ಮಡಿಕೇರಿ, ಅ.೨೧: ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ ನಗರಸಭಾ ಸದಸ್ಯೆಯರು, ಮಹಿಳೆಯರ ಬಳಗ, ಕೊಡಗು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಬಿವೃದ್ಧಿ ಇಲಾಖೆ ಸಹಯೋಗದಲ್ಲಿ ಇಂದು ಗಾಂಧಿ ಮೈದಾನದಲ್ಲಿ ಮಹಿಳಾ ದಸರಾ ಆಯೋಜಿತ ವಾಗಿದೆ. ಬೆಳಿಗ್ಗೆ ೯.೩೦ ಗಂಟೆಯಿAದಲೇ ವಿವಿಧ ಸ್ಪರ್ಧೆಗಳನ್ನು ಮಹಿಳೆಯರಿಗೆ ಆಯೋಜಿಸಲಾಗಿದೆ ಎಂದು ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ. ಮತ್ತು ಮಹಿಳಾ ದಸರಾ ಸಮಿತಿ ಸಂಚಾಲಕಿ ಕುಡೆಕಲ್ ಸವಿತಾ ಸಂತೋಷ್ ತಿಳಿಸಿದ್ದಾರೆ.

೮ನೇ ವರ್ಷದ ಮಹಿಳಾ ದಸರಾ ಅಂಗವಾಗಿ ವೈವಿಧ್ಯಮಯ ಕಾರ್ಯ ಕ್ರಮ ಹಾಗೂ ಸ್ಪರ್ಧೆಗಳು ನಡೆಯಲಿವೆ. ಬೆಳಿಗ್ಗೆ ೧೦.೩೦ ಗಂಟೆಯೊಳಗಾಗಿ ಹೆಸರು ನೋಂದಾಯಿಸಿಕೊಳ್ಳಲು ಅವಕಾಶ ಇದೆ. ಸಂಜೆ ೬.೩೦ ಗಂಟೆಗೆ ಮಡಿಕೇರಿ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಜಿಲ್ಲೆಯ ವಿವಿಧ ಮಹಿಳಾ ತಂಡಗಳಿAದ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿತವಾಗಿವೆ.

ಮಹಿಳಾ ದಸರಾ ಅಂಗವಾಗಿ ಮೈಸೂರಿನ ಹೆಸರಾಂತ ಶುಭ ರಾಘವೇಂದ್ರ ತಂಡದಿAದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಇದರೊಂದಿಗೆ, ಮಡಿಕೇರಿಯ ಮಹಿಳಾ ವಕೀಲರ ತಂಡದ ನೃತ್ಯ, ಮಡಿಕೇರಿ ಕೊಡವ ಸಮಾಜ ಮಹಿಳಾ ತಂಡದಿAದ ನೃತ್ಯ, ಕೊಡಗು ಗೌಡ ಮಹಿಳಾ ಒಕ್ಕೂಟ, ಹಿಂದೂ ಮಲಯಾಳಿ ಸಂಘ ಮಡಿಕೇರಿ, ಚೌಡೇಶ್ವರಿ ದೇವಾಂಗ ಮಹಿಳಾ ಸಮಾಜ ಮಡಿಕೇರಿ, ಅಯ್ಯಪ್ಪ ಯುವತಿ ಮಂಡಳಿ ನರಿಯಂದಡ, ಹಿಂದೂ ಮಲಯಾಳಿ ಸಂಘ ಮೂರ್ನಾಡು ತಂಡಗಳಿAದ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿದೆ ಎಂದು ತಿಳಿಸಿದ್ದಾರೆ.