ಕುಶಾಲನಗರ, ಅ. ೩೦ : ಕರ್ನಾಟಕ ವಿಧಾನಪರಿಷತ್ ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ನಿವೃತ್ತ ಶಿಕ್ಷಕ, ಉದ್ಯಮಿ, ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ಅವರ ಹೆಸರನ್ನು ಅಂತಿಮಗೊಳಿಸಿ ಎಐಸಿಸಿ ಘೋಷಣೆ ಮಾಡಿದೆ. ಕೆ.ಕೆ.ಮಂಜುನಾಥ್ ಕುಮಾರ್ ತಮ್ಮ ಅಯ್ಕೆ ಬಗ್ಗೆ ಪ್ರತಿಕ್ರಿಯಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
೧೭ ವರ್ಷ ಕಾಲ ಶಿಕ್ಷಕನಾಗಿ ಸೇವೆ ಸಲ್ಲಿಸಿ ೨೦೧೨ ರಲ್ಲಿ ಸ್ವಯಂ ನಿವೃತ್ತಿ ಪಡೆದು ಶಿಕ್ಷಕರೇ ಶಾಸಕರಾಗಬೇಕೆಂಬ ಅಭಿಲಾಷೆಯಿಂದ ಸ್ಪರ್ಧಿಸಿ ೧೬೦ ಮತಗಳ ಅಂತರದಿAದ ಪರಾಜಯಗೊಳ್ಳಬೇಕಾಯಿತು. ಅಂದಿನ ಆಡಳಿತ ಪಕ್ಷದ ಅಧಿಕಾರ ದುರುಪಯೋಗದ ಕಾರಣ ಸೋಲು ಅನುಭವಿಸಬೇಕಾಯಿತು. ಕಳೆದ ಅವಧಿಯಲ್ಲಿ ಸಮ್ಮಿಶ್ರ ಸರಕಾರ ಅಭ್ಯರ್ಥಿ ಕುತಂತ್ರದಿAದ ಗೆಲುವು ಸಾಧಿಸಿದರು. ಈ ಬಾರಿ ಶಿಕ್ಷಕರ ಒತ್ತಾಸೆಯಿಂದ ಸ್ಪರ್ಧೆ ಬಯಸಿದ ತನ್ನನ್ನು ಅಂತಿಮಗೊಳಿಸಿರುವುದು ಸಂತಸ ತಂದಿದೆ.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿರುವಂತೆ ಒ.ಪಿ.ಎಸ್ ಜಾರಿಗೆ ಎನ್.ಇ.ಪಿ. ಬದಲಿಗೆ ಎಸ್.ಇ.ಪಿ. ಮುಂದುವರಿಕೆಗೆ ಕಾಂಗ್ರೆಸ್ ಬದ್ದವಾಗಿದೆ. ಇದನ್ನು ಮನಗಂಡು ಶಿಕ್ಷಕರು ಈ ಬಾರಿ ಕಾಂಗ್ರೆಸ್ ಅನ್ನು ಬೆಂಬಲಿಸಬೇಕಿದೆ. ಅನುದಾನಿತ, ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಸಮಸ್ಯೆಗಳನ್ನು ನಿವಾರಿಸಿ ಸೇವಾ ಭದ್ರತೆ ಕಲ್ಪಿಸುವಲ್ಲಿ ಕೂಡ ಪಕ್ಷ ಪ್ರಾತಿನಿದ್ಯ ನೀಡಲಿದೆ ಎಂದರು.