ಮಡಿಕೇರಿ, ಅ. ೨೦: ಒಕ್ಕಲಿಗ ಸಮುದಾಯ ವಿರುದ್ಧ ಭಗವಾನ್ ನೀಡಿರುವ ಹೇಳಿಕೆಯನ್ನು ಖಂಡಿಸಿರುವ ಮಡಿಕೇರಿ ತಾಲೂಕು ಒಕ್ಕಲಿಗರ ಸಂಘ ಭಗವಾನ್ ಗಡಿಪಾರಿಗೆ ಆಗ್ರಹಿಸಿದೆ.
ಜಿಲ್ಲಾಡಳಿತ ಭವನ ಎದುರು ಪ್ರತಿಭಟನೆ ನಡೆಸಿದ ಸಂಘದ ಸದಸ್ಯರು, ಭಗವಾನ್ ಹೇಳಿಕೆ ಒಕ್ಕಲಿಗ ಸಮುದಾಯದ ಭಾವನೆಯನ್ನು ಘಾಸಿಗೊಳಿಸಿದೆ. ಇಂತವರಿAದ ಸಮಾಜದಲ್ಲಿ ಅಶಾಂತಿ ಮೂಡುತ್ತದೆ. ಅಸಂಬದ್ಧ ಹೇಳಿಕೆ ನೀಡಿರುವ ಭಗವಾನ್ ವಿರುದ್ಧ ಕಾನೂನು ಕ್ರಮದೊಂದಿಗೆ ಗಡಿಪಾರು ಮಾಡಬೇಕೆಂದು ಆಗ್ರಹಿಸಿ ನಂತರ ಜಿಲ್ಲಾಡಳಿತ ಮೂಲಕ ರಾಜ್ಯ ಸರಕಾರ ಮನವಿ ಸಲ್ಲಿಸಲಾಯಿತು.
ಈ ಸಂದರ್ಭ ಮಡಿಕೇರಿ ತಾಲೂಕು ಅಧ್ಯಕ್ಷ ಮೋಹನ್, ವಿ.ಜಿ.ಕಾರ್ಯದರ್ಶಿ ಕುಶಾಲಪ್ಪ, ಜಿಲ್ಲಾ ಗೌರವ ಕಾರ್ಯದರ್ಶಿ ಬಸವರಾಜ್, ಖಜಾಂಚಿ ಕೆ.ರಮೇಶ್, ಕಾನೂನು ಸಲಹೆಗಾರರು ನಿರಂಜನ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ದೀಘÀðಕೇಶಿ ಶಿವಣ್ಣ, ನಿರ್ದೇಶಕರಾದ ಉಮೇಶ್ ಗೌಡ, ಮಂಜುನಾಥ್, ದೇವೇಂದ್ರ, ಧನಂಜಯ್ ಇತರರಿದ್ದರು.