ಮಡಿಕೇರಿ, ಅ. ೨೩ : ಮಡಿಕೇರಿ ದಸರಾ ಅಂಗವಾಗಿ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ತಾ. ೨೨ರಂದು ಮಹಿಳಾ ದಸರಾ ಅಂಗವಾಗಿ ವಿವಿಧ ಕಾರ್ಯಕ್ರಮಗಳು ಜರುಗಿದವು. ಮೈಸೂರಿನ ಗಾಯಕಿ ಶುಭ ರಾಘವೇಂದ್ರ ತಂಡದಿAದ ಸಂಗೀತ ಕಾರ್ಯಕ್ರಮ, ಕೊಡವ ಸಮಾಜ ಮಹಿಳಾ ತಂಡದಿAದ ನೃತ್ಯ, ಮಡಿಕೇರಿ ಮಹಿಳಾ ವಕೀಲರ ತಂಡ; ಕೊಡಗು ಗೌಡ ಮಹಿಳಾ ಒಕ್ಕೂಟ, ಹಿಂದೂ ಮಲಯಾಳಿ ಸಂಘ ಮಡಿಕೇರಿ ಹಾಗೂ ಮೂರ್ನಾಡು, ಚೌಡೇಶ್ವರಿ ದೇವಾಂಗ ಮಹಿಳಾ ಸಮಾಜ, ನರಿಯಂದಡದ ಅಯ್ಯಪ್ಪ ಯುವತಿ ಮಂಡಳಿ, ಡೈಮಂಡ್ ಗರ್ಲ್ ಮಡಿಕೇರಿ ತಂಡದವರಿAದ ವೈವಿಧ್ಯಮಯ ಕಾರ್ಯಕ್ರಮಗಳು ಮೂಡಿಬಂದವು.