ಮಡಿಕೇರಿ, ಅ. ೨೨: ಸದಾ ಸಂಸಾರ, ಅಡುಗೆ ಕೆಲಸ ಎಂದು ಒತ್ತಡದಲ್ಲಿರುತ್ತಿದ್ದ ಮಹಿಳೆಯರು ಇಂದು ಬಣ್ಣಬಣ್ಣದ ಉಡುಗೆ ತೊಟ್ಟು ಸಂಭ್ರಮಿಸಿದರು, ಹಾಡು, ನೃತ್ಯ, ಕ್ರೀಡೆ ಸೇರಿದಂತೆ ನಾನಾ ಕಾರ್ಯಕ್ರಮದಲ್ಲಿ ಭಾಗಿಯಾದರು, ದಸರಾ ಜನೋತ್ಸವಕ್ಕೆ ನಾರಿಯರು ಉತ್ಸಾಹ ತುಂಬುವ ಮೂಲಕ ಮಹಿಳಾ ದಸರಾವನ್ನು ಕಳೆಕಟ್ಟುವಂತೆ ಮಾಡಿದರು.

ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ ನಗರಸಭಾ ಸದಸ್ಯೆಯರು, ಮಹಿಳೆಯರ ಬಳಗ, ಕೊಡಗು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಗಾಂಧಿ ಮೈದಾನದಲ್ಲಿ ಕಲಾಸಂಭ್ರಮ ವೇದಿಕೆಯಲ್ಲಿ ಮಹಿಳಾ ದಸರಾ ನಡೆಯಿತು.

೮ನೇ ವರ್ಷದ ಮಹಿಳಾ ದಸರಾ ಅಂಗವಾಗಿ ಎಥ್‌ನಿಕ್ ಫ್ಯಾಷನ್ ಶೋ, ಸಾಂಪ್ರದಾಯಿಕ ಉಡುಗೆ ಸ್ಪರ್ಧೆ, ಗಾರ್ಭಾ ನೃತ್ಯ ಸ್ಪರ್ಧೆ, ೧೦೦ ಮೀಟರ್ ಓಟದ ಸ್ಪರ್ಧೆ, ತೆಂಗಿನ ಕಾಯಿಗೆ ಕಲ್ಲು ಹೊಡೆಯುವುದು, ಹಗ್ಗ ಜಗ್ಗಾಟ, ಚಮಚದಲ್ಲಿ ನಿಂಬೆ ಹಣ್ಣು ಇಟ್ಟು ವೇಗವಾಗಿ ನಡೆಯುವುದು. ಬಕೆಟ್‌ಗೆ ಚೆಂಡನ್ನು ಹಾಕುವುದು, ತಲೆಯ ಮೇಲೆ ಪುಸ್ತಕ ಇಟ್ಟು ನಡೆಯುವುದು, ಕೋಲಿಗೆ ರಿಂಗ್ ಹಾಕುವುದು, ನಿಧಾನವಾಗಿ ನಡೆಯುವುದು, ಸೂಜಿಗೆ ನೂಲನ್ನು ಹಾಕುವುದು. ಬಾಂಬ್ ಇನ್ ಸಿಟಿ, ಚೆಂಡನ್ನು ವರ್ಗಾಯಿಸುವುದು, ನಿಧಾನವಾಗಿ ನಡೆಯುವುದು, ಮೆಹಂದಿ ಹಾಕುವುದು, ಸೀರೆಯ ನಿಖರ ಬೆಲೆ ಹೇಳುವುದು ಮತ್ತುವಾಲಗತಾಟ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಆನಂದಿಸಿದರು.

ವಿವಿಧ ತಂಡಗಳು ಗರ್ಭಾ ನೃತ್ಯ ಪ್ರಕಾರ ಸೇರಿದಂತೆ ಇನ್ನಿತರ ವೈವಿಧ್ಯಮಯ ನೃತ್ಯಗಳನ್ನು ಪ್ರಸ್ತುತ ಪಡಿಸಿದರು. ಒಂದೆಡೆ ಸಾಂಪ್ರದಾಯಿಕ ಉಡುಗೆ ತೊಟ್ಟು ಮಹಿಳೆಯರು ರ‍್ಯಾಂಪ್’ನಲ್ಲಿ ಹೆಜ್ಜೆ ಹಾಕಿದರೆ, ಮತ್ತೊಂದೆಡೆ ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಂಡು ಸ್ಪರ್ಧಾ ಮನೋಭಾವ ಪ್ರದರ್ಶಿಸಿದರು. ವಾಲಗತಾಟ್ ಸ್ಪರ್ಧೆಯಲ್ಲಿ ಮಹಿಳೆಯರು ಒಂದಾಗಿ ಹೆಜ್ಜೆಹಾಕಿದರು.

ಮಹಿಳೆಯರನ್ನು ಗೌರವದಿಂದ ನೋಡಿ - ವೀಣಾ

ವಿಧಾನ ಪರಿಷತ್ತು ಮಾಜಿ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಿತ್ಯ ಜಂಜಾಟದಲ್ಲಿರುವ ಮಹಿಳೆಯರ ಮನೋಲ್ಲಾಸಕ್ಕೆ ಈ ರೀತಿಯ ವೇದಿಕೆ ಅಗತ್ಯ. ಗ್ರಾಮೀಣ ಭಾಗದ ಮಹಿಳೆಯರಿಗೂ ಇಲ್ಲಿ ಅವಕಾಶ ದೊರೆಯುತ್ತಿರುವುದು ಶ್ಲಾಘನೀಯ. ಅನೇಕ ವರ್ಷಗಳಿಂದ ಮಡಿಕೇರಿಯಲ್ಲಿ ಯಶಸ್ವಿಯಾಗಿ ಮಹಿಳಾ ದಸರಾ ನಡೆಸಲಾಗುತ್ತಿದೆ. ಈ ದಿನ ಮಹಿಳೆಯರಿಗೆ ಅವಿಸ್ಮರಣೀಯ. ಪ್ರತಿಭೆ ಅನಾವರಣಕ್ಕೆ ಇದೊಂದು ವೇದಿಕೆ. ಹೆಣ್ಣನ್ನು ಪೂಜಿಸುವ ಕಡೆ ದೇವರು ನೆಲೆಸಿರುತ್ತಾಳೆ. ಮಹಿಳೆಯರನ್ನು ಗೌರವದಿಂದ ಕಾಣುವಂತೆ ಕರೆ ನೀಡಿದರು.

ನಗರಸಭೆ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳೆ ರಾಜಕೀಯ, ಸಾಮಾಜಿಕ, ಆರ್ಥಿಕವಾಗಿ ಮುನ್ನುಗುತ್ತಿದ್ದಾರೆ. ಮಹಿಳಾ ದಸರಾ ಪ್ರತಿಭೆ ಹೊರಸೂಸಲು ವೇದಿಕೆ ಎಂದರು.

ನಗರಸಭೆ ನಿವೃತ್ತ ಆಯುಕ್ತೆ ಪುಷ್ಪಾವತಿ ಮಾತನಾಡಿ, ಜಾಗತಿಕ ಯುದ್ಧ, ಬರ ೩ಐದನೇ ಪುಟಕ್ಕೆ

(ಮೊದಲ ಪುಟದಿಂದ) ಪರಿಸ್ಥಿತಿಯಿಂದ ಹಣ ದುಬ್ಬರ, ಬೆಲೆ ಏರಿಕೆ ಸಮಸ್ಯೆ ಉಂಟಾಗಿದೆ. ಈ ಸಂದರ್ಭದಲ್ಲೂ ಮಹಿಳೆಯರು ಮಿತವ್ಯಯದ ಮೂಲಕ ಸಂಸಾರ ಸಾಗಿಸಬೇಕು ಎಂದು ಸಲಹೆ ನೀಡಿದರು.

ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸುರಯ್ಯ ಅಬ್ರಾರ್ ಮಾತನಾಡಿ, ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡಿ ಉತ್ತಮ ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಶ್ಲಾಘಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರೂಪಣಾಧಿಕಾರಿ ನಟರಾಜು ಮಾತನಾಡಿ, ೨೩ ವರ್ಷಗಳ ಹಿಂದೆ ಹುಟ್ಟುಪಡೆದ ಸ್ತಿçÃಶಕ್ತಿ ಸಂಘಗಳ ಮೂಲಕ ಆರ್ಥಿಕ ಸಬಲೀಕರಣದಿಂದ ಸ್ವಾವಲಂಬಿ ಜೀವನ ನಡೆಸಲು ಸಾಧ್ಯವಾಗಿದೆ. ಗೃಹಲಕ್ಷ್ಮಿ ಯೋಜನೆಯಡಿ ರೂ. ೨೫ ಕೋಟಿ ಜಮೆ ಆಗಿದೆ ಎಂದರು.

ಇದೇ ಸಂದರ್ಭ ಮೂರ್ನಾಡು ಬಾಡಗ ಗ್ರಾಮದ ಅಂಗನವಾಡಿ (ಮೊದಲ ಪುಟದಿಂದ) ಪರಿಸ್ಥಿತಿಯಿಂದ ಹಣ ದುಬ್ಬರ, ಬೆಲೆ ಏರಿಕೆ ಸಮಸ್ಯೆ ಉಂಟಾಗಿದೆ. ಈ ಸಂದರ್ಭದಲ್ಲೂ ಮಹಿಳೆಯರು ಮಿತವ್ಯಯದ ಮೂಲಕ ಸಂಸಾರ ಸಾಗಿಸಬೇಕು ಎಂದು ಸಲಹೆ ನೀಡಿದರು.

ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸುರಯ್ಯ ಅಬ್ರಾರ್ ಮಾತನಾಡಿ, ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡಿ ಉತ್ತಮ ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಶ್ಲಾಘಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರೂಪಣಾಧಿಕಾರಿ ನಟರಾಜು ಮಾತನಾಡಿ, ೨೩ ವರ್ಷಗಳ ಹಿಂದೆ ಹುಟ್ಟುಪಡೆದ ಸ್ತಿçÃಶಕ್ತಿ ಸಂಘಗಳ ಮೂಲಕ ಆರ್ಥಿಕ ಸಬಲೀಕರಣದಿಂದ ಸ್ವಾವಲಂಬಿ ಜೀವನ ನಡೆಸಲು ಸಾಧ್ಯವಾಗಿದೆ. ಗೃಹಲಕ್ಷ್ಮಿ ಯೋಜನೆಯಡಿ ರೂ. ೨೫ ಕೋಟಿ ಜಮೆ ಆಗಿದೆ ಎಂದರು.

ಇದೇ ಸಂದರ್ಭ ಮೂರ್ನಾಡು ಬಾಡಗ ಗ್ರಾಮದ ಅಂಗನವಾಡಿ