ಗೋಣಿಕೊಪ್ಪ, ವರದಿ, ಅ. ೨೨: ಮಾಯಮುಡಿ ಮಾನಿಲ್ ಅಯ್ಯಪ್ಪ ಸೇವಾ ಸಮಿತಿ ಹಾಗೂ ಮಾನಿಲ್ ಅಯಪ್ಪ ಯುವಕ ಸಂಘದ ಸಹಯೋಗದಲ್ಲಿ ಮಾನಿಲ್ ಅಯ್ಯಪ್ಪ ಮೈದಾನದಲ್ಲಿ ನಡೆದ ೧೦ ನೇ ವರ್ಷದ ಕೊಡವ, ಅಮ್ಮಕೊಡವ ವಾಲಿಬಾಲ್ ಟೂರ್ನಿಯಲ್ಲಿ ಮುಂಡಚಾಡಿರ ತಂಡ ಚಾಂಪಿಯನ್ ಸ್ಥಾನ ಅಲಂಕರಿಸಿತು. ಫೈನಲ್‌ನಲ್ಲಿ ಸೋಲನುಭವಿಸಿದ ಮಂಡುವAಡ ರನ್ನರ್ ಅಪ್‌ಗೆ ತೃಪ್ತಿಪಟ್ಟುಕೊಂಡಿತು. ಮೂರನೇ ತಂಡವಾಗಿ ಮಲ್ಲಮಾಡ, ನಾಲ್ಕನೇ ತಂಡವಾಗಿ ಚಿರಿಯಪಂಡ ಹೊರಹೊಮ್ಮಿತು.

ಫೈನಲ್ ಹಣಾಹಣಿಯಲ್ಲಿ ಮುಂಡಚಾಡಿರ ೨೪-೨೨, ೧೧-೧೫, ೨೧-೮ ಸೆಟ್‌ಗಳಿಂದ ಜಯಿಸಿತು. ೧೭ ತಂಡಗಳು ಟೂರ್ನಿಯಲ್ಲಿ ಪಾಲ್ಗೊಂಡವು. ಕಾಫಿ ಬೆಳೆಗಾರರಾದ ರಾಧಾ ಅಚ್ಚಯ್ಯ, ಪಾಂಡAಡ ರವಿ, ದಾನಿ ಶ್ರೀಪತಿ, ಸಮಿತಿ ಗೌ. ಅಧ್ಯಕ್ಷ ಸಣ್ಣುವಂಡ ಬಿ. ರಮೇಶ್, ಅಧ್ಯಕ್ಷ ಸಣ್ಣುವಂಡ ವಿನು ವಿಶ್ವನಾಥ್, ಯುವಕ ಸಂಘ ಅಧ್ಯಕ್ಷ ಚೆಪ್ಪುಡೀರ ಪ್ರದೀಪ್ ಪೂವಯ್ಯ ಬಹುಮಾನ ವಿತರಿಸಿದರು.