ಮಡಿಕೇರಿ, ಅ. ೨೨: ಶ್ರೀಲಂಕಾದಲ್ಲಿ ಇತ್ತೀಚೆಗೆ ನಡೆದ ಮಾಸ್ಟರ್ಸ್ ಹಾಕಿ ಲೀಗ್ನಲ್ಲಿ ೩೫+ ವಿಭಾಗದಲ್ಲಿ ಕೊಡಗಿನ ಕೂರ್ಗ್ ಮಾಸ್ಟರ್ಸ್ ಮಹಿಳಾ ಹಾಕಿ ತಂಡದವರು ಪಾಲ್ಗೊಂಡಿದ್ದರು. ಶ್ರೀಲಂಕಾ ಮಾಸ್ಟರ್ಸ್, ಕೊಲಂಬೊ ಮಾಸ್ಟರ್ಸ್, ಕ್ಯಾಂಡಿ ಮಾಸ್ಟರ್ಸ್ ಸೇರಿದಂತೆ ಒಟ್ಟು ನಾಲ್ಕು ತಂಡಗಳು ಈ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದವು.
ಕೊಡಗು ತಂಡದ ಆಟಗಾರ್ತಿಯರಾಗಿ ಓಡಿಯಂಡ ಜಾನ್ಸಿರಾಜ (ಅನಿಲ) ಕಾಂಡAಡ ರೀನಾ ದೇವಯ್ಯ, ಕಡೇಮಾಡ ಆರ್. ಮುತ್ತಮ್ಮ, ಶಾಂತೆಯAಡ ಶ್ವೇತಾ ಕಾರ್ಯಪ್ಪ, ಪೊಕ್ಕಳಿಚಂಡ ಮಮತಾ ಹರೀಶ್, ಪರದಂಡ ಮಮತಾಪ್ರಭು, ಕುಳಿಯಕಂಡ ಪ್ರವೀಣ್ ಅಪ್ಪಣ್ಣ, ಅರಮಣಮಾಡ ಶಕುನಾ ಮಾದಪ್ಪ, ಮೂಕಳೆರ ಮೀರಾ ಅಶೋಕ್, ಕಂಬೀರAಡ ರಾಖಿ ಗಣಪತಿ, ಮಲಚೀರ ಯಶೋಧ ದೇವಯ್ಯ, ಮಾಚಿಮಂಡ ಝರೀನಾ (ತಂಡದ ನಾಯಕಿ), ನೆಲ್ಲಚಂಡ ಹೇಮಾ ನಾಣಯ್ಯ ಪಾಲ್ಗೊಂಡಿದ್ದರು. ತಂಡದ ಕೋಚ್ ಆಗಿ ಅಮ್ಮಣಿಚಂಡ ಸೋಮಯ್ಯ, ವ್ಯವಸ್ಥಾಪಕರಾಗಿ ಅಮ್ಮಣಿಚಂಡ ತೇಜಶ್ರೀ ಹಾಗೂ ಕಾರ್ಯದರ್ಶಿಯಾಗಿ ಮಧು ನರಸಿಂಹಮೂರ್ತಿ ಭಾಗವಹಿಸಿದ್ದರು.