ಮಡಿಕೇರಿ, ಅ. ೧೯: ನವರಾತ್ರಿ ಉತ್ಸವದ ಸಂಭ್ರಮದಲ್ಲಿರುವ ಮಡಿಕೇರಿ ಜನೋತ್ಸವ, ಹಲವಷ್ಟು ವೈವಿಧ್ಯಮಯ ಕಾರ್ಯಕ್ರಮಗಳಿಗೆ ಸಾಕ್ಷಿಯಾಗುತ್ತಿದ್ದು, ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ಮೂಡಿಬಂದ ಜಾನಪದ ದಸರಾ ಜನಪದೀಯ ಸಂಸ್ಕೃತಿಯ ಶ್ರೀಮಂತಿಕೆಯನ್ನು ಬಿಂಬಿಸುವಲ್ಲಿ ಯಶ ಕಂಡಿತು.
ಕರ್ನಾಟಕ ಜಾನಪದ ಪರಿಷತ್ ಕೊಡಗು ಘಟಕದ ಆಶ್ರಯದಲ್ಲಿ ಮಡಿಕೇರಿ ದಸರಾ ಸಮಿತಿಯ ಸಹಯೋಗದೊಂದಿಗೆ ಆಯೋಜನೆ ಗೊಂಡಿದ್ದ ಮೂರನೇ ವರ್ಷದ ಜಾನಪದ ದಸರಾ ಸಂಸ್ಕೃತಿಯ ಕೊಂಡಿಯAತಿರುವ ಜಾನಪದದ ವಿವಿಧ ಕಾರ್ಯಕ್ರಮಗಳು, ಮಣ್ಣಿನ ಸೊಗಡಿನ ಜನಪದ ಜೀವನ, ಸಾಹಿತ್ಯ, ಹಾಡು, ಪರಿಕರ, ವೇಷಭೂಷಣ, ಕಲೆಗಳ ಸಮ್ಮಿಲನದೊಂದಿಗೆ ದಸರಾಕ್ಕೆ ಹೆಚ್ಚಿನ ರಂಗು ತಂದಿತ್ತು.
ಉತ್ಸವದಲ್ಲಿ ಭಾಗಿಯಾಗಿ ಜನಪದೀಯ ಮನಸ್ಸುಗಳು ಸಂಭ್ರಮಿಸಿದವು. ಜಾನಪದ ದಸರಾ ಉತ್ಸವ ಆರಂಭದಿAದ ಅಂತ್ಯದವರೆಗೂ ಸಾಂಸ್ಕೃತಿಕ ವೈಭವವನ್ನು ಸಾಕ್ಷೀಕರಿಸಿತು. ಮೆರವಣಿಗೆ, ಸಭಾ ಕಾರ್ಯಕ್ರಮದ ಉದ್ಘಾಟನೆಯಿಂದ ಹಿಡಿದು ಕೊನೆಯ ಕಾರ್ಯಕ್ರಮ ದವರೆಗೂ ಜಾನಪದವು ತನ್ನ ಪ್ರಭಾವಳಿ ಬೀರಿತ್ತು.
ಮಂಗಳೂರು ರಸ್ತೆಯಲ್ಲಿರುವ ಪ್ರವಾಸಿ ಮಂದಿರದಿAದ ಗಾಂಧಿ ಮೈದಾನದವರೆಗೆ ಜಾನಪದ ಕಲಾತಂಡಗಳು, ಜಾನಪದೀಯ ಮನಸ್ಸುಗಳು, ಜಾನಪದ ವೇಷಭೂಷಣ ತೊಟ್ಟಿದ್ದ ಮಕ್ಕಳು, ಪರಿಷತ್ನ ಪದಾಧಿಕಾರಿಗಳು, ದಸರಾ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಸಾರ್ವಜನಿಕರು ಜಾನಪದ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ಮೆರವಣಿಗೆಗೆ ಡೊಳ್ಳು ಬಾರಿಸುವ ಮೂಲಕ ಜಿಲ್ಲಾಧಿಕಾರಿ ವೆಂಕಟ್ ರಾಜಾ ಚಾಲನೆ ನೀಡಿದರು. ನಂತರ ರಾಮನಗರದ ಡೊಳ್ಳು ಕುಣಿತ, ಪಟ ಕುಣಿತ, ಸಿದ್ದಾಪುರದ ಪುಟ್ಟ ಮಕ್ಕಳ ಚಂಡೆವಾದ್ಯದೊAದಿಗೆ ಜಿಲ್ಲಾಧಿಕಾರಿಗಳು, ನಗರ ಸಭೆ ಹಾಗೂ ದಸರಾ ಉತ್ಸವ ಸಮಿತಿ ಅಧ್ಯಕ್ಷೆ ಅನಿತಾ ಪೂವಯ್ಯ ಹಾಗೂ ೩ಐದನೇ ಪುಟಕ್ಕೆ
(ಮೊದಲ ಪುಟದಿಂದ) ಪದಾಧಿಕಾರಿಗಳು ಜಾನಪದ ಪರಿಷತ್ನ ಜಿಲ್ಲಾಧ್ಯಕ್ಷ ಅನಂತಶಯನ, ಜಾನಪದ ಪರಿಷತ್ನ ವಿವಿಧ ಘಟಕಗಳ ಪ್ರಮುಖರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.
ಕಲಾ ಸಂಭ್ರಮ ವೇದಿಕೆಯಲ್ಲಿ ಆಯೋಜನೆಗೊಂಡಿದ್ದ ಜಾನಪದ ದಸರಾ ಉತ್ಸವವನ್ನು ರಾಗಿ ಬೀಸುವ ಮೂಲಕ ಆರಂಭಿಸಲಾಯಿತು. ಹಿನ್ನೆಲೆಯಲ್ಲಿ ರಾಗಿ ಬೀಸುವ ಪದ, ಭತ್ತ ಕುಟ್ಟುವ ಪ್ರಾತ್ಯಕ್ಷಿಕೆ ಮೂಡಿಬಂದು ಉದ್ಘಾಟನೆಗೆ ಹೆಚ್ಚಿನ ಮೆರುಗು ನೀಡಿತು. ಕಾರ್ಯಕ್ರಮದ ನಡು ನಡುವೆ ಹಿರಿಯ ಲೇಖಕಿ ಅಂಬೆಕಲ್ ಸುಶೀಲ ಕುಶಾಲಪ್ಪ ಅವರು ಒಗಟುಗಳನ್ನು ಕೇಳಿ ವಿಜೇತರಿಗೆ ಬಹುಮಾನ ವಿತರಿಸಿದರು.
ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಕಲಾವಿದರು ಜಾನಪದ ನೃತ್ಯ, ಹಾಡುಗಾರಿಕೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಇದರೊಂದಿಗೆ ಜಾನಪದ ಪರಿಷತ್ನ ಯುವ ಘಟಕ ಮಡಿಕೇರಿ, ಸೋಮವಾರಪೇಟೆ, ಶನಿವಾರಸಂತೆ, ಮೂರ್ನಾಡು, ವೀರಾಜಪೇಟೆ, ಪೊನ್ನಂಪೇಟೆ, ಕುಶಾಲನಗರ ಘಟಕಗಳಿಂದ ಜಾನಪದ ನೃತ್ಯ, ಹಾಡುಗಾರಿಕೆ, ಕಲೆಗಳ ಪ್ರದರ್ಶನ ನಡೆಯಿತು.
ಸಭಾ ಕಾರ್ಯಕ್ರಮ ಉದ್ಘಾಟನೆ ಮಾಡಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ, ಸಂಸ್ಕೃತಿಯ ಕೊಂಡಿಯಾಗಿರುವ ಜಾನಪದ ಕಲೆ, ಜೀವನ ಪದ್ಧತಿ, ಆಚಾರ-ವಿಚಾರಗಳನ್ನು ಉಳಿಸಿ ಮುಂದಿನ ಪೀಳಿಗೆಗೂ ಹಸ್ತಾಂತರಿಸಬೇಕು ಎಂದರು.
ಈ ನೆಲದ ಬದುಕು, ಪರಂಪರೆ, ಹಬ್ಬ ಹರಿದಿನಗಳನ್ನು ಒಳಗೊಂಡ ಜಾನಪದ ಸಂಸ್ಕೃತಿಯ ಉಳಿವು ಅತ್ಯವಶ್ಯವಾಗಿ ನಡೆಯಬೇಕಾಗಿದ್ದು, ಇದಕ್ಕಾಗಿ ಇದರ ಕುರಿತ ತಿಳುವಳಿಕೆಯನ್ನು ಯುವ ಪೀಳಿಗೆಗೆ ನೀಡುವುದು ಅತ್ಯವಶ್ಯ ಎಂದರು.
ಮಡಿಕೇರಿ ದಸರಾ ಸಮಿತಿ ಅಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ, ಜಾನಪದ ದಸರಾ ಉತ್ಸವ ಮೂಲಕ ಮರೆಯಾಗಿ ಹೋಗುತ್ತಿರುವ ನಮ್ಮ ಜಾನಪದ ಬದುಕು, ಸಂಸ್ಕೃತಿಯನ್ನು ಮುನ್ನೆಲೆಗೆ ತರುವ ಶ್ಲಾಘನೀಯ ಕಾರ್ಯ ನಡೆಯುತ್ತಿದೆ.
ಮುಂಜಾನೆಯಿAದ ಸಂಜೆಯವರೆಗಿನ ಗ್ರಾಮಿಣ ಬದುಕಿನ ಪ್ರತಿಯೊಂದು ಹಂತದಲ್ಲಿಯೂ ಜಾನಪದದ ಸೊಗಡನ್ನು ಕಾಣಬಹುದಾಗಿದೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷರಾದ ಬಿ.ಜಿ. ಅನಂತಶಯನ, ಪರಸ್ಪರ ಪ್ರೀತಿ, ವಿಶ್ವಾಸ, ಮಮಕಾರ, ಸೌಹಾರ್ದತೆಗಳನ್ನು ಹೃದಯದಿಂದ ಹೃದಯಕ್ಕೆ ಹಂಚುವ ಶಕ್ತಿ ಮತ್ತು ಚೈತನ್ಯ ಜಾನಪದಕ್ಕಿದೆ. ಇತರರನ್ನು ವಿಶ್ವಾಸದಿಂದ ಕಂಡು ಪ್ರೀತಿ, ಸೌಹಾರ್ದತೆಗಳನ್ನು ತೋರುವ ಮನಸ್ಥಿತಿ ಅತ್ಯಂತ ಸಹಜವಾಗಿ ಜಾನಪದ ಸಂಸ್ಕೃತಿಯಲ್ಲಿ ಅಂತರ್ಗತವಾಗಿದೆ. ಇಂತಹ ಜಾನಪದ ಸಂಸ್ಕೃತಿಯನ್ನು ಸಂರಕ್ಷಿಸಿಕೊAಡು ಮುನ್ನಡೆಯಬೇಕೆನ್ನುವ ಆಶಾ ಭಾವನೆ ವ್ಯಕ್ತಪಡಿಸಿದರು.
ಕೊಡಗು ಜಿಲ್ಲಾ ಜಾನಪದ ಪರಿಷತ್ಗೆ ಕಟ್ಟಡವೊಂದನ್ನು ಒದಗಿಸುವಂತೆ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿ, ಬೇಡಿಕೆ ಈಡೇರಿಸಿದಲ್ಲಿ ಜಾನಪದ ಮ್ಯೂಸಿಯಂ ಮಾಡುವುದಾಗಿ ತಿಳಿಸಿದರು.
ವೇದಿಕೆಯಲ್ಲಿ ಮಡಿಕೇರಿ ದಸರಾ ಸಮಿತಿ ಉಪಾಧ್ಯಕ್ಷೆ ಸವಿತಾ ರಾಕೇಶ್, ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ ರಾಜೇಶ್ ಯಲ್ಲಪ್ಪ, ಖಜಾಂಚಿ ಅರುಣ್ ಶೆಟ್ಟಿ, ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಸ್.ಸಿ. ಸತೀಶ್, ನಗರಸಭಾ ಸದಸ್ಯರಾದ ಶಾರದಾ ನಾಗರಾಜ್, ಕೆ.ಎಸ್.ರಮೇಶ್, ಸಬಿತಾ ಜಾನಪದ ಪರಿಷತ್ ಉಪಾಧ್ಯಕ್ಷರಾದ ಅಂಬೆಕಲ್ ಕುಶಾಲಪ್ಪ, ಜಾನಪದ ಪರಿಷತ್ ವಿವಿಧ ಘಟಕಗಳ ಅಧ್ಯಕ್ಷರುಗಳಾದ ಸುಜಲಾ ದೇವಿ, ಟೋಮಿ ಥೋಮಸ್, ಪ್ರಕಾಶ್, ಚಂದ್ರಮೋಹನ್, ಪ್ರಶಾಂತ್, ದಿಲನ್ ಚಂಗಪ್ಪ ಇನ್ನಿತರರಿದ್ದರು.
ಜಾನಪದ ಪರಿಷತ್ನ ಪ್ರಧಾನ ಕಾರ್ಯದರ್ಶಿ ಎಸ್.ಐ.ಮುನೀರ್ ಅಹಮ್ಮದ್ ಕಾರ್ಯಕ್ರಮ ನಿರೂಪಿಸಿದರೆ, ಜಾನಪದ ಪರಿಷತ್ ಮಡಿಕೇರಿ ತಾಲೂಕು ಅಧ್ಯಕ್ಷ ಅನಿಲ್ ಎಚ್.ಟಿ. ಸ್ವಾಗತಿಸಿದರು. ಜಿಲ್ಲಾ ಖಜಾಂಚಿ ಸಂಪತ್ ಕುಮಾರ್ ವಂದಿಸಿದರು.
ಜಾನಪದ ವಸ್ತು ಪ್ರದರ್ಶನ- ಮೂರ್ನಾಡು ಜಾನಪದ ಪರಿಷತ್ ಘಟಕದ ಪದಾಧಿಕಾರಿ ಕಿಗ್ಗಾಲು ಹರೀಶ್ ಅವರು ಇದೇ ಸಂದರ್ಭ ಆಯೋಜಿಸಿದ್ದ ಅತ್ಯಪರೂಪದ ಜಾನಪದ ಪರಿಕರಗಳ ಪ್ರದರ್ಶನ ಗಮನ ಸೆಳೆಯಿತು. ಬೊಂಬೆ ಜೋಡಣೆ ಸ್ಪರ್ಧೆ ಮತ್ತು ಕಥೆ ಹೇಳುವ ಸ್ಪರ್ಧೆಗಳ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಬೊಂಬೆ ಜೋಡಣೆ ಸ್ಪರ್ಧೆಯಲ್ಲಿ ಮಾಲಾ ರೋಶನ್ ಮತ್ತು ಶುಭಾ ವಿಶ್ವನಾಥ್ ಪ್ರಥಮ, ನೀತು ಮತ್ತು ಸವಿತಾ ರಾಕೇಶ್ ದ್ವಿತೀಯ, ಹೇಮಾ ರಘ ತೃತೀಯ ಬಹುಮಾನ ಪಡೆದುಕೊಂಡರು. ಕಥೆ ಹೇಳುವ ಸ್ಪರ್ಧೆಯಲ್ಲಿ ಭಾಗೀರಥಿ ಹುಲಿತಾಳ ಪ್ರಥಮ, ಪ್ರಮೀಳಾ ರಮೇಶ್ ದ್ವಿತೀಯ ಮತ್ತು ನಗರದ ಸಂತ ಜೋಸೆಫರ ಶಾಲೆಯ ಅನಘ ತೃತೀಯ ಬಹುಮಾನ ಸ್ವೀಕರಿಸಿದರು.