ವೀರಾಜಪೇಟೆ, ಅ. ೨೨: ದಂತ ವೈದ್ಯರಿಗೆ ವೇತನ ಮತ್ತು ಆದಾಯ ಕಡಿಮೆ ಎನ್ನದೆ ಲಭಿಸಿದ ವಿಪುಲ ಅವಕಾಶಗಳನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದು ಅಂತರರಾಷ್ಟಿçÃಯ ಕಾಲೇಜ್ ಆಫ್ ಕ್ರಾನಿಯೊ ಮಂಡಿಬುಲರ್ ಆತ್ರೋðಪೆಡಿಕ್ಸ್ನ ಭಾರತದ ಅಧ್ಯಕ್ಷ ಡಾ. ರವೀಂದ್ರನಾಥನ್ ರಾಜೇಶ್ ಹೇಳಿದರು.

ವೀರಾಜಪೇಟೆ ದಂತ ವೈದ್ಯಕೀಯ ಮಹಾವಿದ್ಯಾಲಯದ ೨೦ನೇ ಸಾಲಿನ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪದವಿ ಪ್ರದಾನ ಮಾಡಿ ಮಾತನಾಡಿ, ಕಲಿಕೆಗೆ ಕೊನೆ ಕಲಿಕೆ ನಿರಂತರವಾಗಿ ಮುಂದುವರಿಯಬೇಕು. ಪದವಿ ಪಡೆದಿದ್ದೀರ ಎಂದು ಯಾರು ನಿಮ್ಮನ್ನು ಕೆಲಸಕ್ಕೆ ಆಹ್ವಾನಿಸುವುದಿಲ್ಲ. ನಿಮ್ಮ ಕ್ಷೇತ್ರದ ಸಾಧನೆಯನ್ನು ಗುರುತಿಸುತ್ತಾರೆ. ಕಲಿಕಾ ಕ್ಷೇತ್ರಕ್ಕೆ ಸಂಬAಧಿಸಿದ ವಿಜ್ಞಾನದ ಎಲ್ಲಾ ಐಚ್ಚಿಕ ವಿಚಾರಗಳನ್ನು ಕಲಿತು ಜ್ಞಾನ ಸಂಪಾದಿಸಿಕೊಳ್ಳಬೇಕು. ವೇದಿಕೆಯ ಹಿಂದೆ ಉಳಿಯದೆ ಮುಂಚೂಣಿಗೆ ಬಂದು ತಮ್ಮ ವೃತ್ತಿ ಬದುಕನ್ನು ರೂಪಿಸಿಕೊಳ್ಳಬೇಕು. ಇಂದಿನಿAದ ನಿಮ್ಮ ವೃತ್ತಿಯ ಪಯಣ ಆರಂಭವಾಗಲಿದ್ದು ವಿಶಾಲ ಪ್ರಪಂಚದ ಅನುಭವ ಪಡೆಯಲಿದ್ದೀರಾ ಎಂದು ಹೇಳಿದರು.

ಕಾಲೇಜಿನ ಡೀನ್ ಡಾ. ಸುನಿಲ್ ಮುದ್ದಯ್ಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೊಡಗು ದಂತ ವೈದ್ಯಕೀಯ ಕಾಲೇಜು ದಂತ ಆರೋಗ್ಯ ಕ್ಷೇತ್ರದಲ್ಲಿನ ೯ ವಿಭಾಗದಲ್ಲಿ ಸ್ನಾತಕೋತ್ತರ ತರಬೇತಿ ಲಭ್ಯವಿದೆ. ಕಾಲೇಜು ಹೆಸರಾಂತ ದಂತ ವೈದ್ಯರನ್ನು, ಉಪನ್ಯಾಸಕರನ್ನು, ವಿಜ್ಞಾನಿಗಳನ್ನು ವಿಶ್ವಕ್ಕೆ ಕೊಡುಗೆಯಾಗಿ ನೀಡಿದೆ. ಯೂರೋಪ್, ಉತ್ತರ ಅಮೇರಿಕಾ ಹಾಗೂ ದಕ್ಷಿಣ ಪೂರ್ವ ಏಷ್ಯಾ ಖಂಡದಿAದ ಐದು ಹೆಸರಾಂತ ವಿಶ್ವವಿದ್ಯಾಲಯಗಳು ಕೊಡಗು ದಂತ ವೈದ್ಯಕೀಯ ಕಾಲೇಜಿನ ಜೊತೆ ಒಡಂಬಡಿಕೆ ಮಾಡಿಕೊಂಡಿರುವ ಫಲವಾಗಿ ವಿಶ್ವವಿದ್ಯಾಲಯಗಳ ಸಂಶೋಧಕರು ಹಾಗೂ ಹಿರಿಯ ಪ್ರಾಧ್ಯಾಪಕರುಗಳು ಆನ್‌ಲೈನ್ ಮೂಲಕ ಭಾಗವಹಿಸಿ ಇಲ್ಲಿನ ದಂತ ವೈದ್ಯ ವಿದ್ಯಾರ್ಥಿಗಳಿಗೆ ಪಾಠ ಪ್ರವಚನಗಳನ್ನು ಭೋದಿಸುತ್ತಿದ್ದಾರೆ ಎಂದರು.

ಸಮಾರAಭದಲ್ಲಿ ೩೯ ಪದವಿಧರರಿಗೆ ಹಾಗೂ ೩೧ ಸ್ನಾತಕೋತ್ತರ ಪದವಿಧರರಿಗೆ ಸೇರಿ ೭೦ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಕೆ.ಸಿ ಪೊನ್ನಪ್ಪ ಪದವಿಧರ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.

ವೇದಿಕೆಯಲ್ಲಿ ಉಪ ಪ್ರಾಂಶುಪಾಲ ಡಾ. ಜಿತೇಂದ್ರ ಜೈನ್, ಹಿರಿಯ ಬೋಧಕರಾದ ಡಾ. ಶಾಂತಲ, ಡಾ. ಗೌತಮ್‌ರೆಡ್ಡಿ, ಡಾ. ಅಮಿತ್, ಡಾ. ಬಸವರಾಜ್ ಉಪಸ್ಥಿತರಿದ್ದರು.

ಡಾ. ರೂಪೇಶ್ ಸ್ವಾಗತಿಸಿ, ವಂದಿಸಿದರು. ಕುಂಕುಮ್ ನಾಣಯ್ಯ ಕಾರ್ಯಕ್ರಮ ನಿರೂಪಿಸಿದರು.