂನ್ ನಂತರ ಜನಿಸಿದವರು ಈ ಕ್ರೀಡಾಕೂಟದಲ್ಲಿ ಭಾಗವಹಿಸಬಹುದು. ಆಸಕ್ತ ಯುವಕರು ಮತ್ತು ಯುವತಿಯರು ತಮ್ಮ ಹುಟ್ಟಿದ ದಿನಾಂಕ ಮತ್ತು ಆಧಾರ್ ಕಾರ್ಡ್ ಪ್ರತಿ ತೋರಿಸಿ ನೋಂದಣಿ ಮಾಡಬೇಕಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಓಟದಲ್ಲಿ ವಿಜೇತ ಯುವಕರಿಗೆ ಪ್ರಥಮ ಬಹುಮಾನ ರೂ. ೧೦೦೦೦, ದ್ವಿತೀಯ ರೂ. ೮೦೦೦, ತೃತೀಯ ೬೦೦೦, ೪ನೇ ಬಹುಮಾನ ರೂ. ೪೦೦೦, ೫ನೇ ರೂ. ೩೦೦೦, ೬ನೇ ಬಹುಮಾನವಾಗಿ ರೂ. ೨೦೦೦ ನೀಡಲಾಗುವುದು ಎಂದು ತಿಳಿಸಿದ್ದಾರೆ.
ವಿಜೇತ ಯುವತಿಯರಿಗೆ ಪ್ರಥಮ ರೂ. ೬೦೦೦, ದ್ವಿತೀಯ ರೂ. ೫೦೦೦, ತೃತೀಯ ರೂ. ೪೦೦೦, ೪ನೇ ರೂ. ೩೦೦೦, ೫ನೇ ರೂ. ೨೦೦೦ ಮತ್ತು ಆರನೇ ಬಹುಮಾನವಾಗಿ ರೂ. ೧೦೦೦ ನೀಡಲಾಗುವುದು.
ನೋಂದಣಿಗಾಗಿ ೮೧೨೩೬೭೬೨೭೦, ೮೩೧೭೩೨೭೪೧೦, ೮೩೧೦೫೭೮೫೭೪ ಅನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ :೯೪೪೯೪೭೫೫೦೨ ಸಂಪರ್ಕಿಸುವAತೆ ಕೋರಿದ್ದಾರೆ. ನೋಂದಣಿ ಮಾಡಲು ಕೊನೆಯ ದಿನಾಂಕ ೧೫/೧೧/೨೩. ಭಾಗವಹಿಸಿದ ಎಲ್ಲರಿಗೂ ತಿಂಡಿ ಕಾಫಿ ವ್ಯವಸ್ಥೆ ಇರಲಿದೆ. ಸ್ಪರ್ಧೆ ಬೆಳಿಗ್ಗೆ ೬ ಗಂಟೆಗೆ ಕುಶಾಲನಗರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆರಂಭವಾಗಲಿದೆ ಎಂದು ಕಾರ್ಯಕ್ರಮ ಸಂಯೋಜಕರಾದ ಅಮೆ ಜನಾರ್ದನ್ ಮಾಹಿತಿ ನೀಡಿದ್ದಾರೆ.