ಕೂಡಿಗೆ, ಅ ೧೯: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದ ಹಾರಂಗಿ ನದಿ ದಂಡೆಯಲ್ಲಿ ಹಗಲು ವೇಳೆ ಕಾಡಾನೆಗಳ ಹಿಂಡು ಕಾಣಿಸಿಕೊಂಡಿವೆ.

೧೦ಕ್ಕೂ ಹೆಚ್ಚು ಕಾಡಾನೆಗಳು ಬೆಂಡೆಬೆಟ್ಟ ಮೀಸಲು ಅರಣ್ಯದಿಂದ ಮರಿಯಾನೆಗಳೊಂದಿಗೆ ಲಗ್ಗೆಯಿಟ್ಟು ೧೦ ಕ್ಕೂ ಅಧಿಕ ಕಾಡಾನೆಗಳ ಹಿಂಡು ಹಾರಂಗಿ ನದಿಗೆ ಇಳಿದು ದಾಹ ತಣಿಸಿಕೊಂಡು ವಿಶ್ರಮಿಸುತ್ತಿರುವ ದೃಶ್ಯ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ.

ಈ ಭಾಗದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು ನಿರಂತರವಾಗಿ ಬೆಳೆ ಹಾನಿ ಉಂಟಾಗುತ್ತಿದ್ದು, ಇದೀಗ ಈ ಕಾಡಾನೆಗಳ ಹಿಂಡನ್ನು ಕಂಡ ರೈತರು ಮತ್ತಷ್ಟು ಆತಂಕಗೊAಡಿದ್ದಾರೆ. ದಾಹ ತಣಿಸಿಕೊಂಡು ಬೆಂಡೆ ಬೆಟ್ಟದ ಮೀಸಲು ಅರಣ್ಯ ಪ್ರದೇಶದತ್ತ ತೆರಳಿದವು.