ವೀರಾಜಪೇಟೆ, ಅ. ೨೫: ವೀರಾಜ ಪೇಟೆಯ ರಾಜಸ್ತಾನ್ ವಿಷ್ಣು ಸಮಾಜ್ ವತಿಯಿಂದ ಗೋಣಿಕೊಪ್ಪಲು ರಸ್ತೆಯ ಲ್ಲಿರುವ ರಾಜರಾಜೇಶ್ವರಿ ಸಭಾಂಗಣ ದಲ್ಲಿ ಜನಪದ ಮತ್ತು ಸಾಂಸ್ಕೃತಿಕ ಶೈಲಿಯಲ್ಲಿ ನಡೆಸುವ ಗಾರ್ಭಾ ನೃತ್ಯ ಮೂಲಕ ನವರಾತ್ರಿ ಉತ್ಸವ ವಿಜೃಂ ಭಣೆಯಿಂದ ಆಚರಿಸಲಾಯಿತು.

ನವರಾತ್ರಿಗಳಲ್ಲಿ ದೇವಿಯು ನವ ದುರ್ಗೆಯಂತೆ ಕಂಗೊಳಿಸುತ್ತಾಳೆ. ಪ್ರತಿಯೊಂದು ದಿನದ ಮಹತ್ವದಂತೆ ಪುರುಷರು ಮತ್ತು ಮಹಿಳೆಯರು ಸಾಂಪ್ರದಾಯಿಕ ಉಡುಗೆ-ತೊಡುಗೆ ಗಳನ್ನು ತೊಟ್ಟು ಆಗಮಿಸಿ ಸಭಾಂಗ ಣದ ಮಧ್ಯ ಭಾಗದಲ್ಲಿ ಮಣ್ಣಿನ ದೀಪವನ್ನಿರಿಸಿ ವೃತ್ತಾಕಾರದಲ್ಲಿ ಗಾರ್ಭಾ ನೃತ್ಯ ಮಾಡುವುದು ಸಂಪ್ರದಾಯ. ಗಾರ್ಭಾ ದೀಪ್ ಎಂಬುದು ದೇವಿಯನ್ನು ಪ್ರತಿನಿಧಿ ಸುತ್ತದೆ. ದೇವಿ ಮತ್ತು ಅಸುರರ ಮಧ್ಯೆ ನಡೆಯುವ ನವ ದಿನಗಳ ಹೋರಾಟ ಭೀಕರತೆಯಿಂದ ಕೂಡಿರುತ್ತದೆ. ಅಸುರರನ್ನು ಸಂಹಾರ ಮಾಡಿದ ಕ್ಷಣ ದೇವಿಯು ತನ್ನ ರೌಧ್ರಾವತಾರವನ್ನು ಗಾರ್ಭಾ ನೃತ್ಯದ ಮೂಲಕ ಸಂತುಷ್ಟ ಗೊಳಿಸಲಾಗುತ್ತದೆ ಎಂದು ಪ್ರತೀತಿ. ಆದುದರಿಂದ ಕಠಿಣ ವೃತವನ್ನು ಆಚರಿಸಿ ಆಚರಣೆಯನ್ನು ನಡೆಸಲಾ ಗುತ್ತದೆ ಎಂದು ಸಮಾಜದ ಹಿರಿಯರಾದ ಮದನ್ ಕವರ್ ಅವರು ಪತ್ರಿಕೆಗೆ ಮಾಹಿತಿ ನೀಡಿದರು.

ಅಶೋಕ್ ಕುಮಾರ್ ಸುತಾರ್ ಅವರು ಮಾತನಾಡಿ, ಸಮಾಜದ ಮತ್ತು ಸಮುದಾಯದ ಏಳಿಗೆಗಾಗಿ ನವರಾತ್ರಿಗಳ ೯ ದಿನಗಳು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿAದ ಆಚರಿಸಲಾ ಗುತ್ತಿದೆ. ಸಮಾಜ ಬಾಂಧವರಿಗಾಗಿ ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸಲಾಗುತ್ತದೆ. ವಿದ್ಯಾರ್ಥಿಗಳಿಗಾಗಿ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪಠ್ಯೇತರ ಪರಿಕರಗಳನ್ನು ನೀಡಲಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಾಜಸ್ತಾನ್ ವಿಷ್ಣು ಸಮಾಜದ ಪದಾಧಿಕಾರಿಗಳು ಮತ್ತು ಸಮಾಜ ಬಾಂಧವರು ಹಾಜರಿದ್ದರು.

- ಕಿಶೋರ್ ಕುಮಾರ್ ಶೆಟ್ಟಿ