ಕುಶಾಲನಗರ, ಅ. ೨೧: ಮೈಸೂರು ದಸರಾ ದೀಪಾಲಂಕಾರ ವೀಕ್ಷಿಸಲು ತೆರಳಿದ್ದ ಜಿಲ್ಲೆಯ ಯುವಕನೊಬ್ಬ ಸೇರಿದಂತೆ ಇಬ್ಬರು ಯುವಕರು ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.
ಕುಶಾಲನಗರ ಪಟ್ಟಣದ ಆದರ್ಶ ದ್ರಾವಿಡ ಕಾಲೋನಿಯ ಪೌರಕಾರ್ಮಿಕ ಸೋಮೇಶ್ ಎಂಬವರ ಪುತ್ರ ಪ್ರಶಾಂತ್ (೧೮) ಮತ್ತು ಪಿರಿಯಾಪಟ್ಟಣ ತಾಲೂಕು ಹುಣಸೆವಾಡಿ ಗ್ರಾಮದ ಯುವಕ ಕುಮಾರ್ (೨೦) ಮೃತ ದುರ್ದೈವಿಗಳು.
ಪ್ರಶಾಂತ್ ಕುಶಾಲನಗರದಲ್ಲಿ ಖಾಸಗಿ ಬ್ಯಾಂಕ್ವೊAದರಲ್ಲಿ ಪಿಗ್ಮಿ ಕೆಲಸ ನಿರ್ವಹಿಸುತ್ತಿದ್ದು, ಶುಕ್ರವಾರ ತನ್ನ ಸ್ನೇಹಿತನ ಬೈಕ್ನಲ್ಲಿ ಮೈಸೂರಿಗೆ ತೆರಳಿ ರಾತ್ರಿ ವೇಳೆ ಹಿಂತಿರುಗುತ್ತಿದ್ದ ಸಂದರ್ಭ ಹುಣಸೂರು ಪಟ್ಟಣ ವ್ಯಾಪ್ತಿಯ ಹೆದ್ದಾರಿ ರಸ್ತೆಯಲ್ಲಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲಿ ಮೃತಪಟ್ಟಿರುವುದಾಗಿ ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತ ಪ್ರಶಾಂತ್ ಅಂತ್ಯಕ್ರಿಯೆ ಕುಶಾಲನಗರದಲ್ಲಿ ನಡೆಯಿತು.