ನಾಪೋಕ್ಲು: ಕೊಡಗು ಹಕ್ಕು ಸಂರಕ್ಷಣಾ ಸಮಿತಿ ನಾಪೋಕ್ಲು ಇದರ ವತಿಯಿಂದ ೨೭ನೇ ವರ್ಷದ ಪವಿತ್ರ ಕಾವೇರಿ ತೀರ್ಥ ವಿತರಣೆ ನಡೆಯಿತು.

ಕಾವೇರಿ ಮಾತೆಯ ಪ್ರತಿಮೆಯ ಭವ್ಯವಾದ ಪುಷ್ಪಾಲಂಕೃತ ರಥ ಮೆರವಣಿಗೆಯು ಪಾಲೂರಿನ ಪಾಲೂರಪ್ಪ ದೇವಾಲಯದಿಂದ ಆರಂಭಗೊAಡು ತಲಕಾವೇರಿಗೆ ತೆರಳಿ ತೀರ್ಥೋದ್ಭವದ ಬಳಿಕ ಬುಧವಾರ ವಿವಿಧ ಸ್ಥಳಗಳಲ್ಲಿ ತೀರ್ಥ ವಿತರಿಸಿ ಪಾಲೂರಿನ ಸತ್ಯ ಹರಿಶ್ಚಂದ್ರ ದೇವಾಲಯದ ಕಾವೇರಿ ನದಿಯಲ್ಲಿ ತಾಯಿ ಕಾವೇರಿ ಮಾತೆಯ ಕಲಶ ವಿಸರ್ಜನೆಯೊಂದಿಗೆ ನೆರವೇರಿತು.

ಬುಧವಾರ ಬೆಳಿಗ್ಗೆ ಭಾಗಮಂಡಲದಿAದ ರಥಯಾತ್ರೆ ಆರಂಭಗೊAಡು ರಸ್ತೆ ಯುದ್ದಕ್ಕೂ ಭಕ್ತಾದಿಗಳಿಗೆ ತೀರ್ಥ ವಿತರಣೆ ಮಾಡಲಾಯಿತು. ಚೇರಂಗಾಲ, ಅಯ್ಯಂಗೇರಿ ಪುಲಿಕೋಟು, ಪೇರೂರು, ಬಲ್ಲಮಾವಟಿ, ಚೋನಕೆರೆ ಮೂಲಕ ಮಧ್ಯಾಹ್ನ ೧.೩೦ ಗಂಟೆಗೆ ರಥ ನಾಪೋಕ್ಲು ತಲುಪಿತು.

ಈ ಸಂದರ್ಭ ಕೊಡಗು ಹಕ್ಕು ಸಂರಕ್ಷಣಾ ಸಮಿತಿಯ ಸಂಚಾಲಕ ಬಿದ್ದಾಟಂಡ ರೋಜಿ ಚಿಣ್ಣಪ್ಪ, ಪ್ರಧಾನ ಕಾರ್ಯದರ್ಶಿ ಕಲಿಯಾಟಂಡ ಮಯ್ಯು ದೇವಯ್ಯ, ಪದಾಧಿಕಾರಿಗಳಾದ ಬಿದ್ದಾಟಂಡ ಮಮತಾ ಚಿಣ್ಣಪ್ಪ, ಕಲಿಯಾಟಂಡ ಸುಮಿ ದೇವಯ್ಯ, ಮಚ್ಚಂಡ ಶಂಭು ಇನ್ನಿತರರು ಇದ್ದರು.

ಕಾವೇರಿ ತೀರ್ಥ ವಿತರಣಾ ಸಮಿತಿ ಕುಶಾಲನಗರ: ಕುಶಾಲನಗರ ಕಾವೇರಿ ತೀರ್ಥ ವಿತರಣಾ ಸಮಿತಿ ವತಿಯಿಂದ ತೀರ್ಥ ವಿತರಣೆಗೆ ರಾಜೇಶನಾಥ ಸ್ವಾಮಿ ಚಾಲನೆ ನೀಡಿದರು.

ಶ್ರೀ ವಿನಾಯಕ ಮಿತ್ರ ಮಂಡಳಿ ಜಂಬೂರುಮಡಿಕೇರಿ: ಶ್ರೀ ವಿನಾಯಕ ಮಿತ್ರ ಮಂಡಳಿ ಎಫ್.ಎಂ.ಸಿ. ಬಡಾವಣೆ, ಜಂಬೂರು-ಮಾದಪುರ ಇವರ ವತಿಯಿಂದ ಎರಡನೇ ವರ್ಷದ ಕಾವೇರಿ ತೀರ್ಥವನ್ನು ಬಡಾವಣೆಯ ನಿವಾಸಿಗಳಿಗೆ ವಿತರಿಸಲಾಯಿತು.