ಮಡಿಕೇರಿ, ಅ. ೧೯: ೧೦ ಹೆಚ್.ಪಿ. ತನಕದ ನೀರಾವರಿ ಪಂಪ್‌ಸೆಟ್‌ಗೆ ಉಚಿತ ವಿದ್ಯುತ್ ಒದಗಿಸುವ ಸಂಬAಧ ವಿದ್ಯುತ್ ಸರಬರಾಜು ನಿಗಮ ಕೈಗೊಂಡಿರುವ ನಿರ್ಧಾರವನ್ನು ಜಿಲ್ಲಾ ರೈತ ಸಂಘ ವಿರೋಧಿಸಿದ್ದು, ಬೇರೆ ಜಿಲ್ಲೆಗಳಲ್ಲಿ ಇರುವಂತೆಯೆ ಕೊಡಗಿನ ಬೆಳೆಗಾರರನ್ನು ಪರಿಗಣಿಸಬೇಕೆಂದು ಆಗ್ರಹಿಸಿದೆ.

ನಗರದ ಚೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದ ಜಿಲ್ಲಾ ರೈತ ಸಂಘದವರು, ರಾಜ್ಯದ ಉಳಿದ ರೈತ ಬೆಳೆಗಾರರಿಗೆ ಉಚಿತ ವಿದ್ಯುತ್ ನೀಡುತ್ತಿದ್ದು, ಕಾಫಿ ಬೆಳೆಗಾರರಿಗೆ ಮಾತ್ರ ನೀಡುತ್ತಿಲ್ಲ. ಇದು ದ್ವಿಮುಖ ಧೋರಣೆಯಾಗಿದೆ ಎಂದು ಆರೋಪಿಸಿದರು.

ಬೆಳೆಗಾರರ ಪಂಪ್‌ಸೆಟ್‌ಗಳ ಸಂಪರ್ಕ ಕಡಿತಗೊಳಿಸುವುದನ್ನು ನಿಲ್ಲಿಸಿ ಕಡಿತಗೊಳಿಸಿರುವ ಸಂಪರ್ಕಗಳನ್ನು ಮರು ಜೋಡಿಸಬೇಕು. ಜಿಲ್ಲೆಯ ವಿವಿಧ ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಿದ್ದರೂ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಕ್ರಮವನ್ನು ಖಂಡಿಸಿದರು.

ಪಂಪ್‌ಸೆಟ್ ವಿದ್ಯುತ್ ಶುಲ್ಕವನ್ನು ಮೊದಲು ಪಾವತಿಸಿ ನಂತರ ಆ ಹಣವನ್ನು ಡಿಬಿಟಿ ಮೂಲಕ ಇಲಾಖೆ ಬೆಳೆಗಾರರಿಗೆ ವರ್ಗಾವಣೆ ಮಾಡುವ ಕ್ರಮ ಸರಿಯಲ್ಲ. ಇದಕ್ಕಾಗಿ ಶುಲ್ಕ ವಸೂಲಾತಿ ಮಾಡಲು ಆದೇಶ ಮಾಡಿರುವುದನ್ನು ವಿರೋಧಿಸಿದರು.

ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ನೇತೃತ್ವದಲ್ಲಿ ನಡೆದ ಪ್ರತಿಭಟನೆಯ ಬಳಿಕ ಚೆಸ್ಕಾಂ ಕಾರ್ಯಪಾಲಕ ಅಭಿಯಂತರರಾದ ಅನಿತಾ ಬಾಯಿ ಅವರಿಗೆ ಮನವಿ ಸಲ್ಲಿಸಿ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸೋಮವಾರಪೇಟೆ ತಾಲೂಕು ರೈತಸಂಘದ ಅಧ್ಯಕ್ಷ ದಿನೇಶ್, ಪ್ರಮುಖರಾದ ಪುಚ್ಚಿಮಾಡ ಸುಭಾಷ್, ಮಂಡೇಪAಡ ಪ್ರವೀಣ್, ಪುಚ್ಚಿಮಾಡ ರಾಯ್ ಮಾದಪ್ಪ, ಬೆನ್ಜಾ, ಚೊಟ್ಟೆಕಾಳಪಂಡ ಮನು, ಲಕ್ಷಣ್‌ಗೌಡ, ಹೂವಯ್ಯ, ಬಸವರಾಜು, ಸೋಮಣ್ಣ ಸೇರಿದಂತೆ ಇನ್ನಿತರರು ಹಾಜರಿದ್ದರು.