ಸುಂಟಿಕೊಪ್ಪ, ಅ. ೨೨: ೭ನೇ ಹೊಸಕೋಟೆ ತೊಂಡೂರು ಗ್ರಾಮದಲ್ಲಿ ರುವ ವಿಕಾಸ್ ಜನಸೇವಾ ಟ್ರಸ್ಟ್ನ ಜೀವನದಾರಿ ಆಶ್ರಮಕ್ಕೆ ಶಾಸಕ ಮಂಥರ್ಗೌಡ ಭೇಟಿ ನೀಡಿ ದಿವಂಗತ ರಮೇಶ್ ಹಾಗೂ ರೂಪ ರಮೇಶ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಸಂತಾಪ ವ್ಯಕ್ತಪಡಿಸಿದರು.
ನಂತರ ಅಲ್ಲಿನ ವಾಸಿಗಳನ್ನುದ್ದೇಶಿಸಿ ಮಾತನಾಡಿದ ಅವರು, ನಿಮ್ಮನ್ನೆಲ್ಲಾ ರಮೇಶ್ ಅವರು ಪೋಷಿಸಿದಂತೆ ಅವರ ಅಣ್ಣ ಮಂಜುನಾಥ್ ಅವರು ನೋಡಿಕೊಳ್ಳಲು ಮುಂದಾಗಿದ್ದಾರೆ. ಅವರ ಸೇವೆಗೆ ವೈಯಕ್ತಿಕವಾಗಿ ಮತ್ತು ಸರ್ಕಾರದಿಂದಲೂ ಸಂಪೂರ್ಣ ಸಹಕಾರವನ್ನು ನೀಡಲಾಗುವುದೆಂದು ಭರವಸೆ ನೀಡಿದರು. ವಿಶೇಷಚೇತನರ ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆಯ ಅಧಿಕಾರಿಯವರೊಡನೆ ಮಾತನಾಡಿ, ಅನುದಾನ ವ್ಯವಸ್ಥೆಯನ್ನು ಮುಂದಿನ ದಿನಗಳಲ್ಲಿ ಒದಗಿಸಿಕೊಡಲು ಪ್ರಯತ್ನಿಸುವೆ ಎಂದು ತಿಳಿಸುವ ಮೂಲಕ ಆಶ್ರಮದ ನಿವಾಸಿಗಳಿಗೆ ಧೈರ್ಯ ತುಂಬಿದರು.
ಈ ಸಂದರ್ಭ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ರಾಣಿ ಮಾಚಯ್ಯ, ಗ್ರಾ.ಪಂ. ಉಪಾಧ್ಯಕ್ಷೆ ಸೌಮ್ಯ ಸುನೀಲ್, ಸಿಬಿಆರ್ ಸಂಯೋಜಕ ಮುರುಗೇಶ್, ದಿ. ರಮೇಶ್ ತಂದೆ ಕರಿಯಪ್ಪ, ಪುತ್ರಿ ಐಶ್ವರ್ಯ, ಟ್ರಸ್ಟಿ ನವೀನ್ ಕುಮಾರ್, ಸಹೋದರಿ ರಂಗಮ್ಮ, ಆಶ್ರಮದ ಸಿಬ್ಬಂದಿ ಜಯಂತಿ, ಸ್ವಯಂ ಸೇವಕರಾದ ಶ್ರೀಜಾ, ಫೌಸಿಯ, ರಾಧ ಹಾಗೂ ಗ್ರಾಮಸ್ಥರು ಇದ್ದರು.