ಸೋಮವಾರಪೇಟೆ, ಅ. ೨೨: ತಾಲೂಕಿನ ಮಾದಾಪುರದಲ್ಲಿ ಸಾರ್ವಜನಿಕ ಆಯುಧ ಪೂಜಾ ಆಚರಣಾ ಸಮಿತಿ ವತಿಯಿಂದ ತಾ. ೨೩ರಂದು (ಇಂದು) ಅದ್ಧೂರಿ ಆಯುಧ ಪೂಜೋತ್ಸವಕ್ಕೆ ಸಿದ್ಧತೆ ಪೂರ್ಣಗೊಂಡಿದ್ದು, ಸಂಜೆ ೫ ಗಂಟೆಯಿAದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ಸಮಿತಿಯ ಅಧ್ಯಕ್ಷ ಬಿ.ಸಿ. ರಮೇಶ್ ತಿಳಿಸಿದ್ದಾರೆ.

ತಾ. ೨೩ರಂದು ಸಂಜೆ ೫ ಗಂಟೆಗೆ ಮಾದಾಪುರದ ಬಸ್ ನಿಲ್ದಾಣ ಆವರಣದಲ್ಲಿ ಪ್ರಸಿದ್ಧ ಕಲಾವಿದರಿಂದ ಸಾಂಸ್ಕೃತಿಕ ರಸಮಂಜರಿ ನಡೆಯಲಿದೆ. ಇದರೊಂದಿಗೆ ವರ್ಕ್ಶಾಪ್ ಅಲಂಕಾರ ಸ್ಪರ್ಧೆ, ಕಚೇರಿ ಮತ್ತು ಸಂಘ ಸಂಸ್ಥೆಗಳ ಅಲಂಕಾರ, ಅಂಗಡಿ ಮಳಿಗೆ, ವಾಹನ, ಆಟೋ ರಿಕ್ಷಾ ಅಲಂಕಾರ, ಮಕ್ಕಳ ಮಂಟಪ ಅಲಂಕಾರ ಸ್ಪರ್ಧೆಗಳನ್ನು ಏರ್ಪಡಿಸಿದ್ದು, ವಿಜೇತರಿಗೆ ಬಹುಮಾನ ವಿತರಿಸಲಾಗುವುದು.

ಜಿಲ್ಲೆಯ ಝೇಂಕಾರ್ ವಾದ್ಯಗೋಷ್ಠಿ ತಂಡದಿAದ ಆರ್ಕೆಸ್ಟಾç ಮತ್ತು ಸರಿಗಮಪ ಖ್ಯಾತಿಯ ಗಾಯಕರಿಂದ ಸಂಗೀತ ರಸಸಂಜೆ, ಜೀ ಕನ್ನಡ ಮತ್ತು ಕರ‍್ಸ್ ಕನ್ನಡ ಖ್ಯಾತಿಯ ನೃತ್ಯಗಾರರಿಂದ ನೃತ್ಯ ವೈವಿಧ್ಯ, ಸ್ಥಳೀಯ ಮಕ್ಕಳಿಂದ ನೃತ್ಯ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ರಮೇಶ್ ಮಾಹಿತಿ ನೀಡಿದ್ದಾರೆ.

ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಮಂಥರ್ ಗೌಡ ನೆರವೇರಿಸಲಿದ್ದು, ಪ್ರಮುಖರಾದ ಲಲ್ಲೇಶ್ ರೆಡ್ಡಿ, ಹರಪಳ್ಳಿ ರವೀಂದ್ರ, ಮನು ಬಿದ್ದಪ್ಪ, ಟಿ.ಪಿ. ಸಂದೇಶ್, ಬಿ.ಬಿ. ಭಾರತೀಶ್, ಉಮೇಶ್ ಉತ್ತಪ್ಪ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.