ಮುಳ್ಳೂರು, ಅ. ೨೦ ಅಂತರರಾಷ್ಟಿçÃಯ ಲಯನ್ಸ್ ಸಂಸ್ಥೆ, ಜಿಲ್ಲೆ ೩೧೭ರ ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಈಸ್ಟ್ ಪ್ರಾಜೆಕ್ಟ್ ಬೆಂಗಳೂರಿನ ಡಾ. ಎಸ್.ಆರ್. ಚಂದ್ರಶೇಖರ್ ವಾಕ್ ಮತ್ತು ಶ್ರವಣ ಸಂಸ್ಥೆ ಮತ್ತು ಮೈಸೂರು ಎಸ್.ಜೆ.ಎಸ್ ಚಾರಿಟೇಬಲ್ ಟ್ರಸ್ಟ್ ಹಾಗೂ ಶನಿವಾರಸಂತೆ ಭಾರತಿ ವಿದ್ಯಾಸಂಸ್ಥೆ ಇದರ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಸಮೀಪದ ಶನಿವಾರಸಂತೆ ಭಾರತಿ ವಿದ್ಯಾಸಂಸ್ಥೆ ಆವರಣದಲ್ಲಿ ಸಾರ್ವಜನಿಕರಿಗೆ ವಾಕ್ (ಮಾತು) ಮತ್ತು ಶ್ರವಣ (ಕಿವಿ) ಉಚಿತ ತಪಾಸಣಾ ಶಿಬಿರ ನಡೆಯಿತು.

ವಿದ್ಯಾಸಂಸ್ಥೆ ಆವರಣದಲ್ಲಿ ಸರಳವಾಗಿ ನಡೆದ ಶಿಬಿರವನ್ನು ಶನಿವಾರಸಂತೆ ಲಯನ್ಸ್ ಕ್ಲಬ್ ಅಧ್ಯಕ್ಷ ಕೆ.ಎನ್.ಕಾರ್ಯಪ್ಪ ಉದ್ಘಾಟಿಸಿ ಮಾತನಾಡಿ, ಲಯನ್ಸ್ ಸಂಸ್ಥಯ ಹಲವು ಯೋಜನೆಗಳಲ್ಲಿ ಆರೋಗ್ಯ ತಪಾಸಣಾ ಕಾರ್ಯಕ್ರಮವು ಒಂದಾಗಿದ್ದು ಈ ನಿಟ್ಟಿನಲ್ಲಿ ಲಯನ್ಸ್ ಸಂಸ್ಥೆ ವತಿಯಿಂದ ಶ್ರವಣ ಸಮಸ್ಯೆ ಹಾಗೂ ಮಾತಿನ ಸಮಸ್ಯೆ ಇರುವವರಿಗಾಗಿ ತಪಾಸಣಾ ಶಿಬಿರವನ್ನು ಆಯೋಜಿಸುತ್ತಿದ್ದು, ಈ ದಿಸೆಯಲ್ಲಿ ಸಾರ್ವಜನಿಕರು ಶಿಬಿರದ ಲಾಭ ಪಡೆದುಕೊಳ್ಳುವಂತೆ ಮನವಿ ಮಾಡಿದರು.

ಲಯನ್ಸ್ ಕ್ಲಬ್ ಖಜಾಂಜಿ ಬಿ.ಕೆ.ಚಿಣ್ಣಪ್ಪ ಶಿಬಿರದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ, ಶನಿವಾರಸಂತೆ ಲಯನ್ಸ್ ಕ್ಲಬ್ ಸಂಸ್ಥೆ ವತಿಯಿಂದ ಕಳೆದ ೫ ವರ್ಷಗಳಿಂದ ವಿವಿಧ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸಿಕೊಂಡು ಬರುತ್ತಿದೆ ರಕ್ತದಾನ ಶಿಬಿರ, ರಕ್ತದೊತ್ತಡ ತಪಾಸಣೆ ಸೇರಿದಂತೆ ಹಲವು ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜನೆ ಮಾಡುತ್ತಿರುವ ಮೂಲಕ ಈ ಭಾಗದಲ್ಲಿ ಜನಮನ್ನಣೆ ಗಳಿಸಿದೆ. ಈ ಬಾರಿ ಶ್ರವಣ ಮತ್ತು ವಾಕ್ ತಪಾಸಣಾ ಶಿಬಿರವನ್ನು ಸಂಬAಧ ಪಟ್ಟ ಆಸ್ಪತ್ರೆಯ ಸಹಯೋಗ ದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ಎಂ.ಆರ್.ನಿರAಜನ್, ಲಯನ್ಸ್ ಪದಾಧಿಕಾರಿಗಳಾದ ಎನ್.ಬಿ. ನಾಗಪ್ಪ, ಟಿ.ಆರ್.ಕೇಶವಮೂರ್ತಿ, ಜಿ.ಬಿ. ಪರಮೇಶ್, ಜಿ.ಎನ್. ನಾರಾಯಣಮೂರ್ತಿ, ಬಿ.ಸಿ.ಧರ್ಮಪ್ಪ, ಎಸ್.ಜೆ. ಅಶೋಕ್, ಜಿ.ಪಿ.ಪುಟ್ಟಪ್ಪ, ಬಿ.ಬಿ.ನಾಗರಾಜ್, ಮಹಮದ್ ಖನ್ನಾ, ಭಾರತಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಇ.ಎಂ.ದಯಾನAದ್. ಪ.ಪೂ. ಕಾಲೇಜು ಪ್ರಾಂಶುಪಾಲ ಅಶೋಕ್, ಲಯನ್ಸ್ ಕ್ಲಬ್ ಸದಸ್ಯರು ಹಾಜರಿದ್ದರು.

ಶಿಬಿರದಲ್ಲಿ ಡಾ. ಎಸ್.ಆರ್. ಚಂದ್ರಶೇಖರ್ ವಾಕ್ ಮತ್ತು ಶ್ರವಣ ಸಂಸ್ಥೆಯ ತಜ್ಞ ವೈದ್ಯರುಗಳಾದ ಡಾ.ಪೆಬ್ಬಾ, ಡಾ. ಯಾಂಗ್, ಡಾ.ಆಲ್ಕಾ, ಡಾ. ಒಮನಾ, ಡಾ. ಜಿಸ್ಮಾ, ಡಾ. ಜಮುನಿ ತಪಾಸಣೆ ನಡೆಸಿದರು. ಶಿಬಿರದಲ್ಲಿ ೨೦೦ ಕ್ಕಿಂತ ಹೆಚ್ಚಿನ ಪಲಾನುಭವಿಗಳು ತಪಾಸಣೆ ಮಾಡಿಸಿಕೊಂಡರು.