ಮಡಿಕೇರಿ, ಅ. ೨೨: ಕತ್ತಲ ನಡುವೆ ಕಣ್ಣುಕುಕ್ಕುವ ಬೆಳಕಿನ ಚಿತ್ತಾರ, ಅದ್ದೂರಿ ವೇದಿಕೆಯಲ್ಲಿ ನೃತ್ಯಗಳ ಆಕರ್ಷಣೆ, ಇದನ್ನು ಕಣ್ತುಂಬಿಕೊಳ್ಳಲು ಸಾಕ್ಷಿಯಾದ ಜನಸಾಗರ, ಜೊತೆಗೆ ಎದೆಝಲ್ಲೆನ್ನಿಸಿದ ಡಿಜೆ, ಅಬ್ಬರ ಸೃಷ್ಟಿಸಿದ ಚಂದನ್ ಶೆಟ್ಟಿ ಗಾಯನ, ಸಂಭ್ರಮಕ್ಕೆ ಕಾರಣವಾದ ಯುವದಸರಾ...

ಮಡಿಕೇರಿಯ ಗಾಂಧಿ ಮೈದಾನದಲ್ಲಿ ಕಲಾಸಂಭ್ರಮ ವೇದಿಕೆಯಲ್ಲಿ ದಸರಾ ಜನೋತ್ಸವ ಅಂಗವಾಗಿ ಶನಿವಾರ ರಾತ್ರಿ ನಡೆದ ಯುವದಸರಾ ಕೇವಲ ಯುವ ಸಮೂಹವನ್ನು ಮಾತ್ರವಲ್ಲದೆ ಎಲ್ಲಾ ವಯೋಮಾನದವರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಯಿತು.

ಸಹಸ್ರ ಸಂಖ್ಯೆಯ ಪ್ರೇಕ್ಷಕರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಂಭ್ರಮ ಅನುಭವಿಸಿದರು. ಗ್ಯಾಲರಿ ಪೂರ್ಣಗೊಳ್ಳುವುದಲ್ಲದೆ ಸುತ್ತಮುತ್ತಲು ಸಾವಿರಾರು ಜನರು ನಿಂತು ಯುವದಸರಾ ಕಣ್ತುಂಬಿಕೊAಡರು.

ಚಂದನ್ ಶೆಟ್ಟಿ ಗಾಯನಕ್ಕೆ ಜನತೆ ಫಿದಾ

ಕನ್ನಡದ ರ‍್ಯಾಪರ್, ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಹಾಡುಗಳು ನೆರೆದಿದ್ದ ಜನಸ್ತೋಮವನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತು. ಅವರೇ ಸಮೂಹವನ್ನು ಮಾತ್ರವಲ್ಲದೆ ಎಲ್ಲಾ ವಯೋಮಾನದವರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಯಿತು.

ಸಹಸ್ರ ಸಂಖ್ಯೆಯ ಪ್ರೇಕ್ಷಕರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಂಭ್ರಮ ಅನುಭವಿಸಿದರು. ಗ್ಯಾಲರಿ ಪೂರ್ಣಗೊಳ್ಳುವುದಲ್ಲದೆ ಸುತ್ತಮುತ್ತಲು ಸಾವಿರಾರು ಜನರು ನಿಂತು ಯುವದಸರಾ ಕಣ್ತುಂಬಿಕೊAಡರು.

ಚಂದನ್ ಶೆಟ್ಟಿ ಗಾಯನಕ್ಕೆ ಜನತೆ ಫಿದಾ

ಕನ್ನಡದ ರ‍್ಯಾಪರ್, ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಹಾಡುಗಳು ನೆರೆದಿದ್ದ ಜನಸ್ತೋಮವನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತು. ಅವರೇ (ಮೊದಲ ಪುಟದಿಂದ) ‘ಡ್ಯಾನ್ಸ್ ಲ್ಯಾಬ್' ಮಾಡಿದ ಸಾಹಸಭರಿತ ಆಪ್ತಮಿತ್ರ ಸಿನಿಮಾದ ನೃತ್ಯರೂಪಕ ಮೈ ನಡುಗಿಸುವಂತೆ ಮಾಡಿತು. 'ಯುನೈಟೆಡ್ ಕಿಂಗ್‌ಡA' ಪ್ರದರ್ಶಿಸಿದ ರಾಮ-ರಾವಣ ಯುದ್ಧ ಸನ್ನಿವೇಶ ರೋಮಾಂಚನಕಾರಿಯಾಗಿತ್ತು. ವೀರಾಜಪೇಟೆ ಸೆಂಟ್ ಆ್ಯನ್ಸ್ ಕಾಲೇಜು ವಿದ್ಯಾರ್ಥಿಗಳು ದೇಶಪ್ರೇಮ ಬಿಂಬಿಸುವ ನೃತ್ಯ ಮಾಡಿದರು. ನಾಟ್ಯಕಲಾ ನೃತ್ಯ ತಂಡದ ಫ್ಯೂಶನ್ ನೃತ್ಯ ಎಲ್ಲರ ಗಮನ ಸೆಳೆಯಿತು. ಕಿಂಗ್ಸ್ ಆಫ್ ಕೂರ್ಗ್ ತಂಡ ರಾಮಾಯಣವನ್ನು ನೃತ್ಯದ ಮೂಲಕ ಕಟ್ಟಿಕೊಟ್ಟು ಹೊಸಲೋಕಕ್ಕೆ ಪ್ರೇಕ್ಷಕರನ್ನು ಕೊಂಡೊಯ್ತು. ಖಾಸಗಿವಾಹಿನಿಯ ರಿಯಾಲಿಟಿ ಶೋ ಡ್ಯಾನ್ಸ್ ಕರ್ನಾಟಕ ಡ್ಯಾನ್‌ನ ವಿಜೇತ ರಾಹುಲ್ ರಾವ್ ಅವರ ತಂಡದ ವಿಶೇಷ ನೃತ್ಯ ಮನಸೊರೆಗೊಳಿಸಿತು. ನೃತ್ಯ ಸ್ಪರ್ಧೆಯ ತೀರ್ಪುಗಾರರಾಗಿ ಅನುಶ್ರೀ, ರಾಘವೇಂದ್ರ, ರೋಶನ್ ಕಾರ್ಯನಿರ್ವಹಿಸಿದರು. ಸುಳ್ಯದ ರಂಗಮಯೂರಿ ತಂಡದಿAದ ಸ್ವಾಗತ ನೃತ್ಯ ಮನತಣಿಸಿದರೆ, ವಿನಾಯಕ ವಾದ್ಯ ತಂಡದಿAದ ವಾಲಗ ಪ್ರದರ್ಶನ ಹುಚ್ಚೆದು ಕುಣಿಯುವಂತೆ ಮಾಡಿತು.

ಚಿನ್ನದ ಟ್ರೋಫಿಗೆ ಮುತ್ತಿಕ್ಕಿದ ‘ಡ್ಯಾನ್ಸ್ ಲ್ಯಾಬ್'

ನೃತ್ಯ ಸ್ಪರ್ಧೆಯಲ್ಲಿ 'ಡ್ಯಾನ್ಸ್ ಲ್ಯಾಬ್' ಪ್ರಥಮ ಸ್ಥಾನ ಪಡೆದುಕೊಳ್ಳುವ ಮೂಲಕ ಚಿನ್ನದ ಟ್ರೋಫಿಗೆ ಮುತ್ತಿಕ್ಕಿತು.

ದ್ವಿತೀಯ ಸ್ಥಾನ ಪಡೆದ ಕಿಂಗ್ಸ್ ಆಫ್ ಕೂರ್ಗ್ ಬೆಳ್ಳಿ ಟ್ರೋಫಿ, ತೃತೀಯ ಸ್ಥಾನವನ್ನು ಪಡೆದು ನಾಟ್ಯಕಲಾ ಮಂಡಳಿ ಕಂಚಿನ ಟ್ರೋಫಿ ತನ್ನದಾಗಿಸಿಕೊಂಡಿತು. ಸಮಾಧಾನಕರ ಬಹುಮಾನವನ್ನು ವೀರಾಜಪೇಟೆ ಸೆಂಟ್ ಆ್ಯನ್ಸ್ ಕಾಲೇಜು ಪಡೆದುಕೊಂಡಿತು. ಅಬ್ಬರಿಸಿದ ರಷ್ಯನ್ ಡಿಜೆ ಹೆಸÀರಾಂತ ರಷ್ಯನ್ ಮೂಲದ ಮಹಿಳಾ ಡಿಜೆ ಆಗಿರುವ ಪಾಸಿಟಿವಾ ಹಾಗೂ ಜಿಲ್ಲೆಯ ಡಿ.ಜೆ. ತ್ರಿಡಿ ಸೋಮು ಮಾಡಿದ ಸಂಗೀತ ಮೋಡಿಗೆ ಪ್ರೇಕ್ಷಕರು ಹುಚ್ಚೆದ್ದು ಕುಣಿದರು.

ಎದೆಝಲ್ಲೆನ್ನಿಸುವ ಸಂಗೀತದ ಏರಿಳಿತ ಪ್ರೇಕ್ಷಕರನ್ನು ಕುಣಿದು ಕುಪ್ಪಳಿಸುವಂತೆ ಮಾಡಿತು. ಕೊಡಗಿನ ವಾಲಗ, ಬುಡಕಟ್ಟು ಜನರ ಹಾಡಿಗೆ ನೀಡಿದ ಫ್ಯೂಷನ್ ಸ್ಪರ್ಶಕ್ಕೆ ಜನ ಮನಸೋತು ಹೆಜ್ಜೆ ಹಾಕಿದರು.

೨೦೨೪ರ ಅಂತ್ಯಕ್ಕೆ ಕೊಡಗಿಗೆ ಹೆದ್ದಾರಿ - ಪ್ರತಾಪ್ ಸಿಂಹ

೨೦೨೪ರ ಅಂತ್ಯದೊಳಗೆ ಮೈಸೂರು - ಕುಶಾಲನಗರ ಹೆದ್ದಾರಿ ನಿರ್ಮಾಣವಾಗಲಿದೆ ಎಂದು ಕೊಡಗು ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಭರವಸೆ ನೀಡಿದರು.

ಯುವದಸರಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಬೆಂಗಳೂರು-ಮೈಸೂರು ನಡುವೆ ದಶಪಥ ಹೆದ್ದಾರಿ ಬಳಿಕ ಸಂಚಾರ ಸುಲಭವಾಗಿದೆ. ಅದೇ ರೀತಿ ೨೦೨೪ರ ಹೊತ್ತಿಗೆ ಮೈಸೂರು ಮಡಿಕೇರಿ ೪ ಪಥ ಹೆದ್ದಾರಿ ಖಂಡಿತವಾಗಿ ನಿರ್ಮಾಣವಾಗಿ ಸೇವೆಗೆ ಲಭ್ಯವಾಗಲಿದೆ ಎಂದು ಭರವಸೆ ನೀಡಿದ ಅವರು, ಯುವಜನಪ್ರತಿನಿಧಿಗಳ ಮೇಲೆ ಕೊಡಗಿನ ಜನ ನಂಬಿಕೆ ಇಟ್ಟಿದ್ದೀರ. ಅದನ್ನು ಉಳಿಸುವ ಕೆಲಸ ಮಾಡುತ್ತೇವೆ ಎಂದರು.

ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಯುವಶಕ್ತಿ ಸಮಾಜಕ್ಕೆ ಮುಖ್ಯ. ದಸರಾಕ್ಕೆ ಕಳೆ ತರುವುದು ಯುವಸಮೂಹ. ಯೌವನದಲ್ಲಿ ಹುಮ್ಮಸ್ಸು ಇರುತ್ತದೆ. ತಪ್ಪನ್ನು ತಿದ್ದಿಕೊಂಡು ಮುನ್ನುಗಿ ಗುರಿ ಸಾಧಿಸಬೇಕು. ಪ್ರಸ್ತುತ ಕಾಲಘಟ್ಟದಲ್ಲಿ ಉದ್ಯೋಗ ಪಡೆಯುವುದು ಮುಖ್ಯ. ಸೋಲಿನಿಂದ ಮರುಗುತ್ತಿರುವ ಪರಿಣಾಮ ಯುವಕರು ತಪ್ಪು ದಾರಿಯತ್ತ ಹೋಗಿ, ದುಷ್ಚಟಕ್ಕೆ ದಾಸರಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಇದರಿಂದ ಕೇವಲ ನಿಮಗಲ್ಲ, ಸಮಾಜಕ್ಕೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಹೇಳಿದರು.

ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಬಿ.ಬಿ. ಭಾರತೀಶ್ ಮಾತನಾಡಿ, ಮಡಿಕೇರಿ ದಸರಾ ದೇಶದ ಗಮನ ಸೆಳೆದಿದೆ. ಸಂಸ್ಕೃತಿಯನ್ನು ಬಿಂಬಿಸುವ ಜೊತೆಗೆ ಮನರಂಜನೆ ನೀಡುತ್ತಿದೆ ಎಂದರು.

ಯುವದಸರಾ ಸಮಿತಿ ಮಾಜಿ ಅಧ್ಯಕ್ಷ ಆರ್.ಬಿ. ರವಿ ಪ್ರಾಸ್ತಾವಿಕವಾಗಿ ಮಾತನಾಡಿ ಯುವ ದಸರಾ ನಡೆದು ಬಂದ ದಾರಿಯನ್ನು ನೆನೆದರು.

ಮಡಿಕೇರಿ ನಗರಸಭೆ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದಸರಾ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ ರಾಜೇಶ್ ಯಲ್ಲಪ್ಪ, ಖಜಾಂಜಿ ಅರುಣ್ ಶೆಟ್ಟಿ, ಗೌರವಾಧ್ಯಕ್ಷ ಮಹೇಶ್ ಜೈನಿ, ಅರುಣ್ ಶೆಟ್ಟಿ, ಹಿರಿಯ ಸಲಹೆಗಾರ ಬೈ.ಶ್ರೀ. ಪ್ರಕಾಶ್, ಯುವ ದಸರಾ ಸಮಿತಿ ಅಧ್ಯಕ್ಷ ಕವನ್ ಕೊತ್ತೋಳಿ, ಸಂಚಾಲಕ ಸೋಮು, ನಗರಸಭಾ ಉಪಾಧ್ಯಕ್ಷೆ ಸವಿತಾ ರಾಕೇಶ್, ಉದ್ಯಮಿ ಶಂಕರ್, ತೇಜ್ ರಾಜ್, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ. ಹಂಸ, ಕೆ.ನಿಡುಗಣೆ ಗ್ರಾ.ಪಂ. ಸದಸ್ಯ ಜಾನ್ಸನ್ ಪಿಂಟೋ, ಗುತ್ತಿಗೆದಾರ ವಿ.ಜಿ.ಮೋಹನ್, ನಗರ ಕಾಂಗ್ರೆಸ್ ಅಧ್ಯಕ್ಷ ರೌಫ್ ನುಸ್ರತ್, ನಗರಸಭಾ ಮಾಜಿ ಸದಸ್ಯ ಯಲ್ಲಪ್ಪ ಹಾಜರಿದ್ದರು.

ರುಚಿತಾ, ತ್ರಿಶಾ ಪ್ರಾರ್ಥಿಸಿ, ಕೆ.ಎಸ್. ರಮೇಶ್ ನಿರೂಪಿಸಿ, ತೆನ್ನೀರ ಮೈನಾ ಸ್ವಾಗತಿಸಿ, ಅಜ್ಜೆಟ್ಟೀರ ಲೋಕೇಶ್ ವಂದಿಸಿದರು.