ಗುಡ್ಡೆಹೊಸೂರು, ಅ. ೨೫: ಇಲ್ಲಿನ ಬೊಳ್ಳುರು ಗ್ರಾಮದ ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಅಂಗವಾಗಿ ೯ ದಿನಗಳಲ್ಲಿ ಪ್ರತಿ ದಿನ ರಾತ್ರಿ ೭ ಗಂಟೆಯಿAದ ದೇವಿಗೆ ವಿವಿಧ ಅಲಂಕಾರ ಮಾಡಿ ಪೂಜೆ ನೆರವೇರಿಸಲಾಯಿತು.

ಪ್ರತಿನಿತ್ಯ ಗ್ರಾಮದ ಒಬ್ಬರಂತೆ ಪೂಜೆಯನ್ನು ನೆರವೇರಿಸಲಾಯಿತು. ಈ ಪೂಜಾ ಕಾರ್ಯವನ್ನು ಇಲ್ಲಿನ ಸಾರ್ವಜನಿಕ ಭಕ್ತರಿಂದ ಮತ್ತು ಗುಡ್ಡೆಹೊಸೂರು ಗೌಡ ಸಮಾಜದ ವತಿಯಿಂದ ನೆರವೇರಿಸಲಾಯಿತು. ಪೂಜಾ ಕಾರ್ಯದಲ್ಲಿ ಪ್ರತಿನಿತ್ಯ ಭಜನೆ ಕಾರ್ಯಕ್ರಮ ನಡೆಯಿತು. ಅಲ್ಲದೆ ಪ್ರತಿನಿತ್ಯ ಪ್ರಸಾದ ವಿತರಣೆ ಕಾರ್ಯ ನಡೆಯಿತು. ಕೊನೆಯ ದಿನ ಗುಡ್ಡೆಹೊಸೂರು ಗೌಡ ಸಮಾಜದ ಸದಸ್ಯರಾದ ಕುಂಬನ ಬೆಳ್ಯಪ್ಪ ಅವರಿಂದ ಅನ್ನಸಂತರ್ಪಣೆ ಕಾರ್ಯ ನಡೆಯಿತು.

ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಬಿ.ಪಿ. ಗುರುಬಸಪ್ಪ ಮತ್ತು ಮಂಡೆಪAಡ ಸೋಮಯ್ಯ(ರಘು) ಮತ್ತು ಸಮಾಜದ ಅಧ್ಯಕ್ಷರಾದ ಗುಡ್ಡೆಮನೆ ವಿಶ್ವಕುಮಾರ್ ಮತ್ತು ಸಮಾಜದ ಆಡಳಿತ ಮಂಡಳಿ ಮತ್ತು ಸದಸ್ಯರು ಹಾಗೂ ಸಾರ್ವಜನಿಕ ಭಕ್ತಾದಿಗಳು ಭಾಗವಹಿಸಿದ್ದರು. ಈ ದೇವಸ್ಥಾನದ ಅರ್ಚಕರಾದ ನಡುಮನೆ ಸತ್ಯ ಅವರು ಪೂಜಾ ಕಾರ್ಯ ನಡೆಸಿದರು.