ಗೋಣಿಕೊಪ್ಪಲು, ಅ. ೨೩: ಗೋಣಿಕೊಪ್ಪ ದಸರಾದಲ್ಲಿ ತಾ.೨೨ ರಂದು ನೃತ್ಯ ನಿರ್ದೇಶಕ ಅವಿನಾಶ್ ನೇತೃತ್ವದ 'ಎ ರಿಫ್ಲೆಕ್ಷನ್ ಡ್ಯಾನ್ಸ್' ತಂಡದಿAದ ನಡೆದ ನೃತ್ಯ ಕಾರ್ಯ ಕ್ರಮ ಪ್ರೇಕ್ಷಕರನ್ನು ರಂಜಿಸಿತು. ಕಾಂತಾರ, ಗಣೇಶ ಕಾನ್ಸೆಪ್ಟ್, ಅಘೋರಿ ನೃತ್ಯ ಸೇರಿದಂತೆ ಹಲವು ನೃತ್ಯಗಳು ನಡೆದವು. ತಂಡದ ಪುಟಾಣಿ ಮಕ್ಕಳ ನೃತ್ಯಕ್ಕೆ ಪ್ರೇಕ್ಷಕರು ಚಪ್ಪಾಳೆ ಮೂಲಕ ಪ್ರೋತ್ಸಾಹ ನೀಡಿದರು. ತಂಡದ ಗಾಯಕರಿಂದ ಹಾಡುಗಳು ಮೂಡಿಬಂದವು.

ಇದಕ್ಕೂ ಮುನ್ನ ನಡೆದ ಸ್ಥಳೀಯ ಸಾಂಸ್ಕೃತಿಕ ಕಾರ್ಯ ಕ್ರಮದಲ್ಲಿ ಕಲಾವಿದ ವಿ.ಟಿ. ಶ್ರೀನಿ ವಾಸ್ ತಂಡದಿAದ ನಡೆದ ವಾದ್ಯ ಸಂಗೀತ ಕಾರ್ಯಕ್ರಮ, ಗಾಯಕ ಲಾಲ್‌ಕುಮಾರ್ ಅವರ ಹಾಡು ಕೇಳು ಗರ ಕಿವಿಗೆ ಇಂಪು ನೀಡಿತು. ಕುಶಾಲ ನಗರ ತಂಡದಿAದ ಭರತನಾಟ್ಯ ಕಾರ್ಯಕ್ರಮ ಗಮನ ಸೆಳೆಯಿತು.