ವರದಿ: ಪುತ್ತರಿರ ಕರುಣ್ ಕಾಳಯ್ಯ

ಚೆಟ್ಟಳ್ಳಿ, ಅ. ೨೫ : ಈ ಬಾರಿಯ ಕೊಡಗಿನ ಪ್ರವಾಸಿ ತಾಣವಾದ ದುಬಾರೆಯಲ್ಲಿ ಪ್ರವಾಸಿಗರ ದಂಡು ದಸರಾ ರಜೆಯ ಮೋಜು ಮಸ್ತಿಯಲ್ಲಿ ತೊಡಗಿರುವ ದೃಶ್ಯ ಕಳೆದ ನಾಲ್ಕೆöÊದು ದಿನಗಳಿಂದ ಕಂಡುಬರುತ್ತಿವೆ.

ಕಳೆದ ಮೂರು ನಾಲ್ಕು ದಿನಗಳಿಂದ ವಾರದ ರಜೆೆ, ಆಯುಧ ಪೂಜೆ, ವಿಜಯ ದಸಮಿಯ ಸಾಲು ಸಾಲು ರಜೆಯಾದರೆ ಮಕ್ಕಳಿಗೆಲ್ಲ ಈ ಬಾರಿಯ ಶೈಕ್ಷಣಿಕ ವರ್ಷದ ದಸರಾ ರಜೆ. ಹೆಚ್ಚಿನ ಪೋಷಕರು ಮಕ್ಕಳೊಂದಿಗೆ ಕೊಡಗಿನ ಪ್ರವಾಸಿ ತಾಣದತ್ತ ಮುಖ ಮಾಡಿದರೆ ಯುವಕರು, ಮಹಿಳೆಯರು ಕುಟುಂಬದ ಸದಸ್ಯರುಗಳು ತಂಡೋಪತAಡವಾಗಿ ದುಬಾರೆಯ ಪ್ರವಾಸಿ ತಾಣದಲ್ಲಿ ‘ಎಂಜಾಯ್’ ಮಾಡುತ್ತಿರುವುದು ಕಂಡುಬರುತಿದ್ದವು.

ಬಿಸಿಲ ನಡುವೆ ದುಬಾರೆಯ ಹಿನ್ನೀರಲ್ಲಿ ಮಕ್ಕಳೊಂದಿಗೆ ಪೋಷಕರು ಕೂಡ ಮೈಮರೆಯುತ್ತಿದ್ದರೆ, ರ‍್ಯಾಫ್ಟಿಂಗ್‌ಗಳಲ್ಲಿ ಮೋಜು, ಬೋಟುಗಳ ಮೂಲಕ ಪ್ರವಾಸಿಗರ ದಂಡು ಸಾಕಾನೆ ಶಿಬಿರಕ್ಕೆ ತೆರಳಿ ಸುತ್ತಾಡುತ್ತಾ ಸಾಕಾನೆಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ದೃಶ್ಯ ಕಂಡು ಬರುತ್ತಿದ್ದವು.

ಟ್ರಾಫಿಕ್ ಜಾಮ್‌ನಿಂದ ಕಿರಿಕಿರಿ

ಪ್ರವಾಸಿಗರು ಇಕ್ಕಟ್ಟಿನ ದುಬಾರೆಯ ರಸ್ತೆಯಲ್ಲಿ ಕಾರು, ಜೀಪು, ಕ್ಯಾಬ್, ಟೆಂಪೊ, ಬೈಕ್, ಸ್ಕೂಟರ್‌ಗಳ ನಿರಂತರ ಸದಸ್ಯರುಗಳು ತಂಡೋಪತAಡವಾಗಿ ದುಬಾರೆಯ ಪ್ರವಾಸಿ ತಾಣದಲ್ಲಿ ‘ಎಂಜಾಯ್’ ಮಾಡುತ್ತಿರುವುದು ಕಂಡುಬರುತಿದ್ದವು.

ಬಿಸಿಲ ನಡುವೆ ದುಬಾರೆಯ ಹಿನ್ನೀರಲ್ಲಿ ಮಕ್ಕಳೊಂದಿಗೆ ಪೋಷಕರು ಕೂಡ ಮೈಮರೆಯುತ್ತಿದ್ದರೆ, ರ‍್ಯಾಫ್ಟಿಂಗ್‌ಗಳಲ್ಲಿ ಮೋಜು, ಬೋಟುಗಳ ಮೂಲಕ ಪ್ರವಾಸಿಗರ ದಂಡು ಸಾಕಾನೆ ಶಿಬಿರಕ್ಕೆ ತೆರಳಿ ಸುತ್ತಾಡುತ್ತಾ ಸಾಕಾನೆಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ದೃಶ್ಯ ಕಂಡು ಬರುತ್ತಿದ್ದವು.

ಟ್ರಾಫಿಕ್ ಜಾಮ್‌ನಿಂದ ಕಿರಿಕಿರಿ

ಪ್ರವಾಸಿಗರು ಇಕ್ಕಟ್ಟಿನ ದುಬಾರೆಯ ರಸ್ತೆಯಲ್ಲಿ ಕಾರು, ಜೀಪು, ಕ್ಯಾಬ್, ಟೆಂಪೊ, ಬೈಕ್, ಸ್ಕೂಟರ್‌ಗಳ ನಿರಂತರ ತರಬೇತಿ ಆನೆಗಳಿಗೆ ಕಿರಿಕಿರಿ

ಹಲವೆಡೆ ಮನುಷ್ಯರನ್ನು ಕೊಂದಿರುವುದು, ನಿರಂತರ ಫಸಲು ನಾಶ, ಪುಂಡಾಟಿಕೆ ತೋರಿದ ಕಾಡಾನೆಗಳನ್ನು ಸೆರೆ ಹಿಡಿದು ದುಬಾರೆ ಆನೆ ಶಿಬಿರಕ್ಕೆ ತಂದು ಪಳಗಿಸಲಾಗುತ್ತಿದ್ದು ಅವೆಲ್ಲ ತರಬೇತಿ ಹಂತದಲ್ಲಿವೆ. ಪ್ರವಾಸಿಗರು ಅತೀ ಸೂಕ್ಷö್ಮವಾದ ಸ್ವಭಾವ ಹೊಂದಿರುವ ಆನೆಯನ್ನು ಸ್ಪರ್ಶಿಸುವುದು, ಸೆಲ್ಪಿ, ಕಿರುಚಾಟದಿಂದ ಆನೆಗಳು ಕೆಲವೊಮ್ಮೆ ವಿಚಲಿತನಾಗುತ್ತಿದ್ದು, ಸಾಕಾನೆ ಶಿಬಿರದಲ್ಲಿ ಪ್ರವಾಸಿಗರನ್ನು ನಿಯಂತ್ರಿಸಲು ಸಾಧ್ಯ ವಿಲ್ಲದಂತಾಗಿದೆ.

ಶಿಫಾರಸ್ಸುಗಳ ಮೂಲಕ ಅಧಿಕಾರಿಗಳಿಗೆ ಒತ್ತಡ

ಹಲವು ಇಲಾಖಾಧಿಕಾರಿಗಳು ಕುಟುಂಬ ಸಮೇತರಾಗಿ ದುಬಾರೆಗೆ ಬಂದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮೇಲಧಿಕಾರಿಗಳಿಂದಲೂ, ವಿಧಾನ ಸೌಧದಿಂದಿಡಿದು ಶಾಸಕರು, ಸಚಿವರುಗಳಿಂದಲೆಲ್ಲ ಫೋನಾಯಿಸಿ ತಮ್ಮನ್ನು ಪ್ರತ್ಯೇಕವಾಗಿ ಉಪಚರಿಸುವಂತೆ ಒತ್ತಡ ಹೇರಲಾಗುತ್ತಿದೆ. ಐಡಿ ಕಾರ್ಡನ್ನು ತೋರಿಸಿ ತಾವು ಇಂತಹ ಇಲಾಖಾಧಿಕಾರಿಗಳು ನಮ್ಮನ್ನು ಪ್ರತ್ಯೇಕವಾಗಿ ಉಪಚರಿಸದಿದ್ದರೆ ನಿಮ್ಮ ಮೇಲಧಿಕಾರಿಗಳಿಗೆ ತಿಳಿಸಿ ನಿನ್ನ ಮೇಲೆ ಕಾನೂನು ಕ್ರಮ ವಹಿಸಲಾಗುವುದೆಂದು ಅರಣ್ಯ ಇಲಾಖಾಧಿಕಾರಿಗಳಿಗೆ ದಮಕಿ ಹಾಕುತ್ತಾರೆ. ಪ್ರವಾಸಿಗರು ಹೆಚ್ಚಾಗಿ ಬರುತ್ತಿರುವ ದಿನಗಳಲ್ಲಿ ದುಬಾರೆಯಲ್ಲಿ ಅರಣ್ಯ ಇಲಾಖಾಧಿಕಾರಿಗಳು, ಸಿಬ್ಬಂದಿಗಳು ಹೆಚ್ಚಿನ ನಿಗಾವಹಿಸುತ್ತಿದ್ದು ಪ್ರವಾಸಿಗರು ಇತರೆ ಇಲಾಖಾಧಿಕಾರಿಗಳ ಶಿಫಾರಸ್ಸುಗಳ ಒತ್ತಡದಿಂದ ಕರ್ತವ್ಯ ನಿಭಾಯಿಸಲು ತೊಂದರೆ ಅನುಭವಿಸುವಂತಾಗಿದೆÀ ಎನ್ನಲಾಗುತ್ತಿದೆ.