ಸೋಮವಾರಪೇಟೆ, ಅ. ೨೩: ಪಟ್ಟಣದ ಬಸ ವೇಶ್ವರ ರಸ್ತೆ ನಿವಾಸಿ, ಕಾಫಿ ಬೆಳೆಗಾರರಾದ ಎ.ಪಿ. ಶಂಕರಪ್ಪ ಅವರ ಪತ್ನಿ ಪಿ. ಶಾರದ ಶಂಕರಪ್ಪ ಅವರು ನವರಾತ್ರಿ ಹಬ್ಬದ ಪ್ರಯುಕ್ತ ೬೫ನೇ ವರ್ಷದ ಗೊಂಬೆ ಗಳನ್ನು ತಮ್ಮ ನಿವಾಸದಲ್ಲಿ ಇಟ್ಟು, ಪೂಜೆ ಸಲ್ಲಿಸುತ್ತಿದ್ದಾರೆ.

ಕಳೆದ ೬೫ ವರ್ಷಗಳಿಂದ ನವರಾತ್ರಿ ಗೊಂಬೆಗಳ ಪೂಜೆಯಿಂದಾಗಿ ಶಾರದ ಶಂಕರಪ್ಪ ಗಮನ ಸೆಳೆದಿದ್ದಾರೆ.

೬೫ ವರ್ಷಗಳ ಹಿಂದೆ ಬೆಂಗ ಳೂರಿನಿಂದ ಮದುವೆಯಾಗಿ ಬಂದ ಮೊದಲ ವರ್ಷದಿಂದಲೇ ನವರಾತ್ರಿ ಹಬ್ಬವನ್ನು ಚಿಕ್ಕದಾಗಿ ಪ್ರಾರಂಭಿಸಿದ ಇವರು, ನಂತರದ ದಿನಗಳಲ್ಲಿ ಗೊಂಬೆ ಗಳನ್ನಿಟ್ಟು ಪೂಜಿಸಲು ಆರಂಭಿಸಿದ್ದು, ಇದೀಗ ಸುತ್ತಮುತ್ತಲ ಸಾರ್ವಜನಿಕರ ಆಕರ್ಷಣೆಯ ಮನೆಯಾಗಿ ಶಂಕರಪ್ಪ ಅವರ ಮನೆ ಪರಿವರ್ತನೆಯಾಗಿದೆ.

ಸಾಮಾನ್ಯವಾಗಿ ಎಲ್ಲರೂ ವಿವಿಧ ಗೊಂಬೆಗಳನ್ನಿರಿಸಿ ಪೂಜೆ ಮಾಡು ವುದು ವಾಡಿಕೆ. ಆದರೆ, ಇಲ್ಲಿ ೯ ಅವತಾರಗಳಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಕೂಷ್ಮಾಂಡಾ ದೇವಿ, ಸ್ಕಂದ ಮಾತೆ, ಕಾತ್ಯಾಯಿನಿ, ಕಾಳ ರಾತ್ರಿ ದೇವಿ, ಮಹಾಗೌರಿ, ಆದಿಶಕ್ತಿ ದೇವಿಯ ಗೊಂಬೆಗಳನ್ನಿರಿಸಿ, ಅವು ಗಳಿಗೆ ಹೊಂದುವ ಸೀರೆಯನ್ನುಡಿಸಿ, ಆಭರಣಗಳಿಂದ ಸಿಂಗರಿಸಿ ಪೂಜೆ ನಡೆಸಲಾಗುತ್ತಿದೆ. ದಿನಂಪ್ರತಿ ವಿವಿಧ ತಿಂಡಿಗಳನ್ನು ಮಾಡಿ, ಬೆಳಿಗ್ಗೆ ಮತ್ತು ಸಂಜೆ ಪೂಜೆ, ಧ್ಯಾನ, ನಡೆಸುವುದ ರೊಂದಿಗೆ ಪೂಜೆಗೆ ಬಂದವರಿಗೆ ಫಲ ತಾಂಬೂಲ ನೀಡಲಾಗುತ್ತಿದೆ.

ಇವರ ತಂದೆ ಬೆಂಗಳೂರಿನಲ್ಲಿ ಶ್ರೀ ಗೌರಿ ಗಣೇಶ ಮೂರ್ತಿಗಳನ್ನು ಮರದಿಂದ ಆಕರ್ಷಕವಾಗಿ ಕೆತ್ತಿ ನೀಡಿದ್ದಾರೆ. ಅಂದು ಮಾಡಿಸಿದ ಬಣ್ಣ ಇಂದಿಗೂ ಮಾಸಿಲ್ಲ. ಅಲ್ಲದೆ, ಪೂಜೆಯಲ್ಲಿ ವಿವಿಧ ರಾಜ್ಯಗಳಿಂದ ತಂದಿರುವ ಖಡ್ಗ ಸೇರಿದಂತೆ ವಿವಿಧ ಪರಿಕರಗಳನ್ನಿಟ್ಟು ಪೂಜಿಸಲಾಗುತ್ತಿದೆ.

ಗೊಂಬೆಗಳನ್ನು ಪೀಠ ಮಾಡಿಕೊಂಡು, ಮಣ್ಣಿನ ಮಡಿಕೆ ಯಲ್ಲಿ ಅಕ್ಕಿ ಹಾಕಿ, ಕಳಸ ಮಾಡಿ ಕೊಂಡು ಅವುಗಳಿಗೆ ಮುಖವಾಡ ಹಾಕಲಾಗುತ್ತದೆ. ಎಲ್ಲ ಗೊಂಬೆಗ ಳಿಗೂ ಹೊಸ ಸೀರೆಯನ್ನು ಉಡಿಸಿ ಅಲಂಕಾರ ಮಾಡಿರುವುದು ವಿಶೇಷ. ಮದುವೆಯಾಗಿ ಬೆಂಗಳೂರಿನಿAದ ಸೋಮವಾರಪೇಟೆಗೆ ಬಂದ ವರ್ಷದಲ್ಲಿಯೇ ತವರು ಮನೆಯಿಂದ ದಸರ ಗೊಂಬೆಗಳನ್ನು ತಂದು ಪೂಜೆ ಪ್ರಾರಂಭ ಮಾಡಿದೆ. ಅದು ನನ್ನ ತಾಯಿಯಿಂದ ಬಂದ ಬಳುವಳಿ, ಅದನ್ನು ಉಳಿಸಿ ಬೆಳೆಸಿಕೊಂಡು ಹೋಗು ತ್ತಿದ್ದೇನೆ. ನಮ್ಮ ಕಲೆ, ಸಂಸ್ಕೃತಿಯನ್ನು ಉಳಿಸಿ ಮುಂದುವರೆಸಿಕೊAಡು ಹೋಗಬೇಕಾಗಿದೆ ಎಂದು ಶಾರದ ಅವರು ಅಭಿ ಪ್ರಾಯಿಸಿದ್ದಾರೆ.

೯ ದಿನಗಳ ಪೂಜೆಯ ನಂತರ ಕೊನೆಯ ದಿನದಂದು ತೋಟದ ಲ್ಲಿರುವ ಸುಮಾರು ೨೦೦ ವರ್ಷಕ್ಕೂ ಹಳೆಯ ಬನ್ನಿ ಮರದಿಂದ ಬನ್ನಿ ಯನ್ನು ತಂದು ಪೂಜೆ ಮಾಡಿ ಗೊಂಬೆಗಳನ್ನು ತೆಗೆದು ಪೆಟ್ಟಿಗೆಯಲ್ಲಿ ಇರಿಸಲಾಗುವುದು. ಇತ್ತೀಚಿನ ದಿನಗಳಲ್ಲಿ ಗೊಂಬೆ ಕೂರಿಸಿ ೯ ದಿನಗಳು ಪೂಜೆ ಮಾಡುವುದು ಕಡಿಮೆಯಾಗುತ್ತಿದೆ. ಮಹಿಳೆಯರು ಪೂಜೆಯನ್ನು ಮಾಡುವುದರೊಂದಿಗೆ ತಮ್ಮ ಮಕ್ಕಳಿಗೂ ಇದರ ಮಹತ್ವವನ್ನು ತಿಳಿ ಹೇಳುವ ಮೂಲಕ ನಮ್ಮ ಸಂಸ್ಕೃತಿಯನ್ನು ಉಳಿಸಲು ಮುಂದಾಗಬೇಕಿದೆ ಎಂದು ಶಾರದ ಶಂಕರಪ್ಪ ಸಲಹೆ ನೀಡಿದ್ದಾರೆ.