ಕುಶಾಲನಗರ, ಅ. ೨೫: ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ್ ಎಸ್. ವೈದ್ಯ ಅವರು ಜಿಲ್ಲೆಗೆ ಆಗಮಿಸಿದ್ದು, ಕುಶಾಲನಗರ ಗಡಿಭಾಗದಲ್ಲಿ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಬರಮಾಡಿಕೊಂಡರು.

ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು ಜಿಲ್ಲೆಯಲ್ಲಿ ಮೀನುಗಾರಿಕೆಗೆ ಪೂರಕವಾದ ಯೋಜನೆಗಳನ್ನು ಸರ್ಕಾರ ಕಲ್ಪಿಸಲಿದೆ ಎಂದರಲ್ಲದೆ ಮಹಾಶಿರ್ ತಳಿಯ ಮೀನಿನ ಸಂರಕ್ಷಣೆಗೆ ವಿಶೇಷ ಒತ್ತು ನೀಡಲಾಗುವುದು ಎಂದರು.

ಈ ಸಂದರ್ಭ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿ.ಪಿ. ಶಶಿಧರ್, ಕೆಪಿಸಿಸಿ ಸದಸ್ಯರಾದ ಮಂಜುನಾಥ ಗುಂಡುರಾವ್, ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್ ಮುತ್ತಪ್ಪ ಮತ್ತಿತರರಿದ್ದರು.

ತಾ.೨೬ರಂದು (ಇಂದು) ಸಚಿವರು ಬೆಳಿಗ್ಗೆ ೧೧ ಗಂಟೆಗೆ ಅಳಿವಿನ ಅಂಚಿನಲ್ಲಿರುವ ಮಹಾಶಿರಾ ತಳಿ ಮೀನಿನ ಮರು ಸಂತಾನೋತ್ಪತಿ ಹಾರಂಗಿಯ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ.

ನಂತರ ಮಧ್ಯಾಹ್ನ ೧.೩೦ ಗಂಟೆಗೆ ಮಡಿಕೇರಿ ತಾಲೂಕಿನ ಕಡಗದಾಳು ಗ್ರಾಮದ ಬಳಿ ಪ್ರಧಾನಮಂತ್ರಿ ಮತ್ಸö್ಯಸಂಪದ ಯೋಜನೆಯಡಿ ನಿರ್ಮಾಣವಾಗಿರುವ ಮೀನು ಮಾರಾಟ ಕೇಂದ್ರ ವೀಕ್ಷಣೆ ಮಾಡಲಿದ್ದಾರೆ ಎಂದು ಸಚಿವರ ಆಪ್ತ ಕಾರ್ಯದರ್ಶಿ ಪಿ.ಸಿ.ರವೀಂದ್ರ ತಿಳಿಸಿದ್ದಾರೆ.