ಮಡಿಕೇರಿ, ಅ. ೧೯: ಉರುಳು ಹಾಕಿ ಕಾಡುಕುರಿಯನ್ನು ಹತ್ಯೆ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಸಿಐಡಿ ಪೊಲೀಸ್ ಅರಣ್ಯ ಘಟಕ ಯಶಸ್ವಿಯಾಗಿದೆ.
ಕಡಗದಾಳಿನ ನಿವಾಸಿ ಸುರೇಂದ್ರನ್ (೬೩) ಬಂಧಿತ ಆರೋಪಿ. ಕಡಗದಾಳು ಗ್ರಾಮದ ಭಗವತಿ ದೇವರಕಾಡಿನಲ್ಲಿ ಈ ಕೃತ್ಯ ನಡೆದಿದ್ದು, ಆರೋಪಿಯನ್ನು ಬಂಧಿಸಿ ಮುಂದಿನ ಕ್ರಮಕೈಗೊಳ್ಳಲಾಗಿದೆ.
ಸಿಐಡಿ ಪೊಲೀಸ್ ಅರಣ್ಯ ಘಟಕದ ಎಸ್.ಪಿ. ಸುಧೀರ್ ಕುಮಾರ್ ರೆಡ್ಡಿ ಮಾರ್ಗದರ್ಶನ, ಮಡಿಕೇರಿ ಘಟಕದ ಅಧೀಕ್ಷಕ ಕಾಶಿ ಮಾರ್ಗದರ್ಶನ, ಅರಣ್ಯ ಸಂಚಾರಿ ದಳದ ಪಿಎಸ್ಐ ಸಿ.ಯು. ಸವಿ, ಮುಖ್ಯಪೇದೆಗಳಾದ ಶೇಖರ್, ರಾಘವೇಂದ್ರ, ಯೂಗೇಶ್, ಉಮೇಶ್, ಮೋಹನ್, ಪೇದೆ ಸ್ವಾಮಿ ಮತ್ತು ಮಂಜುನಾಥ್ ಇದ್ದರು.