ಮಡಿಕೇರಿ, ಅ. ೨೩: ಮತದಾರರ ನೋಂದಣಿ ನಿಯಮಗಳು ೧೯೬೦ರ ೩೧(೪) ನೇ ನಿಯಮದ ಅನುಸಾರ ಕರ್ನಾಟಕ ನೈರುತ್ಯ ಪದವೀಧರ ಮತಕ್ಷೇತ್ರಗಳ ಮತದಾರರ ನೋಂದಣಾಧಿಕಾರಿಗಳು ಸೆಪ್ಟೆಂಬರ್, ೩೦ ರಂದು ಪ್ರಕಟಿಸಲಾದ ಸೂಚನೆಯಲ್ಲಿ ಸಂಬAಧಿಸಿದ ಪದವೀಧರರ ಮತ ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಲು ಅರ್ಹರಿರುವ ಪ್ರತಿಯೊಬ್ಬ ವ್ಯಕ್ತಿಯು ಮತದಾರರ ನೋಂದಣಿ ನಿಯಮಗಳು ೧೯೬೦ ಕ್ಕೆ ಲಗತ್ತಿಸಿರುವ ಮತ್ತು ಸೆಪ್ಟೆಂಬರ್ ೩೦ ರಂದು ದಿನಪತ್ರಿಕೆಗಳಲ್ಲಿ ಹಾಗೂ ಅಕ್ಟೋಬರ್, ೧೬ ರಂದು ಪ್ರಕಟಿಸಲಾಗಿರುವ ಎರಡನೇ ಅನುಸೂಚಿಯಲ್ಲಿ ಪುನರುದ್ಧರಿಸಿರುವ ನಮೂನೆ-೧೮ ರಲ್ಲಿ ಅರ್ಜಿಯನ್ನು ನವೆಂಬರ್, ೦೬ ಅಥವಾ ಅದಕ್ಕೂ ಮೊದಲು ಸಂಬAಧಪಟ್ಟ ಮತದಾರರ ನೋಂದಾಣಾಧಿಕಾರಿಗಳ ಕಚೇರಿಗೆ ಕಳುಹಿಸಲು ಕೋರಲಾಗಿತ್ತು.
ಎಲ್ಲಾ ವ್ಯಕ್ತಿಗಳು ತಮ್ಮ ಹೆಸರನ್ನು ಇದುವರೆಗೂ ಸೇರಿಸದೇ ಇದ್ದಲ್ಲಿ ನಿಗದಿತ ನಮೂನೆ-೧೮ ರಲ್ಲಿ ನವೆಂಬರ್, ೦೬ ಅಥವಾ ಅದಕ್ಕೂ ಮುಂಚೆ ಅರ್ಜಿ ಸಲ್ಲಿಸಬಹುದು. ಈ ವಿವರಗಳು ಮುಖ್ಯ ಚುನಾವಣಾಧಿಕಾರಿಗಳು, ಕರ್ನಾಟಕ ಇವರ ವೆಬ್ಸೈಟ್ ವಿಳಾಸ ತಿತಿತಿ.ಛಿeoಞಚಿಡಿಟಿಚಿಣಚಿಞಚಿ.ಞಚಿಡಿ.ಟಿiಛಿ.iಟಿ ರಲ್ಲಿ ಲಭ್ಯವಿದೆ ಎಂದು ಮೈಸೂರು ವಿಭಾಗದ ಕರ್ನಾಟಕ ನೈರುತ್ಯ ಶಿಕ್ಷಕರ ಮತ್ತು ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರದ ಮತದಾರರ ನೋಂದಣಾಧಿಕಾರಿ ಅವರು ತಿಳಿಸಿದ್ದಾರೆ.