ಸಿದ್ದಾಪುರ, ಅ. ೨೨ : ಅಮ್ಮತ್ತಿ ಕಾರ್ಮಾಡು ಗ್ರಾಮದ ಶ್ರೀ ಚಾಮುಂಡೇಶ್ವರಿ ಪಾಷಾಣಮೂರ್ತಿ ಕ್ಷೇತ್ರದಲ್ಲಿ ತಾ. ೨೪ ರಂದು ವಿಜಯದಶಮಿ ಉತ್ಸವದ ಅಂಗವಾಗಿ ಬೆಳಿಗ್ಗೆ ೬ ಗಂಟೆಯಿAದ ಕ್ಷೇತ್ರದಲ್ಲಿರುವ ದೈವ ದೇವರಿಗೆ ವಾದ್ಯದೊಂದಿಗೆ ಅಭಿಷೇಕ ಹಾಗೂ ಅಲಂಕಾರಪೂಜೆ ನಡೆಯಲಿದೆ.

ಬೆಳಿಗ್ಗೆ ೯ ಕ್ಕೆ ಚಂಡಿಕಾ ಹೋಮ ಮಧ್ಯಾಹ್ನ ೧.೦೦ ಗಂಟೆಗೆ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಲಿದ್ದು, ಇದಾದ ನಂತರ ಶ್ರೀ ಪಾಷಾಣ ಮೂರ್ತಿಯ ಸೇವೆ ನಡೆಯಲಿದೆ. ರಾತ್ರಿ ೮.೦೦ ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆಂದು ಶ್ರೀ ಚಾಮುಂಡೇಶ್ವರಿ ಪಾಷಾಣಮೂರ್ತಿ ದೇವಾಲಯದ ಆಡಳಿತ ಮಂಡಳಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.