ಮಡಿಕೇರಿ, ಅ. ೨೦: ಮೂರ್ನಾಡು ಕೊಡವ ಸಮಾಜದ ಕೈಲ್ ಪೊಳ್ದ್ ಒತ್ತೊರ್ಮೆ ಕೂಟ ಹಾಗೂ ಸನ್ಮಾನ ಕಾರ್ಯಕ್ರಮ ಸಂಭ್ರಮದಿAದ ನಡೆಯಿತು. ಸಮಾಜದ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಾಂಪ್ರದಾಯಿಕ ಆಯುಧ ಪೂಜೆಯನ್ನು ಸಮಾಜದ ಹಿರಿಯ ಉಪಾಧ್ಯಕ್ಷ ಚೇನಂಡ ಅಯ್ಯಣ್ಣ ಅವರು ನೆರವೇರಿಸಿದರು.
ಬಳಿಕ ಪಾಂಡಾಣೆ ನಾಡ್ ಮಂದ್ನಲ್ಲಿ ಕೊಡವ ಧಿರಿಸು ಗಳೊಂದಿಗೆ ಸೇರಿದ ಸದಸ್ಯರುಗಳು ದುಡಿಕೊಟ್ಟ್ ಪಾಟ್ನೊಂದಿಗೆ ಮೆರವಣಿಗೆಯ ಮೂಲಕ ಸಮಾಜದ ಆವರಣಕ್ಕೆ ಆಗಮಿಸಿದರು. ಸಮಾಜದ ಅಧ್ಯಕ್ಷ ನೆರವಂಡ ಅನೂಪ್ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಹಗ್ಗಜಗ್ಗಾಟ ಸೇರಿದಂತೆ ವಿವಿಧ ಕ್ರೀಡಾಕೂಟಗಳು ನಡೆದವು.
ಬಳಿಕ ಸಮಾಜದ ಸಭಾಂಗಣದಲ್ಲಿ ನಡೆಸಲಾದ ಸಭೆಯ ಅಧ್ಯಕ್ಷತೆಯನ್ನು ಸಮಾಜದ ಅಧ್ಯಕ್ಷ ನೆರವಂಡ ಅನೂಪ್ ಉತ್ತಯ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮ ಮಡಿಕೇರಿ, ಅ. ೨೦: ಮೂರ್ನಾಡು ಕೊಡವ ಸಮಾಜದ ಕೈಲ್ ಪೊಳ್ದ್ ಒತ್ತೊರ್ಮೆ ಕೂಟ ಹಾಗೂ ಸನ್ಮಾನ ಕಾರ್ಯಕ್ರಮ ಸಂಭ್ರಮದಿAದ ನಡೆಯಿತು. ಸಮಾಜದ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಾಂಪ್ರದಾಯಿಕ ಆಯುಧ ಪೂಜೆಯನ್ನು ಸಮಾಜದ ಹಿರಿಯ ಉಪಾಧ್ಯಕ್ಷ ಚೇನಂಡ ಅಯ್ಯಣ್ಣ ಅವರು ನೆರವೇರಿಸಿದರು.
ಬಳಿಕ ಪಾಂಡಾಣೆ ನಾಡ್ ಮಂದ್ನಲ್ಲಿ ಕೊಡವ ಧಿರಿಸು ಗಳೊಂದಿಗೆ ಸೇರಿದ ಸದಸ್ಯರುಗಳು ದುಡಿಕೊಟ್ಟ್ ಪಾಟ್ನೊಂದಿಗೆ ಮೆರವಣಿಗೆಯ ಮೂಲಕ ಸಮಾಜದ ಆವರಣಕ್ಕೆ ಆಗಮಿಸಿದರು. ಸಮಾಜದ ಅಧ್ಯಕ್ಷ ನೆರವಂಡ ಅನೂಪ್ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಹಗ್ಗಜಗ್ಗಾಟ ಸೇರಿದಂತೆ ವಿವಿಧ ಕ್ರೀಡಾಕೂಟಗಳು ನಡೆದವು.
ಬಳಿಕ ಸಮಾಜದ ಸಭಾಂಗಣದಲ್ಲಿ ನಡೆಸಲಾದ ಸಭೆಯ ಅಧ್ಯಕ್ಷತೆಯನ್ನು ಸಮಾಜದ ಅಧ್ಯಕ್ಷ ನೆರವಂಡ ಅನೂಪ್ ಉತ್ತಯ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮ ಮಂಡಿಸುವ ಸಂದರ್ಭ ಸಮರ್ಪಕ ಅಂಕಿ-ಅAಶಗಳನ್ನು ನೀಡುವಂತಾಗಬೇಕು. ನ್ಯಾಯಯುತ ವಾದ ಮಂಡನೆಗೆ, ಹೋರಾಟಕ್ಕೆ ಜಯ ಸಿಗಲಿದೆ ಎಂಬುದಕ್ಕೆ ದೇವಟ್ಪರಂಬುವಿನಲ್ಲಿ ಶಾಶ್ವತವಾಗಿ ಮೀದಿ ಇಡುವ ಸ್ಥಳ ಹಾಗೂ ಕೊಡಗರು-ಕೊಡವರು ಎಂಬ ವಿಚಾರದಲ್ಲಿ ದೊರೆತ ನ್ಯಾಯ ಸಾಕ್ಷಿಯಾಗಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಪದ್ಮಶ್ರೀ ಪುರಸ್ಕೃತೆ, ಹಿರಿಯ ಸಾಂಸ್ಕೃತಿಕ ಕಲಾವಿದೆ ಐಮುಡಿಯಂಡ ರಾಣಿ ಮಾಚಯ್ಯ, ರಾಜ್ಯ ಸರಕಾರಿ ಅಭಿಯೋಜಕ ಬಲ್ಲಚಂಡ ಬೆಳ್ಯಪ್ಪ, ನಿವೃತ್ತ ಸೇನಾನಿ, ರಾಷ್ಟçಮಟ್ಟದ ಹಾಕಿ ಆಟಗಾರ ಅವರೆಮಾದಂಡ ಪಚ್ಚು ಕುಶಾಲಪ್ಪ ಅವರನ್ನು ಸಮಾಜದ ವತಿಯಿಂದ ಸನ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ., ಪದವಿ ತರಗತಿಗಳಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹಕ ಬಹುಮಾನ ವನ್ನು ನೀಡಲಾಯಿತು. ಕ್ರೀಡಾಕೂಟ ದಲ್ಲಿ ವಿಜೇತರಾದವರಿಗೆ ಅತಿಥಿ ಗಣ್ಯರು ಬಹುಮಾನ ವಿತರಿಸಿದರು. ಅನೂಪ್ ಸ್ವಾಗತಿಸಿದರು. ಸಮಾಜದ ಮಹಿಳಾ ವಿಂಗ್ ಅಧ್ಯಕ್ಷೆ ಪಳಂಗAಡ ರೇಖಾ ತಮ್ಮಯ್ಯ ನಿರೂಪಿಸಿ, ನಿರ್ದೇಶಕಿ ಪಾಂಡAಡ ಸ್ವಾತಿ ಗಣಪತಿ ವಂದಿಸಿದರು. ಸಭೆಯಲ್ಲಿ ಸಮಾಜದ ಗೌರವ ಕಾರ್ಯದರ್ಶಿ ಕಂಬೀರAಡ ಗೌತಮ್, ಖಜಾಂಚಿ ಮಡೆಯಂಡ ಪ್ರೀಣಾ ಸೇರಿದಂತೆ ಸಮಾಜ ಬಾಂಧವರು ಭಾಗವಹಿಸಿದ್ದರು.
- ಸಾಬ