ಮಡಿಕೇರಿ, ಅ. ೨೫ : ಈ ಬಾರಿಯ ಮಡಿಕೇರಿ ದಸರಾ ಉತ್ಸವದ ಸಾಂಸ್ಕೃತಿಕ ವೈಭವಕ್ಕೆ ವಿಶೇಷ ಕಳೆಯಂತೆ ಮೂಡಿಬಂದಿದ್ದು ಆಯುಧ ಪೂಜೆಯ ದಿನದ ರಾತ್ರಿ ಖ್ಯಾತ ಗಾಯಕ ವಿಜಯ ಪ್ರಕಾಶ್ ತಂಡದಿAದ ಮೂಡಿ ಬಂದ ಗಾನಸುಧೆ ಕಾರ್ಯಕ್ರಮ. ಹೆಸರಾಂತ ಗಾಯಕರ ಈ ಕಾರ್ಯಕ್ರಮ ಜನಾಕ ರ್ಷಣೆ ಪಡೆದು ಯುವ ಸಮೂಹ ಸೇರಿ ದಂತೆ ಸಂಗೀತ ಪ್ರಿಯರು ಮನಸೋತರು.

ನಗರದ ಗಾಂಧಿ ಮೈದಾನದ ಕಲಾ ಸಂಭ್ರಮದ ವರ್ಣ ರಂಜಿತ ವೇದಿಕೆಯಲ್ಲಿ ನಡೆದ ‘ಗಾನವೈಭವದಲ್ಲಿ' ವಿಜಯ ಪ್ರಕಾಶ್ ಅವರು ಹಾಡಿದ ಗಾನಕ್ಕೆ ಯುವಕ, ಯುವತಿಯರು ಕುಣಿದು ಕುಪ್ಪಳಿಸಿ, ಸಂಭ್ರಮಿಸಿದರು.

ವಿಜಯ ಪ್ರಕಾಶ್ ಅವರು ದೇವಿಸ್ತುತಿಯೊಂದಿಗೆ ತಮ್ಮ ಹಾಡು ಆರಂಭಿಸಿದರು. ಬೆಳಗಾಗೆದ್ದು ಯಾರ ಮುಖವ ನೋಡಿದೆ... ಕಾಣದಂತೆ ಮಾಯ ವಾದನು... ಸೇರಿದಂತೆ ಡಾ. ಪುನೀತ್ ರಾಜ್ ಕುಮಾರ್ ಅವರಿಗಾಗಿ 'ರಾಜ ಕುಮಾರ' ಚಿತ್ರದ ಬೊಂಬೆ ಹೇಳುತೈತೆ ಎಂಬ ಹಾಡನ್ನು ಹಾಡಿ ಯುವ ಸಮೂಹವನ್ನು ಎದ್ದು ಕುಣಿಯುವಂತೆ ಮಾಡುವುದರ ಜೊತೆಗೆ ಪುನೀತ್ ನೆನಪು ಎಲ್ಲರನ್ನು ಭಾವುಕರನ್ನಾಗಿಸಿತು. ಈ ಸಂದರ್ಭದಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಅವರನ್ನು ವೇದಿಕೆಗೆ ಆಹ್ವಾನಿಸಿ ಗಾನಕ್ಕೆ ಧ್ವನಿಗೂಡಿಸುವಂತೆ ಕೋರಿದ್ದು ವಿಶೇಷವಾಗಿತ್ತು. ಹಲವು ಹಾಡುಗಳನ್ನು ವಿಜಯ ಪ್ರಕಾಶ್ ಅವರು ಹಾಡಿ ಪ್ರೇಕ್ಷಕರ ಮನ ರಂಜಿಸಿದರು. ವಿಜಯ ಪ್ರಕಾಶ್ ತಂಡದದವರು ಮಡಿಕೇರಿ ಸಿಪಾಯಿ, ಯಾರೇ ನೀನು ರೋಜಾ ಹೂವೇ ಸೇರಿದಂತೆ ಹಲವು ಹಾಡುಗಳನ್ನು ಹಾಡಿ, ಪ್ರೇಕ್ಷಕರ ಮನ ಗೆದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ವಿಜಯ ಪ್ರಕಾಶ್ ಅವರು ಸ್ಥಳೀಯ ಶಾಸಕ ಡಾ. ಮಂಥರ್ ಗೌಡ ಅವರು ಹಲವು ವರ್ಷಗಳಿಂದ ಸ್ನೇಹಿತರು, ಆ ನಿಟ್ಟಿನಲ್ಲಿ ಮಡಿಕೇರಿ ದಸರಾಗೆ ಆಗಮಿಸಲು ಶಾಸಕರು ಕಾರಣ, ದಸರಾ ಕಾರ್ಯಕ್ರಮ ನೀಡಲು ಅವಕಾಶ ನೀಡಿದ ಶಾಸಕರು, ಜಿಲ್ಲಾಡಳಿತ ಹಾಗೂ ದಸರಾ ಸಮಿತಿಗೆ ಕೃತಜ್ಞತೆ ಹೇಳಿದರು. ಶಾಸಕ ಡಾ. ಮಂಥರ್ ಗೌಡ ಅವರು ಮಾತನಾಡಿ ಪ್ರತಿ ವರ್ಷ ಮಡಿಕೇರಿ ದಸರಾಗೆ ಆಗಮಿಸಿ ಹಾಡುವಂತಾಗಬೇಕು ಎಂದು ಕೋರಿದರು. ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಭೋಸರಾಜು, ಅರಕಲಗೂಡು ವಿಧಾನಸಭಾ ಕ್ಷೇತ್ರದ ಶಾಸಕ ಎ.ಮಂಜು, ನಂಜನಗೂಡು ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ್ ಧ್ರುವ ನಾರಾಯಣ, ಮಡಿಕೇರಿ ದಸರಾ ಸಮಿತಿ ಅಧ್ಯಕ್ಷೆ ಅನಿತಾ ಪೂವಯ್ಯ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಜಿ.ಪಂ. ಸಿಇಓ ವರ್ಣಿತ್ ನೇಗಿ, ದಸರಾ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ, ಕಾರ್ಯದರ್ಶಿ ರಾಜೇಶ್ ಯಲ್ಲಪ್ಪ, ಸಾಂಸ್ಕೃತಿಕ ಸಮಿತಿ ಅಧ್ಯಕ್ಷÀ ಅನಿಲ್ ಎಚ್.ಟಿ. ಇತರರು ಇದ್ದರು.