ಗುಡ್ಡೆಹೊಸೂರು, ಅ. ೧೯: ಇಲ್ಲಿಗೆ ಸಮೀಪದ ನಂಜರಾಯಪಟ್ಟಣ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎರಡನೇ ಬಾರಿಗೆ ಬಲ್ಲಡಿಚಂಡ ಮುರುಳಿ ಮಾದಯ್ಯ, ಉಪಾಧ್ಯಕ್ಷರಾಗಿ ಅನಿತಾ ಎಸ್.ಬಿ. ಅವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ೧೩ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ೧೨ ಸ್ಥಾನದಲ್ಲಿ ೧೨ ಸ್ಥಾನವು ಬಿ.ಜೆ.ಪಿ. ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಮನು ಮಹೇಶ್, ಕಾರ್ಯಪ್ಪ ಎಸ್.ಎಸ್, ಪಂಚಾಕ್ಷರಿ ಎನ್.ಸಿ., ಕಾಶಿ ಬಿ.ಎನ್., ಧನಪಾಲ್ ಬಿ.ಎಸ್., ಚೆಟ್ಟಿಮಾಡ ಲೀಲಾವತಿ, ಕೆ.ಕೆ. ರಾಜಪ್ಪ, ವಿ.ಎಸ್.. ಕಳಂಜನ ದಾದಪ್ಪ, ಕೃಷ್ಣ ಹೆಚ್.ಜೆ., ಆರ್.ಕೆ. ಚಂದ್ರ, ಟಿ.ಕೆ. ಉದಯ ಕುಮಾರ್ ಆಯ್ಕೆಯಾಗಿದ್ದರು.