ಸಿದ್ದಾಪುರ, ಅ. ೨೨: ಜೇನುಕುರುಬರ ಮನೆತನದ ಕಕ್ಕೇರಿ ಕುಟುಂಬಸ್ಥರು ತಿತಿಮತಿ ಸರ್ಕಾರಿ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ೫ ದಿನಗಳ ಕ್ರೀಡೋತ್ಸವ ಸಂಭ್ರಮದ ತೆರೆಕಂಡಿದೆ.
ಜೇನು ಕುರುಬರ ಯುವಕರ ಅಭಿವೃದ್ಧಿ ಸಂಘದ ನೇತೃತ್ವದಲ್ಲಿ ಆಯೋಜಿಸಿದ್ದ ೫ನೇ ವರ್ಷದ ಕ್ರೀಡೋತ್ಸವದಲ್ಲಿ ಕ್ರಿಕೆಟ್ ಪಂದ್ಯಾವಳಿ, ಹಗ್ಗ ಜಗ್ಗಾಟ, ಕಪ್ಪೆ ಜಿಗಿತ, ಮ್ಯೂಸಿಕಲ್ ಚೇರ್ ಸೇರಿದಂತೆ ಮಹಿಳೆಯರು, ಪುರುಷರು, ಮಕ್ಕಳಿಗೆ ಹಲವಾರು ಕ್ರೀಡಾ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಮೈಸೂರು ಜಿಲ್ಲಾ ಜೇನುಕುರುಬರ ಸಂಘದ ಅಧ್ಯಕ್ಷ ಜಿ.ಟಿ. ರಾಜಪ್ಪ ಮಾತನಾಡಿ, ಹಲವು ವರ್ಷ ಗಳಿಂದಲೂ ಕಾಡಂಚಿನಲ್ಲಿ ಮೂಲಸೌಕರ್ಯ ವಂಚಿತರಾಗಿ ಬದುಕು ಸಾಗಿಸುತ್ತಿರುವ ಜೇನು ಕುರುಬರನ್ನ ಸರ್ಕಾರ ಮುಖ್ಯ ವಾಹಿನಿಗೆ ತರುವ ಕೆಲಸ ಮಾಡಬೇಕಾಗಿದೆ.
ಆದಿವಾಸಿ ಮುಖಂಡ ಜೆ.ಕೆ ಅಪ್ಪಾಜಿ ಮಾತನಾಡಿ, ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಸಮುದಾಯದ ಬಾಂಧವರನ್ನ ಒಗ್ಗೂಡಿಸುವ ಕೆಲಸವಾಗುತ್ತಿದೆ ಎಂದರು. ಜೇನು ಕುರುಬ ಯುವಕರ ಅಭಿವೃದ್ದಿ ಸಂಘದ ಅಧ್ಯಕ್ಷ ಜೆ.ಬಿ ಸತೀಶ್ ಮಾತನಾಡಿ ೫ನೇ ವರ್ಷದ ಅಂಗವಾಗಿ ಕ್ರೀಡಾ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸ ಲಾಗಿದ್ದು, ಕ್ರಿಕೆಟ್ ಪಂದ್ಯಾಟದಲ್ಲಿ ಸುಮಾರು ೫೦ ತಂಡಗಳು ಭಾಗವಹಿಸಿವೆ ಎಂದು ತಿಳಿಸಿದರು. ಸಮಾರೋಪ ಸಮಾರಂಭದಲ್ಲಿ ನಾಣಚ್ಚಿ ಗದ್ದೆ ಹಾಡಿಯ ರಮೇಶ್ ಕಲಾತಂಡದವರಿAದ ಆದಿವಾಸಿ ಸಂಸ್ಕೃತಿಯ ಸಂಗೀತ ಕಾರ್ಯಕ್ರಮಗಳು ಗಮನ ಸೆಳೆಯಿತು.
ಈ ಸಂದರ್ಭ ಕರ್ನಾಟಕ ಕುರುಬರ ಸಂಘದ ರಾಜ್ಯ ಅಧ್ಯಕ್ಷೆ ಪ್ರಭಾವತಿ, ಮೈಸೂರು ಜಿಲ್ಲಾ ಜೇನು ಕುರುಬರ ಸಂಘದ ಜಿಲ್ಲಾ ಕಾರ್ಯದರ್ಶಿ ಚಂದ್ರು, ತಾಲೂಕು ಅಧ್ಯಕ್ಷ ಸಿದ್ದು, ಉಪಾಧ್ಯಕ್ಷ ಬಸವಣ್ಣ, ಜೇನು ಕುರುಬ ಯುವಕರ ಅಭಿವೃದ್ದಿ ಸಂಘದ ಉಪಾಧ್ಯಕ್ಷ ಮನು, ಕಾರ್ಯದರ್ಶಿ ಜೆ.ಟಿ. ಅಯ್ಯಪ್ಪ, ಖಜಾಂಜಿ ಶಿವು, ಗ್ರಾ. ಪಂ. ಸದಸ್ಯರಾದ ಅಪ್ಪಣ್ಣ, ಅಪ್ರೊಜ್, ಕಕ್ಕೇರಿ ಜೇನು ಕುರುಬ ಮನೆತನದ ರಮೇಶ್, ಕುಮಾರ್, ಅಜೇಯ್, ನಿತಿನ್, ಅದಿವಾಸಿ ಮುಖಂಡರಾದ ಹರೀಶ್, ಮೋಹನ್ ಪೂಜಾರಿ, ಶ್ಯಾಮ್, ಅಪ್ಪಣ್ಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
-ಎಸ್.ಎಂ. ಮುಬಾರಕ್